ಮೈಸೂರು : ರಾಜ್ಯ ಸರಕಾರದ ಅಡಳಿತದ ಮೇಲೆ ಆರ್ ಎಸ್ಎಸ್ ಯಾವುದೇ ಒತ್ತಡ ಹೇರುತ್ತಿಲ್ಲ ಎಂದು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಅರ್ ಎಸ್ ಎಸ್ ಕುರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಗೆ ತಿರುಗೇಟು ನೀಡಿದ ಸಚಿವ ಸೋಮಶೇಖರ್, ಕುಮಾರಸ್ವಾಮಿ ರವರಿಗೆ ಮಾಹಿತಿ ಕೊರತೆ ಇದೆ.ಇದು ಚುನಾವಣಾ ದೃಷ್ಟಿಯಿಂದ ಹೇಳುತ್ತಿರಬಹುದು. ರಾಜ್ಯ ಸರಕಾರದಲ್ಲಿ ಯಾವುದೇ ಒತ್ತಡವೂ ಇಲ್ಲ,ಕೇಂದ್ರ ಸರಕಾರದ್ದು ನನಗೆ ಗೊತ್ತಿಲ್ಲ ಎಂದು ಸಚಿವ ಸೋಮಶೇಖರ್ ಹೇಳಿದರು.