News Kannada
Thursday, August 11 2022

ಮೈಸೂರು

ಎಚ್.ಡಿ.ಕೋಟೆ: ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ - 1 min read

Tiger attacks man who was grazing cattle in H.D. Kote

ಎಚ್.ಡಿ.ಕೋಟೆ: ಹುಲಿಯೊಂದು ದನ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದಲ್ಲದೆ, ಹಸುವನ್ನು ತಿಂದು ಹಾಕಿರುವ ಘಟನೆ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಯಡಿಯಾಲ ಅರಣ್ಯ ವಲಯದ ತಾಲೂಕಿನ ಹಾದನೂರು ಗ್ರಾಮದಲ್ಲಿ ನಡೆದಿದೆ.

ಹಾದನೂರು ಗ್ರಾಮದ ನಿವಾಸಿ ಪ್ರಸನ್ನ ಎಂಬುವರೇ ಹುಲಿದಾಳಿಗೆ ಗಾಯಗೊಂಡವರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಪ್ರಸನ್ನ ಅವರು ಎಂದಿನಂತೆ ಗ್ರಾಮದ ಕಾಡಂಚಿನಲ್ಲಿರುವ ತಮ್ಮ ಜಮೀನಿನಲ್ಲಿ ದನಗಳನ್ನು ಮೇಯಿಸಲು ಇತರರೊಂದಿಗೆ ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ತೆರಳಿದ್ದು, ದನಗಳನ್ನು ಮೇಯಲು ಬಿಟ್ಟು ಐದು ಜನ ದನಗಾಹಿಗಳು ಕುಳಿತಿದ್ದ ವೇಳೆ ಹುಲಿ ಏಕಾಏಕಿ ಎರಗಿದೆ ಈ ಸಂದರ್ಭ ಎಲ್ಲರೂ ಹೆದರಿ ಓಡಿದ್ದಾರೆ.

ಈ ವೇಳೆ ಪ್ರಸನ್ನನ ತಲೆ ಭಾಗಕ್ಕೆ ಗಾಯವಾಗಿದೆ. ತಕ್ಷಣ ಜತೆಯಲ್ಲಿದ್ದ ದನಗಾಹಿ ಸ್ನೇಹಿತರು ಗಾಯಗೊಂಡಿದ್ದ ಪ್ರಸನ್ನ ಅವರನ್ನು ಬಡಗಲಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

See also  ದೆಹಲಿ: 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು