News Kannada

ಮೈಸೂರು

ಪದವೀಧರರ ಧ್ವನಿಯಾಗಲು ಸಹಕರಿಸುವಂತೆ ದುಂಬಾಲು! - 1 min read

ಮೈಸೂರು: ದಕ್ಷಿಣ ಪದವೀಧರ ಚುನಾವಣೆ ರಂಗೇರಿದೆ. ಈಗಾಗಲೇ ಅಭ್ಯರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದ್ದು, ಇದೀಗ ತಮ್ಮ ಅಭ್ಯರ್ಥಿಗಳ ಪರ ಪಕ್ಷದ ನಾಯಕರು ಕಣಕ್ಕಿಳಿದಿದ್ದಾರೆ.

ಅದರಂತೆ  ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅವರ ಪರವಾಗಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಖಾಡಕ್ಕೆ ಇಳಿದಿದ್ದು, ಹುಣಸೂರಿನಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಅವರು, ಕ್ರಿಯಾಶೀಲ ವ್ಯಕ್ತಿತ್ವದ ಮೈ.ವಿ.ರವಿಶಂಕರ್ ಅವರನ್ನು ಪದವೀಧರ ಮತದಾರರು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಬಾರಿ ಮೈ.ವಿ.ರವಿಶಂಕರ್ ಕೆಲ ಮತಗಳ ಅಂತರದಲ್ಲಿ ಸೋತರೂ ನಾಲ್ಕು ಜಿಲ್ಲೆಗಳಲ್ಲೂ ಪಕ್ಷ ಸಂಘಟನೆ ಜೊತೆಗೆ  ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿ ಪಕ್ಷವು ಮತ್ತೆ ಟಿಕೆಟ್ ನೀಡಿದೆ. ರಾಷ್ಟ್ರ-ರಾಜ್ಯಮಟ್ಟದ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇವರ ಪರಿಶ್ರಮ, ತಾಳ್ಮೆ, ಬದ್ದತೆಯ ವ್ಯಕ್ತಿತ್ವದ ಗುಣದಿಂದಾಗಿ ಎಲ್ಲರ ಅಚ್ಚು ಮೆಚ್ಚಿನ ಅಭ್ಯರ್ಥಿಯಾಗಿದ್ದು, ಎಲ್ಲೆಡೆ ಉತ್ತಮ ಅಭಿಪ್ರಾಯ, ಬೆಂಬಲ  ಕಂಡು ಬರುತ್ತಿದ್ದು, ತಾಲೂಕಿನ ಪದವೀಧರ ಮತದಾರರು ಬೆಂಲಿಸುವಂತೆ ಮನವಿ ಮಾಡಿದ್ದಾರೆ.

See also  ರಸ್ತೆ ಬದಿ ವ್ಯಾಪಾರಿಗಳಿಗೆ ಮೈಸೂರು ವಿತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು