News Kannada
Thursday, October 05 2023
ಮೈಸೂರು

ಮೈಸೂರಿನ ಧ್ವಜ ಸಮಿತಿಯಿಂದ ಪ್ರಧಾನಿಗೆ ಹತ್ತು ಪ್ರಶ್ನೆಗಳು

10 questions to PM from Mysore Flag Committee
Photo Credit : By Author

ಮೈಸೂರು: ರಾಷ್ಟ್ರಧ್ವಜದ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಗೋಕುಲಂನ ಧ್ವಜ ಸತ್ಯಾಗೃಹ ಸಮಿತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತಂತೆ ಸಮಿತಿಯ ಸಂಚಾಲಕ ಕಾಳಚನ್ನೇಗೌಡ ಅವರು ಪ್ರಧಾನಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

1.ರಾಷ್ಟ್ರಧ್ವಜದಿಂದ ಖಾದಿಯನ್ನೇಕೆ ಕಿತ್ತು ಹಾಕಿದಿರಿ? 2.ಸರಕಾರಿ ಕಛೇರಿಗಳ ಮೂಲಕ, ಬ್ಯಾಂಕು, ಮುನಿಸಿಪಾಲಿಟಿ ಅಥವಾ ಇತರೆ ಸ್ವಾಯತ್ತ ಸಂಸ್ಥೆಗಳ ಮೂಲಕ, ವಿದೇಶಿವಸ್ತ್ರ ಹಾಗೂ ಸಿಂಥೆಟಿಕ್ ವಸ್ತ್ರದಿಂದ ತಯಾರಾದ ಧ್ವಜಗಳನ್ನೇಕೆ ಬಲವಂತದಿಂದ ಮಾರಾಟ ಮಾಡಿಸುತ್ತಿದ್ದೀರಿ?

3.ಅವು ಅಲ್ಲಲ್ಲಿ ಹರಿದಿದೆ, ಹಾಳಾಗಿವೆ, ಅಳತೆ ತಪ್ಪಿವೆ, ಆಕಾರ ತಪ್ಪಿವೆ, ಅಶೋಕಚಕ್ರವು ಎತ್ತೆತ್ತಲೋ ಹೊರಳಿದೆ, ಚಕ್ರದ ಕೀಲುಗಳ ಸಂಖ್ಯೆ ಏರುಪೇರಾಗಿವೆ ಎಂಬ ಸಂಗತಿಯು ತಮ್ಮ ಗಮನಕ್ಕೆ ಬಂದಿಲ್ಲವೆ? ಇಂತಹ ಬಾವುಟಗಳ ಭ್ರಷ್ಟ ಉತ್ಪಾದಕರನ್ನು ಶಿಕ್ಷಿಸುವ ಬದಲು ಭ್ರಷ್ಟಗೊಂಡ ಬಾವುಟಗಳನ್ನೇ ಅಧಿಕೃತವಾಗಿ ಮಾರಾಟ ಮಾಡುವುದು ಭ್ರಷ್ಟಾಚಾರವಲ್ಲವೆ?

4.ನಮ್ಮ ಧ್ವಜ ಅಹಿಂಸೆಯ ದ್ಯೋತಕವಾದದ್ದು. ಶಾಂತಿಪ್ರಿಯ ಅಶೋಕನ ಲಾಂಛನ ಹಾಗೂ ಅಹಿಂಸಾತ್ಮಕ ಖಾದಿಬಟ್ಟೆಗಳು ಅದರಲ್ಲಿ ಅಂತರ್ಗತವಾಗಿವೆ. ಹೀಗಿರುವಾಗ, ಸ್ವಾತಂತ್ರ್ಯದ ಅಮೃತಮಹೋತ್ಸವದ ಬಾವುಟ ಕಾರ್ಯಕ್ರಮವನ್ನು ಯುದ್ಧಭೂಮಿಯೊಂದರಿಂದ ಉದ್ಘಾಟಿಸಿ, ಭಾರತವು ಹಿಂಸಾವಾದಿ ದೇಶವೆಂಬ ಸಂಕೇತವನ್ನೇಕೆ ಜಗತ್ತಿಗೆ ಸಾರುತ್ತಿದ್ದೀರಿ?

5.ಸಿಂಥೆಟಿಕ್ ಬಾವುಟಗಳ ಉದ್ಪಾದನೆ, ನಿರ್ಮಾತ, ವಿತರಣೆಗೆಂದು ತಮ್ಮ ಸರಕಾರವು ಎಷ್ಟು ಪ್ರಮಾಣದ ತೆರಿಗೆ ಹಣವನ್ನು ಖರ್ಚು ಮಾಡಿದೆ? ಇತ್ತ ಖಾದಿ ಹಾಗೂ ಗ್ರಾಮೋದ್ಯೋಗದ ಉದ್ಪಾದನೆ, ಆಯಾತ, ವಿತರಣೆಯನ್ನೇ ಹೆಚ್ಚುಕಡಿಮೆ ಸ್ಥಗಿತಗೊಳಿಸಿರುವ ತಮ್ಮ ಸರಕಾರವು ಇದೇ ಹಣವನ್ನು ಗ್ರಾಮೋದ್ಯೋಗದ ಪುನಶ್ಚೇತನಕ್ಕಾಗಿ ಖಚರ್ು ಮಾಡಬಹುದಿತ್ತಲ್ಲವೇ? ಬಡವರ ಪರವಾದ ಕಾರ್ಯಕ್ರಮವಲ್ಲವೇ ಸ್ವದೇಶಿ?

6.ಭಾರತದ ರಾಷ್ಟ್ರಧ್ವಜವು ಚೀನಾದಿಂದ ನಿರ್ಮಾತಗೊಂಡು ಅಧಿಕೃತವಾಗಿ ಮಾರಾಟಗೊಳ್ಳುತ್ತಿದೆ ಎಂಬ ಸುದ್ಧಿ ನಿಜವೇ?

7.ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಅಗತ್ಯವಿಲ್ಲ. ಮಳೆಯಿರಲಿ, ಬಿಸಿಲಿರಲಿ, ಹಗಲಿರಲಿ, ರಾತ್ರಿಯಿರಲಿ, ಧ್ವಜವು ಹರಿದಿರಲಿ, ಮಲಿನವಾಗಿರಲಿ, ಕಂಬಕ್ಕೆ ಜೋತು ಬಿದ್ದಿರಬೇಕು ಎಂದು ಧ್ವಜನಿಯಮವನ್ನು ತಾವು ತಿದ್ದಿರುವುದು ಸರಿಯೇ?

8.ಹರ್-ಘರ್-ತಿರಂಗ ಎಂಬುದು, ವಿದೇಶಿಯರೇ ದೇಶಬಿಟ್ಟು ತೊಲಗಿ ಎಂಬ ಸ್ವದೇಶಿ ಚಳುವಳಿಯ ಕೂಗಾಗಿತ್ತು. ಪವಿತ್ರ ಆರ್ಥಿಕತೆ ಹಾಗೂ ಸ್ವದೇಶಿ ಉತ್ದಾದನೆಗಳನ್ನು ಕಡೆಗಣಿಸಿರುವ ತಮ್ಮ ಸರಕಾರವು ಹರ್-ಘರ್-ತಿರಂಗ ಎಂದು ಕೂಗುವುದು ವಿಪರ್ಯಾಸವಲ್ಲವೆ?

9.ಸರಕಾರದ ಅಧೀನದಲ್ಲಿರುವ ಖಾದಿ ಸಂಸ್ಥೆಯು ಶುದ್ಧ ಖಾದಿಬಾವುಟವನ್ನು ಸಾಮಾನ್ಯರ ಕೈಗೆಟುಕದಂತಹ, ಅತಿ ದುಬಾರಿಬೆಲೆಗೆ ಮಾರುತ್ತಿರುವುದು ಸರಿಯೆ?

10.ಕಲೆ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ಅಕಾಡೆಮಿಗಳು ಸರಕಾರದ ಕಾರ್ಯಕ್ರಮವನ್ನು ಬೆಂಬಲಿಸುವಂತೆ ಸಾಹಿತಿ ಕಲಾವಿದರುಗಳ ಮೇಲೆ ಬಲವಂತ ಹೇರುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲವೇ? ಈ ಪ್ರಶ್ನೆಗಳಿಗೆ ಉತ್ತರವಿದೆಯೋ ಗೊತ್ತಿಲ್ಲ.

See also  ಮೈಸೂರಿಗೆ ಮೋದಿ ಆಗಮನ: ಕಾರ್ಯಕ್ರಮಗಳ ಸಿದ್ಧತೆ ಬಗ್ಗೆ ಎಸ್.ಟಿ ಸೋಮಶೇಖರ್ ಪರಿಶೀಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು