News Kannada
Saturday, May 14 2022
ಮೈಸೂರು

ಮೈಸೂರಿನಲ್ಲಿ ಗಮನಸೆಳೆಯುತ್ತಿದೆ ಅಮೃತತುಲ್ಯ ಚಹಾ

Photo Credit : News Kannada

ಮೈಸೂರು : ನಗರಕ್ಕೊಂದು ಸುತ್ತು ಹೊಡೆದರೆ ಒಂದೆರಡಲ್ಲ ಸಾವಿರಾರು ಟೀ ಅಂಗಡಿಗಳು ನೋಡಲು ಸಿಗುತ್ತವೆ. ಈ ಟೀ ಅಂಗಡಿಗಳ ನಡುವೆ ಹೈಟೆಕ್ ಆರೋಗ್ಯಯುತ ಟೀ ಅಂಗಡಿ ಗಮನಸೆಳೆಯುತ್ತಿದೆ. ಅದುವೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿ.

ಇಲ್ಲಿ ತಯಾರು ಮಾಡುವ ಟೀ ನಲ್ಲಿ ಶುಂಠಿ, ಪುದಿನಾ, ಏಲಕ್ಕಿ, ಇನ್ನಿತರೇ ಸ್ವದೇಶಿ ಮಸಾಲೆ ಪದಾರ್ಥಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಹಾಕಿ ತಯಾರಿಸಲಾಗುತ್ತದೆ. ಇದರಿಂದ ಸಾಮಾನ್ಯವಾಗಿ ಟೀ ಕುಡಿದರೆ, ಯಾವುದೇ ಅಸಿಡಿಟಿಯಾಗಲೇ ಇನ್ನಿತರೆ ತೊಂದರೆಗಲಾಗಲೀ, ಆರೋಗ್ಯದಲ್ಲಿ ಅಡ್ಡಪರಿಣಾಮಗಳಾಗಲೀ ಆಗುವುದಿಲ್ಲ ಎನ್ನುವುದು ಮಾಲೀಕರಾದ ಸತೀಶ್ ಭಟ್ ಅವರ ಭರವಸೆಯ ಮಾತಾಗಿದೆ.

ಈ ಟೀಯನ್ನು ಮಾಮೂಲಿನಂತೆ ತಯಾರು ಮಾಡುವುದಿಲ್ಲ ಜತೆಗೆ ಟೀ ಪುಡಿಯನ್ನು ಕೂಡ ಉತ್ಕೃಷ್ಟ ದರ್ಜೆಯದನ್ನೇ ಬಳಸಲಾಗುತ್ತದೆ. ಮಸಾಲೆ ಪದಾರ್ಥಗಳನ್ನು ಕೂಡ ನಿಯಮಿತವಾಗಿ ಬಳಸಿ ಹಿತ್ತಾಳೆ ಪಾತ್ರೆಯಲ್ಲಿ ಎಲ್ಲಾ ಮಿಶ್ರಣವನ್ನು ಹಾಕಿ ಅದೇ ಪಾತ್ರೆಯಲ್ಲಿ ಚಹಾ ತಯಾರಿಸುವುದರಿಂದ ಜತೆಗೆ ವೈಜ್ಞಾನಿಕ ಅಳತೆಯನ್ನು ಟೀ ಮಾಡಲು ಬಳಸುತ್ತಿರುವುದು ವಿಶೇಷವಾಗಿದ್ದು, ಇದುವೇ ವಿಶಿಷ್ಟ ರುಚಿಯನ್ನು ನೀಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.