News Kannada
Sunday, May 15 2022
ಮೈಸೂರು

ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಉಚಿತ ಜ್ವರ ತಪಾಸಣೆ

Photo Credit : News Kannada

ಮೈಸೂರು : ನಗರದ ಮಂಡಿ ಮೊಹಲ್ಲಾ ಸಾಡೇ ರಸ್ತೆಯಲ್ಲಿರುವ ಸಿ.ಎಸ್.ಐ ಹೋಲ್ಡ್ಸ್ ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಜನವರಿ 26ರಿಂದ ಫೆಬ್ರವರಿ 15ರವರೆಗೆ ಉಚಿತ ಜ್ವರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮಿಷನ್ ಆಸ್ಪತ್ರೆ ನಿರ್ದೇಶಕ ವಿನ್ಸೆಂಟ್ ಪಾಲಣ್ಣ ರವರು ಜನವರಿ ಸಂದರ್ಭದಲ್ಲಿ ವಿಪರೀತ ತಂಡಿಗಾಳಿ ಮತ್ತು ಚಳಿಯ ವಾತಾವರಣವಿರುವ ಕಾರಣ ವೈಜ್ಞಾನಿಕವಾಗಿ ಹಿರಿಯ ನಾಗರಕರು ಸೇರಿದಂತೆ ಪ್ರತಿಯೊಬ್ಬರ ಆರೋಗ್ಯದಲ್ಲೂ ಏರುಪೇರಾಗುತ್ತಿದ್ದು, ಶೀತ, ಜ್ವರ, ನೆಗಡಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ತಪಾಸಣೆ ಮಾಡಿದರೆ ಕೊರೊನಾ ಪಾಸಿಟಿವ್ ಬಂದರೆ ವೈದ್ಯಕೀಯ ಚಿಕಿತ್ಸೆ ದರ ದುಬಾರಿಯಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಜ್ವರ ತಪಾಸಣೆ ಹಾಗೂ ಸರಿಯಾದ ಸಮಯಕ್ಕೆ ಔಷಧಿ ಪಡೆಯಲು ಹಿಂಜರಿಯುತ್ತಿದ್ದಾರೆ.

ಆದರೆ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು, ಯಾವುದೇ ರೀತಿಯಲ್ಲಿ ಭಯಪಡದೆ ವೈದ್ಯರ ಸಲಹೆ ಮತ್ತು ತಪಾಸಣೆ ಮಾಡಿಸಿಕೊಂಡು ಮುಂಜಾಗ್ರತಾ ಕ್ರಮ ಪಾಲಿಸ ಬೇಕು ಎಂದು ಸಲಹೆ ನೀಡಿದರಲ್ಲದೆ, ನಮ್ಮ ಸಿ ಎಸ್ ಐ ಮಿಷನ್ ಆಸ್ಪತ್ರೆಯಿಂದ ಉಚಿತ ಜ್ವರ ತಪಾಸಣಾ ಶಿಬಿರವನ್ನ ಹಮ್ಮಿಕೊಂಡಿದ್ದು, ಈ ವೇಳೆ ವೈದ್ಯರು ಸಲಹೆ ಮತ್ತು ಜ್ವರ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಸೌಲಭ್ಯವನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.