ಮೈಸೂರು: ಚಳಿಗಾಲ ಆರಂಭ ಆಗಿದ್ದು ರಾತ್ರಿ ಹೊತ್ತು ರಸ್ತೆಯಲ್ಲಿ ಮಲಗುವ ನಿರ್ಗತಿಕರು, ಬೀದಿ ಬದಿವ್ಯಾಪಾರಸ್ಥರು ಹಾಗೂ ಬಡವರ್ಗದ ಜನರು ಚಳಿಯಿಂದ ನಡುಗುವಂತಾಗಿದೆ.
ಇದನ್ನು ಅರಿತ ಕೆ ಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರವು ಹೊದಿಕೆ ವಿತರಣಾ ಅಭಿಯಾನ ಹಮ್ಮಿಕೊಂಡು ಹಲವರಿಗೆ ಹೊದಿಕೆಗಳನ್ನು ವಿತರಿಸಿತು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸರವರು ನಿರಾಶ್ರಿತರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೀದಿಬದಿ ವ್ಯಾಪರಸ್ಥರು ನಿರಾಶ್ರಿತರಿಗೆ ಹಲವಾರು ಯೋಜನೆಗಳನ್ನು ನೀಡಿದೆ ಅದನ್ನು ಉಪಯೋಗ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಬೀದಿಬದಿ ವ್ಯಾಪರಸ್ಥರಿಗೆ ಅಶಕ್ತರಿಗೆ ನಿರಾಶ್ರಿತರ ನೆರವಿಗೆ ತಂದರೂ ಸಹ ಸಮರ್ಪಕವಾಗಿ ತಲಪುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಫಲಾನುಭಾವಿಗಳಿಗೆ ತಲುಪುವವರೆಗೂ ಶ್ರಮಿಸಬೇಕು, ನಗರ ಮಟ್ಟದಲ್ಲಿ ನಿರ್ಮಿತಿ ಕೇಂದ್ರಗಳು ಕೇವಲ ಬಂದಿಖಾನೆ ಎಂಬ ಕಲ್ಪನೆ ನಿರಾಶ್ರಿತರಲ್ಲಿ ಬರಬಾರದು ಅದೊಂದು ಮನಃಪರಿವರ್ತನ ಕೇಂದ್ರವಾಗಿ ಕಾಣುವ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.
ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್ ಆರ್ ಮಹಾದೇವಸ್ವಾಮಿ ಮಾತನಾಡಿ ಮೈಸೂರಲ್ಲಿರುವ ನಿರಾಶ್ರಿತರ ಪೈಕಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘ ಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಕೆ.ಶಂಕರ್, ಉಮೇಶ್, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ನಿಗಮ ಮಂಡಳಿ ರಾಜ್ಯ ನಿರ್ದೇಶಕಿ ರೇಣುಕರಾಜ, ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು, ಕೆ ಆರ್ ಎಸ್ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಅಪೂರ್ವ ಸುರೇಶ್, ಕೆಎಂಪಿಕೆ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಮಹೇಂದ್ರ ಶೈವ, ರಾಕೇಶ್ ಕುಂಚಿಟಿಗ, ಸುಚೀಂದ್ರ ಹಾಜರಿದ್ದರು