News Kannada
Thursday, September 28 2023
ಮೈಸೂರು

ಮೈಸೂರು: ಅನಾರೋಗ್ಯ ಪತ್ತೆ ಹಚ್ಚಲು ವಿಶೇಷ ಯಂತ್ರ ಬಳಕೆ

Mysuru: A special machine will be used to detect illness
Photo Credit : By Author

ಮೈಸೂರು: ದೇಹದ ಪ್ರಭಾವಳಿಯನ್ನು ದಾಖಲಿಸುವ ಕಿರ್ಲಿಯನ್ ಛಾಯಾಗ್ರಹಣ ಮೂಲಕ ದೇಹದಲ್ಲಿ ಸದ್ಯಕ್ಕೆ ಗಮನಕ್ಕೆ ಬಾರದಿರುವ ಹಾಗೆ ಇದ್ದು, ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದಾದ ಅನಾರೋಗ್ಯ ಸಮಸ್ಯೆಯನ್ನು ಯಂತ್ರದ ಮೂಲಕ ಪತ್ತೆ ಹಚ್ಚುವ ವಿಶೇಷ ಸೌಲಭ್ಯ ಸೇವೆ ಲಭ್ಯವಿದೆ ಎಂದು ಶ್ರೀ ಕೃಷ್ಣ ಹೀಲಿಂಗ್ ಸೆಂಟರ್ ವ್ಯವಸ್ಥಾಪಕರಾದ ಸುಜಾತ ಮೋಹನ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಪಾನಿನ ವೈಜ್ಞಾನಿಕ ವಿಧಾನದ ವಿಶಿಷ್ಟ ಯಂತ್ರವಾಗಿದೆ.ಹೆಬ್ಬೆಟ್ಟಿನ ಮುದ್ರೆಯ ಮುಖಾಂತರ ಪರೀಕ್ಷೆಗೆ ಒಳಗಾದವರು ಯವುದಾದರಿಗೆ ಅನಾರೋಗ್ಯ ಸಮಸ್ಯೆ ಮುಂದೆ ಕಾಡಬಹುದೇ ಅಥವಾ ಈಗ ಗಮನಕ್ಕೆ ಬಾರದ ಯಾವುದಾದರೂ ಆರೋಗ್ಯ ಸಮಸ್ಯೆ ಇರಬಹುದಾ ಎಂಬುದನ್ನು ದಾಖಲಿಸಿಕೊಳ್ಳಬಹುದಾಗಿದೆ ಎಂದರು.

ಈಗಾಗಲೇ ಈ ರೀತಿಯ ಪರೀಕ್ಷೆಗೆ ಒಳಗಾದವರಿಗೆ ಇರುವ ಸಮಸ್ಯೆಯನ್ನು ನಾವು ತಿಳಿಸಿದ್ದೇವೆ‌.ಆದರೆ ಮತ್ತೆ ಅವರುಗಳಿ ವೈದ್ಯಕೀಯ ಪರೀಕ್ಷೆಗೆ ಒಳಗಾದ ಬಳಿಕ ಸಕ್ಕರೆ ಕಾಯಿಲೆ ಮೊದಲಾದವು ತಮಗೆ ಅರಿವಿಲ್ಲದಂತೆ ಇರುವುದನ್ನು ಗಮನಿಸಿ ಅಚ್ಚರಿಸಿಗೊಂಡಿದ್ದಾರೆ.ಹಾಗೂ ನಮ್ಮ ಈ ಯಂತ್ರದ ಉಪಯೋಗದ ಕುರಿತು ಮೆಚ್ಚುಗೆಯ ಮಾತುಗಳನಾಡಿದ್ದಾರೆ ಎಂದು ಅವರು ಹೇಳಿದರು.

ಸಾಮಾನ್ಯ ಕ್ಯಾಮೆರಾ ದೇಹದ ಚಿತ್ರ ತೆಗೆದರೇ,ನಮ್ಮಲಿರುವ ಈ ವಿಶಿಷ್ಟ ಯಂತ್ರ ಕಣ್ಣಿಗೆ ಕಾಣದ ಪ್ರಭಾವಳಿಗಳ ಸಂಪೂರ್ಣ ಗ್ರಾಫ್ ಒದಗಿಸುತ್ತದೆ ಎಂದ ಅವರು,ಇದರ ಪ್ರಯೋಜನವನ್ನು ಮೈಸೂರಿನ ಜನತೆ ಪಡೆದುಕೊಳ್ಳುವಂತೆ ಮನವಿ ಮಾಡಿದರಲ್ಲದೇ,ಮಾಹಿತಿಗಾಗಿ ದೂ.8880322966 ಅನ್ನು ಸಂಪರ್ಕಿಸುವಂತೆ ಕೋರಿದರು.

ಪತ್ರಿಕಾಗೋಷ್ಟಿಯಲ್ಲಿ ಡಾ.ಗಣೇಶ್ ರಾವ್, ಮುಕುಂದನ್ ಇದ್ದರು.

See also  ಯಲ್ಲಾಪುರ: ಶಾಲೆಯ ಬೀಗ ಮುರಿದು ಕಳುವಿಗೆ ಯತ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು