News Kannada
Tuesday, November 29 2022

ಮೈಸೂರು

ಮೈಸೂರು: ಪತ್ನಿಯ ಸಾವಿಂದ ಕಂಗೆಟ್ಟ ಪತಿ ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣು - 1 min read

Thirthahalli: Rowdy-sheeter Cobra Suhail attempts suicide by consuming poison
Photo Credit : IANS

ಮೈಸೂರು : ಪತ್ನಿಯನ್ನು ಸಾವಲ್ಲೂ ಪತಿ ಹಿಂಬಾಲಿಸಿದ್ದು, ಪುಟ್ಟ ಮಕ್ಕಳಿಬ್ಬರು ಅನಾಥವಾಗಿದ್ದಾರೆ. ಇಬ್ಬರ ಸಾವಿಂದ ಕಂಗೆಟ್ಟ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಆಟವಾಡುತ್ತಾ ಮಧ್ಯೆ ಮಧ್ಯೆ ‘ನನ್ನ ಅಪ್ಪ-ಅಮ್ಮ ಎಲ್ಲಿಗೋದ್ರು? ಯಾವಾಗ ಬರ್ತಾರೆ ಅಂಕಲ್​?’ಎಂದು ಪುಟ್ಟ ಕಂದ ಕೇಳುತ್ತಿದ್ದ ದೃಶ್ಯ ಮನಕಲಕುತ್ತೆ.

ಇಂತಹ ಕರುಣಾಜನಕ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಸಂಭವಿಸಿದೆ. ಹಂಚ್ಯಾ ಗ್ರಾಮದ ಮಹೇಶ್ ಜತೆ ಗಾಯತ್ರಿ ಎಂಬುವರು ಮದುವೆ ಆಗಿದ್ದರು. ಇವರ ದಾಂಪತ್ಯ ಅನ್ಯೋನ್ಯವಾಗಿತ್ತು. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಎಲ್ಲವೂ ಚೆನ್ನಾಗಿದೆ, ಸುಖ ಸಂಸಾರಕ್ಕೆ ಮತ್ತೇನು ಬೇಡ ಎಂಬಂತೆ ಬದುಕುತ್ತಿದ್ದವರ ಬಾಳಲ್ಲಿ ವಿಧಿ ಆಟವಾಡಿಬಿಟ್ಟಿದೆ.

ಎರಡು ತಿಂಗಳ ಹಿಂದೆ ಮಹೇಶ್ ಪತ್ನಿ ಗಾಯತ್ರಿ ಬಿಪಿ ಮಾತ್ರೆಯ ಬದಲಾಗಿ ಬೇರೆ ಮಾತ್ರ ಸೇವಿಸಿ ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಿಯ ಮಡದಿಯ ಸಾವಿಂದ ಕಂಗೆಟ್ಟ ಪತಿ ಮಹೇಶ್​, ನಿತ್ಯ ನೋವಿನಿಂದಲೇ ಬಳಲುತ್ತಿದ್ದ. ಪತ್ನಿಯ ಸಾವಿನ ನೋವು ಸಹಿಸಲಾಗದೇ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದ. ಆಗ ಸ್ಥಳೀಯರು ಆತನನ್ನು ತಡೆದಿದ್ದರು. ಮನೆಯವರು ಧೈರ್ಯ ತಂದುಕೊಳ್ಳುವಂತೆ ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.

ಇಂದು(ಭಾನುವಾರ) ತೋಟವೊಂದರಲ್ಲಿ ಗಿಡಕ್ಕೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಸಾವಿನ ಮನೆಯ ಕದ ತಟ್ಟಿದ್ದಾನೆ. ಕ್ರಿಮಿನಾಶಕ ಕುಡಿದು ಸಹೋದರನಿಗೆ ಕರೆ ಮಾಡಿದ ಮಹೇಶ್​, ‘ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೋ… ನನಗೆ ಗಾಯತ್ರಿ ನೆನಪು ಕಾಡುತ್ತಿದೆ. ನಾನು ಅವಳ ಬಳಿಗೇ ಹೋಗುತ್ತಿರುವೆ’ ಎಂದಿದ್ದಾನೆ. ಕೂಡಲೇ ಸ್ಥಳಕ್ಕೆ ಓಡೋಡಿ ಬಂದ ಕುಟುಂಬಸ್ಥರು ಮಹೇಶ್​ನನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.

See also  ಕರ್ನಾಟಕ ರಾಜ್ಯದಾದ್ಯಂತ ಸುತ್ತಾಟದಲ್ಲಿರುವ “ಓಲ್ಡ್‌ ಮಾಂಕ್‌’ ಚಿತ್ರತಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು