News Kannada
Thursday, December 01 2022

ಮೈಸೂರು

ಸೋಲಿಗ ಸಮುದಾಯದ ಪ್ರಥಮ ಪಿಹೆಚ್‌ಡಿ ಪಧವೀಧರೆಗೆ ಕೆಎಸ್‌ಒಯು ಪ್ರೊಫೆಸರ್‌ ಆಗುವ ಆಸೆ - 1 min read

Photo Credit :

ಮೈಸೂರು: ಪಿಎಚ್‌ಡಿ ಪದವಿ ಪಡೆದ ಸೋಲಿಗ ಸಮುದಾಯದ ಪ್ರಥಮ ಮಹಿಳೆ ಎಸ್. ರತ್ನಮ್ಮ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ.
ಈ ಸಂಬಂಧ ಸಂದರ್ಶನಕ್ಕೆ ಹಾಜರಾದ ಎಸ್.ರತ್ನಮ್ಮ ಈ ಹುದ್ದೆಗೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮದ್ದೂರು ಗಿರಿಜನ ಕಾಲೋನಿ (ಎಸ್‌ಟಿ ಕಾಲೋನಿ) ನಿವಾಸಿ ರತ್ನಮ್ಮ ಅವರಿಗೆ ೨೦೧೯ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ನೀಡಲಾಗಿದೆ.ಸೋಲಿಗ ಅಲೆಮಾರಿ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಪತಿ ದೊಡ್ಡಯ್ಯ ಅವರೊಂದಿಗೆ ಸಮಾಜಸೇವೆಯಲ್ಲಿ ತೊಡಗಿರುವ ರತ್ನಮ್ಮ ಮೈಸೂರು ವಿಶ್ವವಿದ್ಯಾಲಯದಿಂದ ಎಂಎ(ಸಮಾಜಶಾಸ್ತ್ರ), ಮಹಿಳಾ ಅಧ್ಯಯನ ಡಿಪ್ಲೊಮಾ ಮತ್ತು ಬಿಎ ಪದವಿಗಳನ್ನು ಪಡೆದಿದ್ದಾರೆ.

See also  ಮೈಸೂರು ಅತ್ಯಾಚಾರ ಪ್ರಕರಣ: ಮಕ್ಕಳನ್ನು ಎನ್‌ಕೌಂಟರ್ ಮಾಡಬೇಡಿ ಎಂದ ಆರೋಪಿಗಳ ಪೋಷಕರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು