News Kannada
Saturday, December 03 2022

ಮೈಸೂರು

ವಿದ್ಯಾವರ್ಧಕ ಹಾಸ್ಟೆಲ್ ಗೆ ಬಂತು ಅತ್ಯಾಧುನಿಕ  ಅಡುಗೆ ಮನೆ

Photo Credit :

ಮೈಸೂರು: ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ   ಹಾಸ್ಟೆಲ್ ನಲ್ಲಿ ದೇಶದಲ್ಲೇ ಅತಿ ಆಧುನಿಕ ಎನ್ನ ಬಹುದಾದ ಅಡುಗೆ ಮನೆಯನ್ನು ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಗಮನಸೆಳೆಯುತ್ತಿದೆ.

ಸಾಮಾನ್ಯವಾಗಿ ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸುವ ಸಂದರ್ಭ ಹಾಸ್ಟೆಲ್ ವ್ಯವಸ್ಥೆ ಮತ್ತು ಅಲ್ಲಿ ನೀಡಲಾಗುವ ಊಟದ ಬಗ್ಗೆ ವಿಚಾರಣೆ ಮಾಡುತ್ತಾರೆ.

ಹೀಗಾಗಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯವು  ತಮ್ಮ ಹಾಸ್ಟೆಲ್ ನಲ್ಲಿರುವ  ವಿದ್ಯಾರ್ಥಿಗಳಿಗಾಗಿ “ಮನೆ ಊಟದ ”  ಅನುಭವ ಸಿಗಬೇಕು ಎನ್ನುವ ಉದ್ದೇಶದಿಂದ  ತಂತ್ರ ಜ್ಞಾನದ ಅಡುಗೆ ಮನೆಯನ್ನು ನಿರ್ಮಿಸಿದೆ.

ಈ ಅಡುಗೆ ಮನೆಯನ್ನು ಬೆಂಗಳೂರಿನ ಡಾಲರ್  ಇಂಜಿನಿಯರಿಂಗ್ ಸಂಸ್ಥೆಯು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಯಾಂತ್ರಿಕವಾಗಿ ನಿರ್ಮಿಸಿದೆ.  ಈ  ಅಡುಗೆ ಮನೆಯಲ್ಲಿ ಅತಿ ಶುಚಿ ರುಚಿಯ ಅಡುಗೆಯನ್ನು ಅತ್ಯಂತ ಮಿತ ಇಂಧನ ಖರ್ಚಿನೊಂದಿಗೆ  ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಲಾಗುತ್ತಿದೆ.

ಈ ಅಡುಗೆ ಮನೆಯ ವಿಶೇಷತೆ ಏನೆಂದರೆ, ಇಲ್ಲಿ ಬಹುತೇಕ ಅಡುಗೆ  ತಯಾರಿಕೆಯ ಪ್ರಕ್ರಿಯೆಗಳು ಯಾಂತ್ರಿಕವಾಗಿದ್ದು, ಶುಚಿ ರುಚಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಯೋವೇಸ್ಟ್ ನಿರ್ವಹಣೆಗೆ ಕೂಡ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಇಂಧನ ಮಿತವ್ಯಯ, ಅತಿ ಕಡಿಮೆ ಮಾನವ ಹಸ್ತಕ್ಷೇಪ.

ಅತ್ಯಾಧುನಿಕ ಅಡುಗೆ ಪರಿಕರಗಳು ಈ ಅಡುಗೆ ಮನೆ ವಿಶೇಷತೆ. ದೋಸೆ, ಇಡ್ಲಿ, ವಡೆ, ಪೋಡಿ,  ಹೀಗೆ ವಿದ್ಯಾರ್ಥಿಗಳ ಇಷ್ಟದ ತಿಂಡಿ ತಿನಸುಗಳನ್ನು ಇಲ್ಲಿ ಸುಲಭವಾಗಿ ತಯಾರಿಸಬಹುದಾಗಿದೆ. ವಿಶೇಷ ಭಕ್ಷ್ಯಗಳನ್ನೂ ಸುಲಭವಾಗಿ ತಯಾರಿಸಬಹುದಾಗಿದೆ. ಈ ಅಡುಗೆ ಮನೆಯ ಇನ್ನೊಂದು ವಿಶೇಷತೆ ಎಂದರೆ, ಇದೊಂದು ಕೇಂದ್ರೀಕೃತ ಅಡುಗೆ  ಶುಚಿಯಾಗಿ ಕಳುಹಿಸಬಹುದಾಗಿದೆ.

ಈ ಬಗ್ಗೆ ಮಾತನಾಡಿದ   ಸಂಸ್ಥೆಯ ಮುಖ್ಯಸ್ಥ ಕೆ ಪಿ ಜಯಪ್ರಕಾಶನ್ ಇಂತಹ ಅತ್ಯಾಧುನಿಕ ಅಡುಗೆ ಮನೆಯನ್ನು   ವಿದ್ಯಾರ್ಥಿ ನಿಲಯದಲ್ಲಿ ನಿರ್ಮಿಸಲು ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು ತಯಾರಿರುವುದಿಲ್ಲ. ಆದರೆ, ತಮ್ಮ ವಿದ್ಯಾರ್ಥಿಗಳ ಮೇಲಿನ ಅತೀವ ಕಾಳಜಿಯಿಂದ ಇದೀಗ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಇಂತಹ ಅತ್ಯಾಧುನಿಕ ಅಡುಗೆ ಮನೆ ನಿರ್ಮಿಸಿದೆ ಎಂದು  ತಿಳಿಸಿದ್ದಾರೆ.

ಇಂತಹ ಅಡುಗೆ ಮನೆಗಳು ದಾಸೋಹ ಒದಗಿಸುತ್ತಿರುವ ಮಠಗಳಿಗೆ, ದೇಗುಲಗಳಿಗೆ ಸೂಕ್ತವಾಗಿದ್ದು ಇವುಗಳಲ್ಲಿ ಇಂಧನ  ಉಳಿತಾಯ ಸಾಧ್ಯವಿದೆ ಜೊತೆಗೆ  ಭಕ್ತರಿಗೆ  ಅತಿ ಶುಚಿತ್ವದಿಂದ ಅಡುಗೆ ತಯಾರಿಸಲು ಸಾಧ್ಯವಿದೆ. ಇವುಗಳ ನಿರ್ವಹಣೆ ಕೂಡ ಸುಲಭ.  ಯಾವುದೇ ಬಗೆಯ ತಿಂಡಿ ತಿನಸುಗಳನ್ನು ಇಲ್ಲಿ ಅತಿ  ಬೇಗವಾಗಿ ತಯಾರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

See also  ಮಾವಿನಕಾಯಿ ಚಿತ್ರಾನ್ನ ಮಾಡಿ ನೋಡಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು