News Kannada
Monday, October 02 2023
ಮೈಸೂರು

ಮೈಸೂರು: ಸರ್.ಎಂ. ವಿಶ್ವೇಶ್ವರಯ್ಯ ಸಾಧನೆ ಅಗಾಧ- ಆರ್.ರಘು ಕೌಟಿಲ್ಯ

Mysore: Sir M. Visvesvaraya's achievements are immense: R Raghu Kautilya
Photo Credit : By Author

ಮೈಸೂರು: ಭಾರತ ರತ್ನ ಎಂ. ವಿಶ್ವೇಶ್ವರಯ್ಯನವರು ಮೈಸೂರು ಅರಸು ಆಡಳಿತ ಸಂದರ್ಭದಲ್ಲಿ ಮಾಡಿರುವ ಸಾಧನೆ ಅಗಾಧ ಮತ್ತು ಅವಿಸ್ಮರಣೀಯವಾಗಿವೆ. ಸ್ವಾತಂತ್ರ್ಯ ಭಾರತದಲ್ಲಿ ಮತ್ತೆ ಅಂಥ ಉತ್ತೇಜಕ ಬೆಳವಣಿಗೆ ಕಾಣಿಸುತ್ತಿಲ್ಲವೆಂದು ಮೈಲ್ಯಾಕ್ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿದರು.

ವಿಶ್ವೇಶ್ವರ ನಗರದಲ್ಲಿ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಮಹರ್ಷಿ ಪಬ್ಲಿಕ್ ಶಾಲೆ ವತಿಯಿಂದ ನಡೆದ ಇಂಜಿನಿಯರ್ಸ್ ಡೇ ಹಾಗೂ ಭಾರತ ರತ್ನ ಡಾ. ಸರ್ ಎಂ ವಿಶ್ವೇಶ್ವರಯ್ಯ 162ನೇ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರದ ಎಂಜಿನಿಯರ್ಸ್ ಗಳಾದ ಎ ಎಸ್ ಯೋಗನರಸಿಂಹ, ಗುರುದತ್ , ಜಯಸಿಂಹ ಶ್ರೀಧರ್, ರಾಜೇಶ್ವರಿ ಎನ್, ರಾಮಚಂದ್ರು, ಆನಂದ್ ದೇಶಪಾಂಡೆ ಅವರಿಗೆ ಸನ್ಮಾನಿಸಿ ಮಾತನಾಡಿದರು. ವಿಶ್ವೇಶ್ವರಯ್ಯನವರ ನೀರಾವರಿ ಯೋಜನೆಗಳು ಇಂದಿಗೂ ಮಾದರಿಯಾಗಿವೆ. ಸೂಕ್ತ ಜಾಗೆಗಳಲ್ಲಿ ಗುಣಮಟ್ಟದ ಜಲಾಶಯಗಳನ್ನು ಕಟ್ಟುವುದರ ಮೂಲಕ ನೀರಿನ ಸದ್ಭಳಕೆ ಹೇಗೆ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಮಾತನಾಡಿ, ವಿಶ್ವೇಶ್ವರಯ್ಯನವರ ಸಾಧನೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳ್ಳದೆ, ಇಡೀ ದೇಶಕ್ಕೆ ಸಂದಿದೆ. ಸಮಸ್ಯೆಗಳ ಪರಿಹಾರಕ್ಕೆ ಅವರು ದೂರಾಲೋಚನೆಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆ ಮೂಲಕ ತಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಮಾತನಾಡಿ ರಾಜರ್ಷಿ ನಾಲ್ವಡಿ ಮತ್ತು ಯಂತ್ರ ಋಷಿ ಸರ್.ಎಂವಿ ರವರ ಒಡನಾಟ ಮೈಸೂರು ಸಂಸ್ಥಾನದ ಅಭಿವೃದ್ಧಿಯತ್ತ ಸಾಗಿತ್ತು, ಆರ್ಥಿಕ ವ್ಯವಸ್ಥೆ ಹೆಚ್ಚಿಸಲು ಶ್ರೀಗಂಧ ಮರ ಉತ್ಪಾದನೆಯ ರಫ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ತಂದರು, ಸರ್.ಎಂ ವಿ ರವರು ಬಗ್ಗೆ ಯುವ ಪೀಳಿಗೆ ಇತಿಹಾಸ ತಿಳಿದುಕೊಳ್ಳಲು ಪ್ರವಾಸಿ ತಾಣಗಳಲ್ಲಿ ಅವರ ಆಡಳಿತ ಕಾಲದ ಬಗ್ಗೆ ಮಾಹಿತಿ ನಾಮಫಲಕ ಹಾಕಬೇಕಿದೆ, ಭಾರತವನ್ನು ರೈತಪ್ರಧಾನ ದೇಶವಾಗಿ ಶ್ರಮಿಸದವರು ಸರ್ ಎಂವಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹರ್ಷಿ ವಿದ್ಯಾಸಂಸ್ಥೆಯ ಸಿಇಓ ತೇಜಸ್ ಶಂಕರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ರಂಗನಾಥ್, ಸುಚೇಂದ್ರ, ಪ್ರಶಾಂತ್ ಇನ್ನಿತರರು ಹಾಜರಿದ್ದರು.

See also  ಮಂಗಳೂರು: ಆದಿವಾಸಿ ಹಕ್ಕುಗಳ ಸಮಿತಿಯಿಂದ ಮೇಯರ್‌ಗೆ ನಿವೇಶನ ಗಡಿಗುರುತಿಗಾಗಿ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು