News Kannada
Wednesday, December 07 2022

ಮೈಸೂರು

ಮ್ಯಾನ್ಹೋಲ್ಗಿಳಿದು ಕಾರ್ಮಿಕ ಮೃತಪಟ್ಟ ಘಟನೆಗೆ ಸರ್ಕಾರದ ನಿರ್ಲಕ್ಷ್ಯ ಕಾರಣ : ಎಎಪಿ

Photo Credit :

ಮ್ಯಾನ್ಹೋಲ್ಗೆ ಇಳಿದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿಯ ಮೈಸೂರು ಜಿಲ್ಲಾ ಘಟಕ ಸಂತಾಪ ಸೂಚಿಸಿದ್ದು, 2013ರ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ನಿರ್ಲಕ್ಷ್ಯ ತೋರಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಿದೆ.

ಘಟನೆ ಸಂಬಂಧ ಪತ್ರಿಕಾ ಹೇಳಿಕೆ ಹೊರಡಿಸಿರುವ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷರಾದ ಮಾಲವಿಕ ಗುಬ್ಬಿವಾಣಿ, “ಪಿರಿಯಾಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ ಮಧುರವರು ಮ್ಯಾನ್ಹೋಲ್ಗೆ ಇಳಿದು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವುದು ಅಮಾನವೀಯ ಸಂಗತಿ. ರಾಜ್ಯ ಸರ್ಕಾರ ಅಥವಾ ಪಿರಿಯಾಪಟ್ಟಣ ಪುರಸಭೆಯು ಅವರ ಕುಟುಂಬದ ಒಬ್ಬರಿಗಾದರೂ ಸರ್ಕಾರಿ ಉದ್ಯೋಗ ನೀಡಿ ನೆರವಾಗಬೇಕು. ಯಾವುದೇ ಮುನ್ನೆಚ್ಚರಿಕೆಯಿಲ್ಲದೇ ಅವರನ್ನು ಮ್ಯಾನ್ಹೋಲ್ಗೆ ಇಳಿಸಿದವರ ವಿರುದ್ಧ ಕಠಿಣಕ್ರಮ ಕೈಕೊಳ್ಳಬೇಕು” ಎಂದು ಆಗ್ರಹಿಸಿದರು.

“ಮನುಷ್ಯರನ್ನು ಶೌಚಗುಂಡಿಗೆ ಇಳಿಸಿ ಸ್ವಚ್ಛಗೊಳಿಸುವ ಪ್ರಕರಣಗಳು ಮರುಕಳಿಸುತ್ತಿರುವುದು ನಾಚಿಕೆಗೇಡಿನ ವಿಷಯ. 2013ರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಆಕ್ಟ್ ಪ್ರಕಾರ ಇದು ನಿಷೇಧವಾಗಿದ್ದರೂ, ಕಾನೂನನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯಾಗುತ್ತಿಲ್ಲ. ಕಾಯಿದೆಯನ್ನು ಜಾರಿಗೆ ತರುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಗತ್ಯವಿರುವ ಸಮಯಕ್ಕೆ ಸರಿಯಾಗಿ ಸಕ್ಕಿಂಗ್ ಯಂತ್ರಗಳನ್ನು ಪೂರೈಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗುತ್ತಿರುವುದು ಕೂಡ ಇಂತಹ ಘಟನೆಗಳು ಮರುಕಳಿಸಲು ಕಾರಣ” ಎಂದು ಮಾಲವಿಕ ಗುಬ್ಬಿವಾಣಿ ಹೇಳಿದರು.

“ಮನುಷ್ಯರನ್ನು ಶೌಚಗುಂಡಿಗೆ ಇಳಿಸುವ ಸಮಸ್ಯೆಯನ್ನು ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮ್ಯಾನ್ಹೋಲ್ಗೆ ಮನುಷ್ಯರನ್ನು ಇಳಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದ ಭಾರತದ ಮೊದಲ ಸರ್ಕಾರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ 200ಕ್ಕೂ ಹೆಚ್ಚು ಯಂತ್ರಗಳನ್ನು ದೆಹಲಿಯು ಹೊಸದಾಗಿ ಅಳವಡಿಸಿಕೊಂಡಿದೆ. ಅಲ್ಲಿನ ಎಎಪಿ ಸರ್ಕಾರವು ಈ ಯಂತ್ರಗಳ ಮಾಲೀಕತ್ವವನ್ನು ಪೌರ ಕಾರ್ಮಿಕರ ಕುಟುಂಬಗಳಿಗೆ ನೀಡಿದೆ.

ಯಂತ್ರದ ಬೆಲೆಯ ಶೇ. 10ರಷ್ಟನ್ನು ಮಾತ್ರ ಅವರಿಂದ ಪಡೆದು, ಉಳಿದ ಮೊತ್ತವನ್ನು ಬ್ಯಾಂಕ್ ಸಾಲವೆಂದು ಪರಿಗಣಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೆಹಲಿ ಮಾದರಿಯಲ್ಲಿ ಕರ್ನಾಟಕದಲ್ಲೂ ಸೂಕ್ತ ವ್ಯವಸ್ಥೆ ಜಾರಿಗೆ ಬರಬೇಕು” ಎಂದು ಮಾಲವಿಕ ಗುಬ್ಬಿವಾಣಿ ಆಗ್ರಹಿಸಿದರು.

See also  ಗುಜರಾತ್‌ನಲ್ಲಿ ಎಎಪಿ ಗೆದ್ದರೆ ಅಯೋಧ್ಯೆಗೆ ಉಚಿತ ತೀರ್ಥಯಾತ್ರೆ: ಕೇಜ್ರಿವಾಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು