News Kannada
Tuesday, September 27 2022

ಮೈಸೂರು

ಮೈಸೂರಿನ ಐತಿಹಾಸಿಕ ಮುಡುಕುತೊರೆ ಜಾತ್ರೆ ರದ್ದು - 1 min read

Photo Credit :

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಓಮಿಕ್ರಾನ್ ರೂಪಾಂತರ ವೈರಸ್ ಉಲ್ಬಣವಾಗುತ್ತಿರುವುದು ಆತಂಕಕಾರಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಜನ ಸೇರುವ ಜಾತ್ರೆಗಳನ್ನು ಈಗಾಗಲೇ ನಿಷೇಧಿಸಲಾಗಿದೆ. ಅದರಂತೆ ಸುಮಾರು ಹದಿನೇಳು ದಿನಗಳ ಕಾಲ ನಡೆಯಬೇಕಾಗಿದ್ದ ಮುಡುಕುತೊರೆ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಲಾಗಿದೆ.

ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಮುಡುಕುತೊರೆಯಲ್ಲಿ  ಫೆ.03ರಿಂದ 19ರವರೆಗೆ ಶ್ರೀ ಭಮರಾಂಭ ಸಮೇತ ಶ್ರೀ ಮಲ್ಲಿಕಾರ್ಜುನ ದೇವಾಲಯದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಜಾತ್ರೆಗೆ ಸ್ಥಳೀಯರು ಮಾತ್ರವಲ್ಲದೆ, ಹೊರಗಿನಿಂದಲೂ ಜನ ಸೇರುತ್ತಿದ್ದು, ಪ್ರತಿದಿನವೂ ಒಂದೊಂದು ವಿಶೇಷತೆಯಿದ್ದು, ಇಲ್ಲಿ ದನಗಳ ಜಾತ್ರೆ, ರಥೋತ್ಸವ ಹೀಗೆ ವೈಭವವಾಗಿ ನಡೆಯುತ್ತದೆ.

ಆದರೆ ಈ ಬಾರಿ ಈ ಸಮಯದಲ್ಲಿ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಾತ್ರೆ ನಡೆದರೆ ಕೊರೊನಾ ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಜಿಲ್ಲಾಡಳಿತ ಜಾತ್ರೆಯನ್ನು ರದ್ದು ಗೊಳಿಸಿದೆ. ಈ ಬಗ್ಗೆ ಶ್ರೀ ವೈದ್ಯನಾಥೇಶ್ವರ ಹಾಗೂ ಸಮೂಹ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್.ಬಿ.ನಟೇಶ್ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ಹೆಚ್.ಬಿ.ನಟೇಶ್ ಅವರು ಸರ್ಕಾರದ ಆದೇಶದ ಅನ್ವಯ ಜಾತ್ರೆಗಳು, ಹಬ್ಬಗಳು, ಮೆರವಣಿಗೆಗಳು ಮತ್ತು ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಇಲ್ಲದಿರುವುದರಿಂದ ಜಾತ್ರಾ ಮಹೋತ್ಸವವನ್ನು ಕಾರ್ಯಕ್ರಮಗಳನ್ನು ದೇವಾಲಯದ ಒಳಪ್ರಾಂಗಣದಲ್ಲಿ ಸರಳವಾಗಿ ಮತ್ತು ಸಾಂಪ್ರದಾಯಬದ್ದವಾಗಿ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಪಾಲಿಸಲು ಹಾಗೂ ಮಾಸ್ಕ್ ಧರಿಸಿ ಕೋವಿಡ್-19ರ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದ್ದು, ಅದರಂತೆ ಭಕ್ತಾಧಿಗಳು, ದನ-ಕರುಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

See also  ಮಟ್ಕಾ ಹಾಗೂ ಕ್ರಿಕೆಟ್ ದಂಧೆಯನ್ನು ನಡೆಸುತ್ತಿದ್ದ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು