ಮೈಸೂರು: ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸಲು ಮತ್ತು ಇತ್ತೀಚಿನ ಸಂಶೋಧನೆ, ಸಮಾಜದ ಸವಾಲುಗಳು ಮತ್ತು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿನ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ರಾಜ್ಯ ಮಟ್ಟದ ತಾಂತ್ರಿಕ ಹಬ್ಬ “ಆವಾಗಮ” ನಡೆಯಿತು.
ತಾಂತ್ರಿಕ ಹಬ್ಬದ ಅಂಗವಾಗಿ ತಾಂತ್ರಿಕ ಪ್ರಾಜೆಕ್ಟ್ ಪ್ರದರ್ಶನ ಮತ್ತು ಡಿಜಿಟಲ್ ಪೋಸ್ಟರ್ ಪ್ರಸ್ತುತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳ ಕ್ಯಾಪ್ ಸ್ಟೋನ್ ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಎಟಿಎಂಇಸಿಇ, ಇಇಇ ವಿಭಾಗದ ಯಾಸೀನ್ ಉಲ್ಲಾ ಖಾನ್, ಫವಾಜ್ ಅಹಮದ್ ಎನ್ ಎಸ್, ಭರತ್ ಎಸ್, ಮಾನಸ ಎಚ್ ಪಿ, ಮೈಸೂರು ಅವರು ಪ್ರಸ್ತುತಪಡಿಸಿದ ಮೀನುಗಾರರ ಸ್ವಯಂ ಚಾಲನಾ ಪಾರುಗಾಣಿಕಾ ಸಾಧನ ಎಂಬ ಯೋಜನೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ವಿವಿಇಟಿ ಇಇಇ ವಿಭಾಗದ ಯಶಸ್ ಎಂ ಸಿ, ಅನಿತಾ, ವಿನಾಯಕ್ ಆರ್ ಶೀರಿ, ಯಶಸ್ ಎಂ ಸಿ, ಪ್ರಸ್ತುತಪಡಿಸಿದ ಆಹಾರ ಧಾನ್ಯ ಸಂಗ್ರಹ ನಿರ್ವಹಣಾ ವ್ಯವಸ್ಥೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಎಟಿಎಂಇಸಿಇ, ಮೈಸೂರು ಇಇಇ ವಿಭಾಗದ ಪ್ರವೀಣ್ ಗೌಡ ಎಸ್ ಬಿ, ಪ್ರಜ್ವಲ್ ಎಸ್, ಚರಣ್ ಎಂ ವಿ, ಭಾನುಪ್ರಕಾಶ್, ಅವರು ಪ್ರಸ್ತುತಪಡಿಸಿದ ನ್ಯೂ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ 3 ನೇ ಸ್ಥಾನವನ್ನು ಪಡೆದುಕೊಂಡಿದೆ.
ಇತ್ತೀಚಿನ ತಂತ್ರಜ್ಞಾನಗಳ ಡಿಜಿಟಲ್ ಪೋಸ್ಟರ್ ಪ್ರಸ್ತುತಿಯಲ್ಲಿ, ಎಟಿಎಂಇಸಿಇ, ಇಇಇ ವಿಭಾಗದ ಮೊಹಮ್ಮದ್ ಇಸ್ಮಾಯಿಲ್, ನೂರ್ ಕಾಮಿಲ್, ಮೊಹಮ್ಮದ್ ಅಶ್ಫಾಕ್, ಮೊಹಮ್ಮದ್ ಸೈಯದ್ ಯಾಕೂಬ್, ಇಇಇ ವಿಭಾಗ, ಎಟಿಎಂಇಸಿಇ, ಮೈಸೂರು ಅವರು ಪ್ರಸ್ತುತಪಡಿಸಿದ ಪಾರ್ಕಿನ್ಸನ್ ಡಿಸಾರ್ಡರ್‌ಗಾಗಿ ಸೆಫ್ ಸ್ಟೆಬಿಲೈಸಿಂಗ್ ಸ್ಪೂನ್‌ಗೆ ಪ್ರಥಮ ಸ್ಥಾನವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಂ ಎಚ್ ಸಿದ್ರಾಮ ಬನುಮಯ್ಯ ಪಾಲಿಟೆಕ್ನಿಕ್ ಮೈಸೂರು ವಿಭಾಗದ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ರಾಮು, ನಂಜನಗೂಡಿನ ಜೆಎಸ್ ಎಸ್ ಪಾಲಿಟೆಕ್ನಿಕ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮನು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಪಾರ್ಥಸಾರಥಿ ಎಲ್, ಕಾರ್ಯಕ್ರಮ ಸಂಯೋಜಕರಾದ ಅಧ್ಯಾಪಕ ಪ್ರವೀಣ್ ಕುಮಾರ್ ಎಂ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಡೀನ್‌ಗಳು ಅಭಿನಂದಿಸಿದ್ದಾರೆ.