News Kannada
Friday, September 30 2022

ಮೈಸೂರು

ಮೈಸೂರಿನಲ್ಲಿ ಪಕ್ಷಿಪ್ರಿಯರನ್ನು ಸೆಳೆದ ಪಕ್ಷಿವೀಕ್ಷಣೆ ಕಾರ್ಯಕ್ರಮ - 1 min read

Photo Credit :

ಮೈಸೂರು: ಮೈಸೂರ್ ಸೈನ್ಸ್ ಫೌಂಡೇಷನ್ ಮತ್ತು ಅರಣ್ಯ ಔಟ್‌ರಿಚ್ ಸಹಯೋಗದಲ್ಲಿ ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆ ಕಾರ್ಯಕ್ರಮವನ್ನು ಪಕ್ಷಿಪ್ರಿಯರ ಗಮನಸೆಳೆಯಿತು.

ಸುಮಾರು ನಲುವತ್ತಕ್ಕೂ ಹೆಚ್ಚು ಪಕ್ಷಿ ಪ್ರಿಯರು ಕೆರೆಯ ಬಳಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿ ಪಟ್ಟರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಕ್ಷಿಪ್ರೇಮಿಗಳಿಗೆ  ಸಂಪನ್ಮೂಲ ವ್ಯಕ್ತಿ, ವನ್ಯಜೀವಿ ಛಾಯಾಗ್ರಾಹಕರು ಮತ್ತು ಹವ್ಯಾಸಿ ಪಕ್ಷಿತಜ್ಞರಾದ ಎಮ್.ಕೆ.ಸಪ್ತಗಿರೀಶ್‌ ಹಲವು ರೀತಿಯ ಮಾಹಿತಿಗಳನ್ನು ನೀಡಿದರು. ಅದರಂತೆ ಪಕ್ಷಿಗಳು ಕೆರೆಗಳಿಗೆ ಬರಬೇಕಾದರೆ ಕೆರೆಯ ಪರಿಸರ ಚೆನ್ನಾಗಿರಬೇಕು. ಕೆರೆಗೆ ಪ್ಲಾಸ್ಟಿಕ್ ಬಾಟಲ್, ಕವರ್, ಮೋರಿ ನೀರು ಬಿಡುವುದು ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಬದಿಗಳನ್ನು ತೆಗೆದು ಕಲ್ಲುಗಳಿಂದ ಮುಚ್ಚಿಸುವುದು ಕೆರೆಯ ದಾರಿಗಳನ್ನು ಡಾಂಬರೀಕರ ಮಾಡುವುದು, ಇವುಗಳಿಂದ ಕೆರೆಯ ಜೀವವೈವಿಧ್ಯತೆ ಹಾಳಾಗುತ್ತದೆ ಮತ್ತು ಅಲ್ಲಿಗೆ ಪಕ್ಷಿಗಳು ಬರುವುದಿಲ್ಲ ಎಂದರು.

ಪಕ್ಷಿಗಳನ್ನು ಗುರುತಿಸಬೇಕಾದರೆ ಅವುಗಳ ರೆಕ್ಕೆ, ಕತ್ತು, ಬಣ್ಣ, ಬಾಲ, ಕೂಕ್ಕು, ಮೈಮೇಲಿನ ಚುಕ್ಕೆಗಳು, ಕಾಲು ಇವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ನೋಡಲು ಒಂದೇ ರೀತಿಯ ಹಕ್ಕಿಗಳೆನಿಸಿದರೂ ಅವುಗಳಲ್ಲಿರುವ ಸಣ್ಣ ವ್ಯತ್ಯಾಸಗಳಿಂದ ಬೇರೆ ಬೇರೆಯಾಗಿರುತ್ತವೆ, ಆದ್ದರಿಂದ ಪಕ್ಷಿಗಳನ್ನು ಗುರುತಿಸಲು ಪ್ರಾರಂಭಿಸುವ ವಿದ್ಯಾರ್ಥಿಗಳು ಒಂದು ಬೈನಾಕ್ಯುಲರ್ ಮತ್ತು ಪಕ್ಷಿಗಳ ಗೈಡ್ ಹೊಂದಿದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಪಕ್ಷಿಗಳ ಜೊತೆಗೆ ಕೆರೆಯ ಮಹತ್ವವನ್ನು ಅರಿಯಬೇಕು. ಕೆರೆಗಳು ಸೂಕ್ಷ್ಮಾಣು ಜೀವಿಗಳಿಂದ ದೊಡ್ಡ ಪ್ರಾಣಿ ಪಕ್ಷಿಗಳಿಗೆ ವಾಸಸ್ತಾನವನ್ನು ಕಲ್ಪಿಸಿ ಜೀವವೈವಿಧ್ಯತೆಯನ್ನು ಕಾಪಾಡುತ್ತವೆ. ಕೆರೆಗಳ ಹತ್ತಿರದ ಆಹ್ಲಾದಕರ ವಾತಾವಾರಣ, ಅಲ್ಲಿನ ಅಚ್ಚಹಸಿರು ಮತ್ತು ಪಕ್ಷಿಗಳನ್ನು ನೋಡುತ್ತ ಮನುಷ್ಯತನ್ನ ಒತ್ತಡಗಳನ್ನು ಮರೆಯುತ್ತಾನೆ. ಇಂತಹ ಮಹತ್ವ ಪೂರ್ಣವಾದ ಕೆರೆಗಳನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಬೇಕಾದದು ನಮ್ಮ ಕರ್ತವ್ಯ ಎಂದರು.  ನಗರೀಕರಣದಿಂದಾಗಿ ಈಗಾಗಲೇ ನಾವು ಸಾಕಷ್ಟು ಕೆರೆಗಳನ್ನು ಕಳೆದುಕೊಂಡಿದ್ದೇವೆ ಇನ್ನು ಉಳಿದಿರುವ ಕೆರೆಗಳನ್ನು ಉಳಿಸಿಕೊಳ್ಳಲು ನಾವು ಇಂತಹ ಪಕ್ಷಿವೀಕ್ಷಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಾಬೇಕಾಗಿದೆ ಎಂದರು.

ಈ ವೇಳೆ ಕಾಜಾಣ ನೀರುಕಾಗೆ, ಗೌಜಲಕ್ಕಿ, ಪಾರಿವಾಳ, ಕಾಡುಕೋಳಿ, ಬಕ, ಮೈನಾ, ಕೊಕ್ಕರೆ, ಪೆಲಿಕಾನ್, ಗ್ರೆ ಹೆರಾನ್, ಬ್ಲಾಕ್‌ಕಿಕ್, ಗ್ರೆ ಹಾರ್ನ್ ಬಿಲ್,  ಜಕೋಬಿಯನ್ ಕುಕು, ಸನ್ ಬರ್ಡ್, ಮೊದಲಾದ 55ಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸುವಲ್ಲಿ ಪಕ್ಷಿಪ್ರಿಯರು ಯಶಸ್ವಿಯಾದರು.

ಕಾರ್ಯಕ್ರಮದಲ್ಲಿ ಮೈಸೂರ್ ಸೈನ್ಸ್ ಫೌಂಡೇಷನ್ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್, ಸದಸ್ಯರಾದ ಎಚ್.ಎಸ್ ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.

See also  ಯುವಜನತೆ ಅಪ್ಪು ಮಾದರಿಯಲ್ಲಿ ಅಂಗಾಂಗ ದಾನ ಮಾಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು