News Kannada
Monday, December 05 2022

ಮೈಸೂರು

ನಂಜನಗೂಡು: ಉತ್ತಮ ರಸ್ತೆ ನಿರ್ಮಾಣಕ್ಕೆ ಶಾಸಕರ ಮನವಿ

Photo Credit :

ನಂಜನಗೂಡು: ನಂಜನಗೂಡಿನ ಹುಲ್ಲಹಳ್ಳಿ ರಸ್ತೆ ಯಿಂದ  ದೇವಿರಮ್ಮನಹಳ್ಳಿ ರಸ್ತೆಗೆ   ಸಂಪರ್ಕ ಕಲ್ಪಿಸುವ ರಸ್ತೆಯ 60 ಅಡಿಯನ್ನು  ನಗರಸಭೆಯವರು  40 ಅಡಿಗೆ ಸೀಮಿತಗೊಳಿಸುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ತೆರಳಿದ ಶಾಸಕ ಹರ್ಷವರ್ಧನ್  ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ  ಒಂದು ಕೋಟಿ ಮೂವತ್ತು ಲಕ್ಷ   ವೆಚ್ಚದಲ್ಲಿ  ಉತ್ತಮ ರಸ್ತೆ ಮಾಡಲು ಅನುದಾನ ಬಿಡುಗಡೆ ಮಾಡಿದ್ದೇನೆ.

ಈ ಬಗ್ಗೆ ಯಾರಿಗೂ  ಗೊಂದಲ ಬೇಡ ನಕ್ಷೆಯಲ್ಲಿ ಏನಿದೆಯೋ ಗೊತ್ತಿಲ್ಲ. ಈಗ ಎದ್ದಿರುವ ಗೊಂದಲನ್ನು ಬಗೆಹರಿಸುವಂತೆ ತಾಲೂಕು ದಂಡಾಧಿಕಾರಿಗೆ ತಿಳಿಸಿದ್ದು, ಉತ್ತಮ ರಸ್ತೆಯ ಅಗತ್ಯವಾಗಿರುವುದರಿಂದ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಪ್ರಜ್ಞಾವಂತ ನಾಗರಿಕ ಪಡೆಯ ಅಧ್ಯಕ್ಷ ಸತೀಶ್, ನಂಜನಗೂಡು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ  ಕೆಂಪೇಗೌಡ, ಪತ್ರಕರ್ತ ಚಿಕ್ಕಣ್ಣ .  ಆರ್.ಟಿ.ಎ  ಹೋರಾಟಗಾರ ವಿಜಯ ಕುಮಾರ್,  ರೈತ ಮುಖಂಡ ಬೊಕ್ಕಹಳ್ಳಿ ನಂಜುಂಡಸ್ವಾಮಿ,  ರವಿಕೀರ್ತಿ, ಕರವೇ  ಮುಖಂಡ ಶ್ರೀನಿವಾಸ್, ಸುನೀಲ್, ಚಲವಾದಿ ಅಧ್ಯಕ್ಷ ಯಶವಂತ್, ಯುವ ಮುಖಂಡ  ವೆಂಕಟೇಶ, ಸಿ ಬಸವರಾಜ ಸೇರಿದಂತೆ ಹಲವರು ಭಾಗವಹಿಸಿದ್ದರು.

See also  ರೈಲ್ವೆ ಮೈಸೂರು ವಿಭಾಗದಿಂದ ಸುರಕ್ಷತಾ ಅಭಿಯಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು