ಮೈಸೂರು: ಸಾಲಿಗ್ರಾಮ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದ ನಿವಾಸಿ ಸುಮಾರು 52 ವರ್ಷದ ಮಲ್ಲಿಕ ನಾಪತ್ತೆಯಾಗಿದ್ದಾರೆ.
ಇವರು ಜುಲೈ 15ರ ಮಧ್ಯಾಹ್ನ ತನ್ನ ಹೆಂಡತಿಗೆ ಜಮೀನಿನ ಬಳಿ ಹೋಗಿ ಬರುತ್ತೇನೆಂದು ಹೇಳಿ ಹೋದವರು ಸಂಜೆಯಾದರೂ ಮನೆಗೆ ಬಾರದ ಕಾರಣ ಕುಟುಂಬದವರು ಜಮೀನಿನ ಬಳಿ, ಅಕ್ಕಪಕ್ಕದ ಗ್ರಾಮಗಳಲ್ಲಿ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಮಲ್ಲಿಕ ಅವರು ಇರದ ಕಾರಣ ಅವರ ಮಗ ರಘು ಸಾಲಿಗ್ರಾಮ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.
ಈ ದೂರಿನನ್ವಯ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 6 ಅಡಿ ಎತ್ತರ. ಎಣ್ಣೆಗೆಂಪು ಮೈಬಣ್ಣ. ಗುಂಗುರು ತಲೆಕೂದಲು. ಮನೆಯಿಂದ ಹೋಗುವಾಗ ತುಂಬು ತೋಳಿನ ನೀಲಿ ಬಣ್ಣದ ಶರ್ಟ್, ನೀಲಿ ಮತ್ತು ಕಪ್ಪು ಬಣ್ಣದ ಲುಂಗಿ ಧರಿಸಿದ್ದು, ಯಾವುದೇ ಮೊಬೈಲ್ ಫೋನ್ ಬಳಕೆ ಮಾಡುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.