News Kannada
Sunday, November 27 2022

ಮೈಸೂರು

ಸರಗೂರು: ಡಿಸಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ದೂರಿನ ಸುರಿಮಳೆ - 1 min read

Photo Credit : By Author

ಸರಗೂರು: ತಾಲೂಕಿನ ಶಂಖಹಳ್ಳಿಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ತರ ಪಟ್ಟಿಯಿಂದ ವಂಚಿತರಾದ ಆರ್ಹ ಫಲಾನುಭವಿಗಳದ್ದೆ ಹೆಚ್ಚು ದೂರುಗಳು ಕೇಳಿ ಬಂದವು. ಅಲ್ಲದೆ, ನೊಂದ ಫಲಾನುಭವಿಗಳು ಅಧಿಕಾರಿಗಳು, ಸರಕಾರದ ವಿರುದ್ಧ ಕಿಡಿಕಾರಿ, ನಂತರ ತಹಶೀಲ್ದಾರ್ ಚಲುವರಾಜು ಅವರಿಗೆ ವಿವಿಧ ಅರ್ಜಿಗಳ ಮನವಿ ಸಲ್ಲಿಸಿದರು.

ಶಂಖಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಹಶೀಲ್ದಾರ್ ಚಲುವರಾಜು, ತಾಲೂಕು ಪಂಚಾಯಿತಿ ಇಒ ಕೆ.ಸುಷ್ಮಾ ಅವರ ಎದುರೇ ಗ್ರಾಪಂ ಅಧಿಕಾರಿಗಳು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಇಂದಿನ ಕಾರ್ಯಕ್ರಮದ ಬಗ್ಗೆಯೂ ಮಾಹಿತಿ ನೀಡಿಲ್ಲ. ಹೀಗಾದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ. ಸಾರ್ವಜನಿಕರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸುವುದಾದರೂ ಹೇಗೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಇದಲ್ಲದೆ ಮೇಲಾಧಿಕಾರಿಗಳು ಇಂಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು. ಇದರಿಂದ ಕೆಲಕಾಲ ಅಧಿಕಾರಿಗಳು, ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.

ಶಂಖಹಳ್ಳಿ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಒಂದು ಶಾಲಾ ಕಟ್ಟಡ ಇದ್ದು, ಸಾಕಾಗುತ್ತಿಲ್ಲ. ಮಕ್ಕಳು ಸಂಖ್ಯೆ ಹೆಚ್ಚಿದೆ. ಹೀಗಾಗಿ ಇನ್ನೊಂದು ಕಟ್ಟಡ ಬೇಕು.ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು, ಕೂಡಲೇ ಅದನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು. ಶಂಖಹಳ್ಳಿ ಹೊಸ ಬಡಾವಣೆಗೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು. ಸರಗೂರು ಪೋಲಿಸ್ ಠಾಣೆ 35 ಕೀಲೋ ಮಿಟರ್ ದೂರವಿದೆ, ಆದ್ದರಿಂದ ನಮ್ಮ ಹತ್ತಿರದ ಹಂಪಾಪುರ ಪೋಲಿಸ್ ಠಾಣೆಗೆ ವರ್ಗಾಯಿಸಿ ಕೊಡಬೇಕೆಂದು, ಇದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ ಅವಕಾಶ ಮಾಡಿಕೊಡಿ ಎಂದು ಗ್ರಾಮಸ್ಥರು ತಹಶೀಲ್ದಾರ್ ಚೆಲುವರಾಜು ರವರಿಗೆ ಮನವಿ ಸಲ್ಲಿಸಿದರು.

ಕಾಳಿಹುಂಡಿ ಗ್ರಾಮದ ಗ್ರಾಪಂ ಸದಸ್ಯ ರತ್ನಮ್ಮ ನಾರಾಯಣ ಮಾತನಾಡಿ, ಇಬ್ಜಾಲ್ ಗ್ರಾಮದಿಂದ ಕಾಳಿಹುಂಡಿ ಗ್ರಾಮದವರಗೆ ರಸ್ತೆ ಸರಿಯಿಲ್ಲದ ಕಾರಣ ಶಾಲೆಯ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೆ ಇದ್ದಾರೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಚೆಲುವರಾಜು, ಗ್ರಾಮಸ್ಥರು ದೂರುಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. ಅಧಿಕಾರಿಗಳು ಸ್ಥಳದಲ್ಲೇ ಇರುವುದರಿಂದ ಅರ್ಜಿಗಳ ಆಧಾರದ ಮೇಲೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಹೀಗಾಗಿ ಅಧಿಕಾರಿಗಳಿಗೆ ಅವುಗಳು ಕಾನೂನು ಬದ್ಧವಾಗಿ ಇದ್ದರೆ ಕೆಲಸ ಮಾಡುವಂತೆ ಸೂಚನೆ ನೀಡಬಹುದು ಎಂದು ತಿಳಿಸಿದರು, ಈ ಸಂದರ್ಭದಲ್ಲಿ ವಿವಿಧ ವೃದ್ಯಾಪ್ಯ ವೇತನ, ಅಂಗವಿಕಲರ ವೇತನ ಇನ್ನಿತರ ಮಂಜುರಾತಿ ಪತ್ರಗಳನ್ನು ಫಲಾನುಭವಿಗಳಿಗೆ ತಹಶೀಲ್ದಾರ್ ರವರು ವಿತರಿಸಿದರು. ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕ , ಕ್ವಾರಿ ಕಾರ್ಮಿಕರ ಸಂಘದ ಶಂಕಹಳ್ಳಿ ಗ್ರಾಮ ಶಾಖೆ ಅಧ್ಯಕ್ಷ ಚೆನ್ನನಾಯಕ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಮಂಜುಳಅಂಕನಾಯಕ,ಸದಸ್ಯರಾದ ಲಕ್ಷ್ಮಿ, ನಾಗೇಂದ್ರ, ವಿಶಾಲಾಕ್ಷಿ, ಪುಟ್ಟಸ್ವಾಮಿ, ಪ್ರೀತಿ, ನಂಜಪ್ಪ, ವರದನಾಯಕ, ರುದ್ರಯ್ಯ, ನಾಗರಾಜು, ಚಿಕ್ಕಕಾಳನಾಯಕ, ಭರತ್, ಜ್ಯೋತಿ, ನಾಗರಾಜು, ಕೆಂಡಗಣ್ಣ, ಮಾಜಿ ಅಧ್ಯಕ್ಷ ಶಿವಶಂಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಸುಷ್ಮಾ, ಕಬಿನಿ ಉಪಾವಿಭಾಗ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕರಾದ ಉಷಾ, ಪಶು ಸಂಗೋಪನಾ ಇಲಾಖೆ ಅಧಿಕಾರಿ ವೈ.ಡಿ.ರಾಜಣ್ಣ, ಎಪಿಎಂಸಿ ಕಾರ್ಯದರ್ಶಿ ವಸಂತಕುಮಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣಮೂರ್ತಿ, ಕೆ ಬೆಳತ್ತೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು, ಗ್ರೇಟ್ 2 ತಹಸೀಲ್ದಾರ್ ಪರಶಿವಮೂರ್ತಿ, ಕೃಷಿ ಇಲಾಖೆ ಅಧಿಕಾರಿ ಮಹೇಶ್ ಕುಮಾರ್ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರ ಅಧಿಕಾರಿಗಳು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

See also  ಮಂಗಳೂರು: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 831 ಗ್ರಾಂ ಚಿನ್ನ ವಶ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು