News Kannada
Tuesday, November 29 2022

ಮೈಸೂರು

ಎಚ್.ಡಿ.ಕೋಟೆ: ಹಾಡಿ ವ್ಯಕ್ತಿ ಸಾವು ಖಂಡಿಸಿ ಗಿರಿಜನರಿಂದ ಪ್ರತಿಭಟನೆ - 1 min read

Photo Credit : By Author

ಎಚ್.ಡಿ.ಕೋಟೆ: ಜಿಂಕೆ ಮಾಂಸ ಕದ್ದ ಆರೋಪದಲ್ಲಿ ಬಂಧಿಸಲಾಗಿದ್ದ ಎನ್.ಬೇಗೂರು ಗ್ರಾಮದ ಜೇನು ಕುರುಬ ಆದಿವಾಸಿ ಸಮುದಾಯದ ವ್ಯಕ್ತಿ ತನಿಖೆ ವೇಳೆ ಅರಣ್ಯಾಧಿಕಾರಿ ಕಚೇರಿಯಲ್ಲಿ ಅನುಮಾನಸ್ಪಾದವಾಗಿ ಸಾವನ್ನಪ್ಪಿದ್ದು, ಇದು ಲಾಕಪ್ ಡೆತ್ ಎಂದು ಆರೋಪಿಸಿ ಆದಿವಾಸಿ ಮುಖಂಡರು ಸೇರಿದಂತೆ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳ ಗಿರಿಜನರು ಮತ್ತು ಸಾರ್ವಜನಿಕರು ಎನ್.ಬೇಗೂರು ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಗುಂಡ್ರೆ ವನ್ಯಜೀವಿ ವಲಯ ವ್ಯಾಪ್ತಿಯ ಹೊಸಹಳ್ಳಿ ಹಾಡಿಯಲ್ಲಿ ಜಿಂಕೆ ಮಾಂಸ ಕದ್ದ ಎಂಬ ನೆಪವೊಡ್ಡಿ ಮೂರು ದಿನಗಳ ಹಿಂದೆ ಹಾಡಿಯ ಕರಿಯಪ್ಪ ಜವರಯ್ಯ ಎಂಬುವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಅರಣ್ಯ ಇಲಾಖೆಯ ಗಾರ್ಡ್‌ಗಳಾದ ಬಾಹುಬಲಿ ಮತ್ತು ಆನಂದ ಎಂಬುವರು ಕರಿಯಪ್ಪನ ಮೇಲೆ ಸ್ಥಳದಲ್ಲೇ ಹಲ್ಲೆ ಮಾಡಿ ಕರೆದುಕೊಂಡು ಹೋಗಿದ್ದರು.

ಇಲ್ಲಿನ ಅರಣ್ಯಾಧಿಕಾರಿಗಳು ತನಿಖೆಯ ನೆಪದಲ್ಲಿ ಹಾಡಿಯ ಮುಗ್ದ ಅಮಾಯಕ ಕರಿಯಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ತೀವ್ರ ಹಲ್ಲೆಯಿಂದ ಅಸ್ವಸ್ಥನಾದ ಕರಿಯಪ್ಪನನ್ನು ನಂತರ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ, ಅದರೆ ಇಲ್ಲಿನ ಹಾಡಿಯ ಜನರು ಕರಿಯಪ್ಪ ತೀವ್ರ ಹಲ್ಲೆಯಿಂದ ಅರಣ್ಯ ಇಲಾಖೆ ಕಚೇರಿಯಲ್ಲೇ ಪ್ರಾಣ ಕಳೆದುಕೊಂಡಿದ್ದು, ಅರಣ್ಯ ಸಿಬ್ಬಂದಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ ಎಂದು ಹಾಡಿಯ ಜನರು ಆರೋಪಿಸಿದ್ದಾರೆ.

ಅರಣ್ಯಾಧಿಕಾರಿಗಳ ತನಿಖೆ ವೇಳೆ ಮೃತನಾಗಿರುವ ಎನ್.ಬೇಗೂರು ಗ್ರಾ.ಪಂ.ವ್ಯಾಪ್ತಿಯ ಹೊಸಹಳ್ಳಿ ಹಾಡಿಯ ಮೃತ ಕರಿಯಪ್ಪ ನಿಧನದಿಂದ ಈಗ ಆತನ ಕುಟುಂಬ ಅಕ್ಷರಶಃ ಅನಾಥವಾಗಿದೆ. ಈ ಹಿಂದೆಯೇ ಕರಿಯಪ್ಪನ ಪತ್ನಿ ನೂರೆ ಮೃತಪಟ್ಟಿದ್ದು, ಕರಿಯಪ್ಪನ ವಯಸ್ಸಾದ ತಾಯಿ ಮೂವರು ಮಕ್ಕಳಿಗೆ ಮನೆಯ ಯಜಮಾನ ಕರಿಪ್ಪನ ಸಾವಿನಿಂದ ಅನಾಥರಾಗಿದ್ದಾರೆ.

ಹೊಸಹಳ್ಳಿ ಹಾಡಿ ಸೇರಿದಂತೆ ಈ ಭಾಗದ ಜನರು ಮೃತ ಕರಿಯಪ್ಪ ಸಾವಿಗೆ ಇಲ್ಲಿನ ಅರಣ್ಯಾಧಿಕಾರಿಗಳೇ ಕಾರಣ. ಅವರ ಮೇಲೆ ಕಠಿಣ ಕ್ರಮ ಜರುಗಿಸಿ ಆ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವ ಜತೆಗೆ ನಮಗೆ ನ್ಯಾಯಕೊಡಿಸಿ ಇನ್ಮುಂದೆ ಹೀಗಾಗದಂತೆ ನಮಗೆ ರಕ್ಷಣೆ ನೀಡಿ ಎಂದು ಆಗ್ರಹಿಸುತ್ತಿದ್ದು, ಒಟ್ಟಾರೆ ಹೊಸಹಳ್ಳಿ ಹಾಡಿಯ ಕರಿಯಪ್ಪನ ಸಾವಿನಿಂದ ಎಲ್ಲ ಹಾಡಿಗಳಲ್ಲೂ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.

ವಿಷಯ ತಿಳಿದು ಶಾಸಕ ಅನಿಲ್ ಚಿಕ್ಕಮಾದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಮೃತ ಕರಿಯಪ್ಪ ಕುಟುಂಬಸ್ಥರಿಗೆ ಹತ್ತು ಲಕ್ಷ ಪರಿಹಾರ ಹಾಗೂ ಕುಟುಂಬದಲ್ಲಿ ಓರ್ವರಿಗೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದರು.

See also  ನಂಜನಗೂಡಿನಲ್ಲಿ ಅದ್ಧೂರಿಯಾಗಿ ಜರುಗಿದ ಪಂಚ ಮಹಾರಥೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು