News Kannada
Friday, December 09 2022

ಮೈಸೂರು

ಮೈಸೂರು: ದೀಪಾವಳಿ “ದಿವಾಳಿ” ಯಾಗದೆ ಕನ್ನಡ ಪದಬಳಕೆ ಸರಿಯಿರಲಿ

Photo Credit : By Author

ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಅಂಗವಾಗಿ ಡಿ ದೇವರಾಜ ಅರಸು ರಸ್ತೆ ವಿನೋಬ ರಸ್ತೆ ಶಿವರಾಂಪೇಟೆ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ಹೂವನ್ನು ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಅಭಿಯಾನ ನಡೆಸಲಾಯಿತು.

ಇತ್ತೀಚೆಗೆ ಸ್ಥಳೀಯ ಹಬ್ಬಗಳ ಹೆಸರನ್ನು ಅಪಭ್ರಂಶ ಗೊಳಿಸುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ದೀಪಾವಳಿಯನ್ನು ದಿವಾಳಿ ಎಂದು ಶುಭ ಕೋರುವುದು ಹಾಗೆಯೇ ದಸರಾವನ್ನು ದುಸ್ಸೆರಾ ಎಂದು ತಪ್ಪಾಗಿ ಶುಭಕೋರುತ್ತಿರುವ

ಅನ್ಯ ಭಾಷೆ ಶೈಲಿಯಲ್ಲಿ ಪದಬಳಕೆ ಶುಭ ಕೋರುವುದು ಖಂಡನೀಯ ಅದರ ಅರ್ಥವೇ ಬೇರೆಯಿರುತ್ತದೆ, ಹಾಗಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಗುಲಾಬಿ ನೀಡಿ ಈ ಮನವಿ ಮಾಡಿಕೊಳ್ಳಲಾಯಿತು. ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ದೀಪಾವಳಿಯನ್ನು ದಿವಾಳಿಯೆಂದು ಬರೆದು ಶುಭಕೋರುತ್ತಿರುವದನ್ನು ಖಂಡಿಸಿ ಅವರಿಗೆ ತಿಳಿಹೇಳಿ ದಯಮಾಡಿ ಕನ್ನಡವನ್ನು ಸರಿಯಾಗಿ ಪ್ರಯೋಗಿಸಿ ಗೌರವಿಸಿ ಎಂದು ಮನವಿ ಮಾಡಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ದೀಪಾವಳಿ ದಿವಾಳಿ”ಯಾಗದಿರಲಿ. ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಗ್ರಾಹಕರಿಗೆ ಶುಭಾಶಯ ತಿಳಿಸಲು ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ಉತ್ತರ ಭಾರತದ ಭಾಷೆಯಲ್ಲೇ ‘ದಿವಾಳಿ ‘ಹಬ್ಬದ ಶುಭಾಶಯಗಳನ್ನು ತಿಳಿಸುತ್ತವೆ. ಬ್ಯಾಂಕ್‍ಗಳು ಅದರಲ್ಲೂ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದಿವಾಳಿ ಹಬ್ಬದ ಶುಭಾಶಯಗಳು ಎಂದು ಗ್ರಾಹಕರಿಗೆ ತಿಳಿಸುತ್ತಿರುವುದು ನೋಡಿದರೆ ಕನ್ನಡದ ಬಗ್ಗೆ ಇವರಿಗೆಷ್ಟು ಅಭಿಮಾನವಿದೆ ಮಾಹಿತಿಯಿದೆ ಎಂಬುದರ ಬಗ್ಗೆ ಸಂದೇಹ ವ್ಯಕ್ತವಾಗುತ್ತದೆ.

ಕನ್ನಡದಲ್ಲಿ ದಿವಾಳಿ ಎಂದರೆ ಎಲ್ಲವನ್ನೂ ಕಳೆದುಕೊಳ್ಳುವುದು ಎಂದರ್ಥವಿದೆ .’ದಿವಾಳಿ ಹಬ್ಬ’ ಎಂದರೆ ಕನ್ನಡಿಗರು ಏನೆಂದು ತಿಳಿದುಕೊಳ್ಳಬೇಕು? ಅದರಲ್ಲೂ ಕನ್ನಡಿಗರು ಹಣ ಇಟ್ಟಿರುವ ಬ್ಯಾಂಕುಗಳೇ ಹೀಗೆ ಹಾರೈಸಿದರೆ! ಕನ್ನಡಿಗರಿಗೆ ಪರಿಚಯವಿರುವ ಹೆಸರುಗಳನ್ನೇ ಬಳಸಲು ತೊಂದರೆ ಏನು ? ಈ ಬಗ್ಗೆ ಕನ್ನಡ ಪ್ರಾಧಿಕಾರವು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಜರ್ ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ, ಸುರೇಶ್ ಗೋಲ್ಡ್, ರಾಕೇಶ್ ಕುಂಚಿಟಿಗ, ಲಯನ್ ಶಂಕರ್ ಗುರು, ಎಸ್.ಎನ್ ರಾಜೇಶ್, ವಿನಯ್ ಕಣಗಾಲ್, ಮಂಜುನಾಥ್, ಸುಚೇಂದ್ರ, ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.

See also  ಕೋಲ್ಕತ್ತಾ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು