News Kannada
Tuesday, July 05 2022

ಮೈಸೂರು

ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಜಾರಿಗೆ ಮನವಿ - 1 min read

Photo Credit :

ಮೈಸೂರು: ಮೈಸೂರು ಬ್ರಾಹ್ಮಣ ಸಂಘದಿಂದ ಕೇಂದ್ರ ಸರ್ಕಾರ ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ  ಅನುಷ್ಠಾನಕ್ಕೆ ತಂದಿದ್ದು ಅದನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವಂತೆ ಕೇಂದ್ರ ಸಚಿವ  ಪ್ರಹಲ್ಲಾದ್ ಜೋಷಿ ರವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮೈಸೂರು  ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಅವರು, ಕೇಂದ್ರ ಸರ್ಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ದೇಶದಲ್ಲಿ ವಾಸವಾಗಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನಮ್ಮ‌ ಕರ್ನಾಟಕದಲ್ಲಿ  ಸಂಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ, ಶಿಕ್ಷಣ ಉದ್ಯೋಗ ಆರೋಗ್ಯ ಸೇರಿದಂತೆ ಸರ್ಕಾರಿ ಸವಲತ್ತಿನ ಸೇವೆ ಮತ್ತು ಹಕ್ಕು ಪಡೆಯಲು ಈ ಮೀಸಲಾತಿ ಅರ್ಥಿಕವಾಗಿ ಹಿಂದುಳಿದ ಬಡಜನಾಂಗದವರಿಗೆ ಉಪಯೋಗವಾಗುತ್ತದೆ. 145ಕ್ಕೂ ಹೆಚ್ಚು ಜಾತಿ ಶೇ.10ರಷ್ಟು ಮೀಸಲಾತಿ ಅಡಿಯಲ್ಲಿ ಬರುತ್ತದೆ ಅದರಲ್ಲಿ ನಮ್ಮ‌ ಬ್ರಾಹ್ಮಣ ಜನಾಂಗವೂ ಸಹ ಹೌದು ಈ ಯೋಜನೆ ಘೋಷಣೆ ಮತ್ತು ಪಾರ್ಲಿಮೆಂಟ್ ನಿರ್ಣಯವಾಗಿ 3ವರ್ಷ ಕಳೆದರೂ ಸಹ ಇಲ್ಲಿಯವರೆಗೆ ಕರ್ನಾಟಕದ ಮಂದಿಗೆ ಸಿಗದಿರುವುದು ಬೇಸರದ ಸಂಗತಿ ಹಾಗಾಗಿ ತಾವುಗಳು ಇದರ ಬಗ್ಗೆ  ಕೇಂದ್ರ ಸರ್ಕಾರದೊಂದಿಗೆ ಕಾನೂನಾತ್ಮಕವಾಗಿ ಚರ್ಚಿಸಿ ಕರ್ನಾಟಕದ ಮಂದಿಗೆ ಉಪಯುಕ್ತವಾಗುವಂತೆ ರಾಜ್ಯ ಸರ್ಕಾರ ವತಿಯಿಂದ ನಿರ್ಣಯ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಮನವಿ  ಮಾಡಿದರು.

ಮನವಿ‌ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹಲ್ಲಾದ್ ಜೋಷಿ‌ ರವರು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ‌  ಬೊಮ್ಮಾಯಿ ರವರೊಂದಿಗೆ ಚರ್ಚಿಸಿ ಕಾನೂನಾತ್ಮಕವಾಗಿ ತೊಡುಕಾಗಿದ್ದರೆ ಅದರ ಬಗ್ಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು

ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಎಂ.ಆರ್.ಬಾಲಕೃಷ್ಣ, ನಗರ ಪಾಲಿಕಾ ಸದಸ್ಯ  ಮಾ.ವಿ.ರಾಮ್ ಪ್ರಸಾದ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರ, ಕೆಎಂ ನಿಶಾಂತ್ ವಿನಯ್ ಕಣಗಾಲ್, ಟಿ ಎಸ್ ಅರುಣ್, ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ರಾಜಗೋಪಾಲ್ ರಾವ್, ಡಾ. ಲಕ್ಷ್ಮಿ, ಜ್ಯೋತಿ, ಲತಾ ಬಾಲಕೃಷ್ಣ, ಹೇಮಲತಾ, ಮಂಜುನಾಥ್, ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.

See also  ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ವಿವಾಹವಾಗಿದ್ದ ಯುವಕನ ಬಂಧನ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು