News Kannada
Sunday, November 27 2022

ಮೈಸೂರು

ಪಿರಿಯಾಪಟ್ಟಣ: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕಾರ್ಯಕರ್ತರು - 1 min read

Congress workers quit to join JD(S)
Photo Credit : By Author

ಪಿರಿಯಾಪಟ್ಟಣ: ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಶಾಸಕ ಕೆ.ಮಹದೇವ್ ಅವರು ಮುಂದಾಗಿದ್ದು,ಚೌತಿ ಗ್ರಾಮದಲ್ಲಿ ಅವರ ಸಮ್ಮುಖದಲ್ಲಿ ಸುಮಾರು 50 ಯುವಕರು ಮತ್ತು ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದಲ್ಲಿ ಯಾರು ಸಹ ಜಾತಿ ಭೇದ ಮಾಡಬಾರದು ವೈಮನಸ್ಸು ಬಿಡಬೇಕು,ವಿರೋಧಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಅಪಪ್ರಚಾರ ಮಾಡಿ ಸೋತಿದ್ದು, ನಂತರ ಮೂರನೇ ಬಾರಿ 2018ರ ಚುನಾವಣೆ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದೇನೆ, ಗ್ರಾಮಕ್ಕೆ ಮುಖ್ಯರಸ್ತೆ, ಗ್ರಾಮದ ಪರಿಮಿತಿ ರಸ್ತೆ ಅಭಿವೃದ್ಧಿಪಡಿಸಿದ್ದೇನೆ, ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ರೂ. 10ಲಕ್ಷ ನೀಡಿದ್ದೇನೆ. ಅದನ್ನು ಆದಷ್ಟು ಬೇಗ ಬಳಕೆ ಮಾಡಿಕೊಳ್ಳಬೇಕು, ಗ್ರಾಮದಲ್ಲಿರುವ ಸಣ್ಣ ಪುಟ್ಟ ವೈಮನಸುಗಳು ಬಿಟ್ಟು ಗ್ರಾಮದ ದೇವಸ್ಥಾನದ ಅಭಿವೃದ್ಧಿಪಡಿಸಲು ಗ್ರಾಮದ ಯುವಕರು ಮತ್ತು ಮುಖಂಡರು ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ಮೂಲಭೂತ ಅಭಿವೃದ್ಧಿ ಕೆಲಸವನ್ನು ಮಾಡಿಸುವುದಾಗಿ ಭರವಸೆ ನೀಡಿದರು.

ಅಧಿಕಾರದಲ್ಲಿ ಶಾಸಕನಾಗಿ ಎಷ್ಟು ದಿನ ಇದ್ದೀನಿ ಎಂಬುವುದು ಮುಖ್ಯವಲ್ಲ, ನನ್ನ ಅವಧಿಯಲ್ಲಿ ತಾಲೋಕು ಮತ್ತು ತಾಲೋಕಿನ ಗ್ರಾಮಾಂತರ ಭಾಗದ ಜನರಿಗೆ ಎಷ್ಟು ಅಭಿವೃದ್ಧಿಪಡಿಸಿದೆ, ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುವುದು ಮುಖ್ಯ. ರಾಜ್ಯ ಮತ್ತು ಕೇಂದ್ರ ದಲ್ಲೂ ಬೇರೆ ಪಕ್ಷ ಅಸ್ತಿತ್ವದಲ್ಲಿ ಇದ್ದು ಮುಖ್ಯಮಂತ್ರಿಗಳು, ಮಂತ್ರಿಗಳು ನಾನು ಶಾಸಕ ಎಂಬುದನ್ನು ಮರೆತು ಅವರ ಬಳಿ ಅನುದಾನ ತರುತ್ತಿದ್ದೇನೆ. ನನಗೆ ಐದು ವರ್ಷದ ಅವಧಿಯಲ್ಲಿ ಎರಡು ವರ್ಷಗಳ ಕಾಲ ಮಾತ್ರ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ, ಉಳಿದ ಮೂರೂ ವರ್ಷಗಳಲ್ಲಿ ಕೋರೊನಾ ಮಹಾಮಾರಿ,ಪ್ರವಾಹ ಎದುರಾಗಿದ್ದು ಅಭಿವೃದ್ಧಿ ಕುಂಠಿತವಾಗಿದೆ.ಮುಂದಿನ ದಿನಗಳಲ್ಲಿ 440 ಹಳ್ಳಿಗಳಿಗೆ ಕಾವೇರಿ ಕುಡಿವ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ.ವಾಲ್ಮೀಕಿ ಸಮುದಾಯದ ಭವನಕ್ಕೆ 5 ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ಉಳಿದ ರಸ್ತೆ ಕಾಮಗಾರಿ ಅಭಿವೃದ್ಧಿಯನ್ನು ಸದ್ಯದಲ್ಲೇ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೋಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೌರಮ್ಮ,ಗ್ರಾಮ ಪಂಚಾಯತಿ ಉಪಾಧ್ಯಕ್ಷ ಲಕ್ಷ್ಮಣ್ ಪಾಟೀಲ್,ಗ್ರಾಮ ಪಂಚಾಯಿತಿ ಸದಸ್ಯರಾದ ಸ್ವಾಮಿ, ರವಿಚಂದ್ರ ಬೂದಿತಿಟ್ಟು,ಶೇಖರ್, ರಾಮೇಗೌಡ, ಕಾಂತರಾಜ್, ಜೆಡಿಎಸ್ ಪಕ್ಷದ ತಾಲೋಕು ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ, ಮುಖಂಡರಾದ ರಾಮೇಗೌಡ, ಲಕ್ಷ್ಮಣ್, ಶಿವರಾಜ್ಏ,ದೇವರಾಜ್ ರೆ ಕೊಪ್ಪಲು ಡೈರಿ ಅಧ್ಯಕ್ಷ ಮಹದೇವ್,ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಶಿವಪ್ಪ,ಗೋವಿಂದೇಗೌಡ ಮತ್ತು ಗ್ರಾಮದ ಮುಖಂಡರು ಭಾಗವಹಿಸಿದ್ದರು.

See also  ಚಾಮುಂಡಿಬೆಟ್ಟ ಉಳಿಸಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು