News Kannada
Thursday, December 08 2022

ಮೈಸೂರು

ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ ಪುಣ್ಯಸ್ನಾನ

Photo Credit :

ತಿ.ನರಸೀಪುರ: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ಸಹಸ್ರಾರು ಮಂದಿ ಭಕ್ತಾಧಿಗಳು ಪುಣ್ಯ  ಸ್ನಾನ‌ ಮಾಡಿ ದೇವರ ದರ್ಶನ ಪಡೆದು ಕೊಂಡರು.

ತಾಲೂಕಿನ ದೊಡ್ಡ ಜಾತ್ರೆ ಎಂದೇ ಪ್ರಸಿದ್ದವಾದ ಯುಗಾದಿ ಜಾತ್ರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸ್ಥಗಿತ ಗೊಂಡಿತ್ತು. ಆದರೆ ಈ ಬಾರಿ ಕೋರೋನಾ ಹಾವಳಿ‌ ಇಲ್ಲದ ಹಿನ್ನೆಲೆಯಲ್ಲಿ ಪಟ್ಟಣದ ಕಾವೇರಿ- ಕಪಿಲಾ ಸ್ಪಟಿಕ ಸರೋವರ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ನಿರೀಕ್ಷೆಗೂ ಮೀರಿದ ಭಕ್ತ ಸಮೂಹ ಜಮಾಯಿಸಿ ನದಿಯಲ್ಲಿ ಮಿಂದು ಶ್ರದ್ಧೆ-ಭಕ್ತಿಯೊಂದಿಗೆ ಪೂಜೆ ಸಲ್ಲಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನ ಪುರ ಶ್ರೀ ಧರೆಗೆ ದೊಡ್ಡವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ ಮತ್ತೆ ಪಟ್ಟಣಕ್ಕೆ ವಾಪಸ್ ಬಂದು ವಾಸ್ತವ್ಯ ಹೂಡಿ ಅಲ್ಲೇ ಪರಿಷೆ ಮಾಡುತ್ತಾರೆ. ಯುಗಾದಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿಯೇ ಮನೆ ಬಿಡುವ ಸಹಸ್ರಾರು ಭಕ್ತಾಧಿಗಳು ಕೆ.ಆರ್.ನಗರ ತಾಲೂಕು ಕಪ್ಪಡಿಗೆ ಹೋಗಿ ರಾಚಪ್ಪಾಜಿ ದೇವರಿಗೆ ಪೂಜೆ ಸಲ್ಲಿಸಿ ಹಬ್ಬದ ದಿನ ನದಿಯಲ್ಲಿ ಸ್ನಾನ ಮಾಡಿ ನಂತರ ತಮ್ಮ ಮನೆಗಳಿಗೆ ತೆರಳಿದರು.

ಕಪ್ಪಡಿಗೆ ಹೋದವರು ಮಾತ್ರವಲ್ಲದೇ ದೇವರ ಧೀಕ್ಷೆ ಪಡೆದ ನೀಲಗಾರರು, ಮಹದೇಶ್ವರ ಸ್ವಾಮಿ, ಮಂಟೇಸ್ವಾಮಿ, ಕಾಲ ಭೈರವೇಶ್ವರ, ಮುಡುಕುತೊರೆ ಪಾರ್ವತಿ ಮಲ್ಲಪ್ಪನ ಧೀಕ್ಷೆ ಪಡೆದ ಗುಡ್ಡಪ್ಪಂದಿರು ತಮ್ಮ ಜೋಳಿಗೆ, ಜಾಗಟೆ, ಕಂಸಾಳೆ ಹಾಗೂ ಮನೆ ದೇವರುಗಳ ದೇವಸ್ಥಾನದ ವಿಗ್ರಹ ಮೂರ್ತಿಗಳನ್ನು ಸಂಗಮದಲ್ಲಿ ಸ್ವಚ್ಚಗೊಳಿಸಿ ಮಠಕ್ಕೆ ತೆರಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಗ್ರಾಮಗಳಿಗೆ ಕೊಂಡೊಯ್ಯಲಾಯಿತು.

See also  ರಾಮನಗರದಲ್ಲಿ ಭಾವೈಕ್ಯತೆಯ ಯುಗಾದಿ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು