News Kannada
Thursday, December 08 2022

ಮೈಸೂರು

ಮೈಸೂರು: ಅಂಚೆ ವಿಮಾ ಯೋಜನೆ ಕುರಿತಂತೆ ಮಾಹಿತಿ

Mysore/ Mysuru: Information on Postal Insurance Scheme
Photo Credit : By Author

ಮೈಸೂರು: ಅಂಚೆ ವಿಮಾ ಯೋಜನೆ ಅಡಿ ಪಾಲಿಸಿದಾರರು ಪಾಲಿಸಿ ಪಕ್ಷವಾಗುವ ಮೊದಲೇ ಮೃತನಾದರೆ ಆಶ್ವಾಸಿತ ಮೊಬಲಗು ಮತ್ತು ಬೋನಸ್‌ಗಳನ್ನು ಕೂಡಲೇ ಸಂದಾಯ ಮಾಡಲಾಗುವುದು.

ಅಂಚೆ ಜೀವ ವಿಮೆಯು ನಿರಂತರವಾಗಿ ಅಧಿಕ ಬೋನಸ್ ನೀಡುವ ದಾಖಲೆ ಪಡೆದಿದೆ. ಈ ಯೋಜನೆಯು ನಗರವಾಸಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ವಾಸಿಸುವ ಅನಕ್ಷರಸ್ತ ಜನರಿಗೂ ಸಹ ಲಭ್ಯವಿದೆ. ಅಂಚೆ ಜೀವ ವಿಮೆ ಬಗ್ಗೆ ಕೆಲವು ಮಹತ್ವದ ಮಾಹಿತಿಗಳು ಗ್ರಾಹಕರ ಅನುಕೂಲಕ್ಕಾಗಿ ನೀಡಲಾಗಿದೆ.

ಅತಿ ಕಡಿಮೆ ಕಂತು, ಇತರ ಜೀವ ವಿಮಾ ಕಂಪನಿಗಳಿಗೆ ಹೋಲಿಸಿದರೆ ಭಾರತೀಯ ಅಂಚೆಯ ಜೀವ ವಿಮೆಯು ಅತ್ಯಂತ ಕಡಿಮೆ ಕಂತಿನದ್ದಾಗಿರುತ್ತದೆ, ಅಂಚೆ ವಿಮೆಯು ಅಧಿಕ ಬೋನಸ್ ನೀಡುತ್ತದೆ. ವಿಮಾದಾರರು ಕಟ್ಟುವ ವಿಮೆಯ ಹಣವು ಆದಾಯ ತೆರಿಗೆಗೆ ವಿನಾಯಿತಿ ಹೊಂದುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80/ಸಿ ರ ಅನ್ವಯದ ಪ್ರಕಾರ ವಿಮಾದಾರನು ಪಾವತಿಸುವ ಪ್ರೀಮಿಯಂ ಮೇಲೆ ವಿನಾಯಿತಿ ಸಿಗುತ್ತದೆ.

ಪ್ರತಿ ತಿಂಗಳು ಪಾವತಿಸುವ ಪ್ರೀಮಿಯಂ ಮೊತ್ತವನ್ನು ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಹಾಗೂ ಮೊಬೈಲ್ ಮೂಲಕವು ಪಾವತಿಸಬಹುದಾಗಿದೆ, ಈ ಯೋಜನೆಗೆ ಸೇರಲು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 55 ವರ್ಷಗಳ ವಯೋಮಿತಿ ಇರುತ್ತದೆ.

ನಗರ ಭಾಗದಲ್ಲಿ, ವಾಸಿಸುತ್ತಿರುವ, ಸ್ವಂತ ಉದ್ಯಮ ನಡೆಸಲು ಯಾವುದೇ ವಿಶ್ವವಿದ್ಯಾಲಯದಿಂದ ಅಂಗೀಕೃತಗೊಂಡ ಡಿಗ್ರಿಯನ್ನು ಹೊಂದಿರುವವರು ಹಾಗೂ ಶಾಲಾ-ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು, ಐಟಿಐ, ಡಿಪ್ಲೋಮಾ ಪದವಿ ಪಡೆದಿರುವ ವ್ಯಕ್ತಿಗಳು, ಸರಕಾರಿ ಹಾಗೂ ಅರೆ ಸರಕಾರಿ ಸಂಸ್ಥೆಗಳಲ್ಲಿ ಕಲಸ ಮಾಡುತ್ತಿರುವ ವ್ಯಕ್ತಿಗಳು ಈ ಜೀವ ವಿಮೆಗೆ ಅರ್ಹರು. ಹಾಗೆ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿರುವ ಅನಕ್ಷರಸ್ತ ಜನತೆಯು ಸಹ ಈ ವಿಮಾ ಯೋಜನೆಗೆ ಅರ್ಹರು.

ಈ ಯೋಜನೆಯಡಿ ನಗರವಾಸಿಗಳು ಗರಿಷ್ಠ 50 ಲಕ್ಷದವರೆಗೂ ಹಾಗೂ ಗ್ರಾಮೀಣ ವಾಸಿಗಳು ಗರಿಷ್ಠ 10 ಲಕ್ಷದವರೆಗೂ ವಿಮಾ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ. 3 ವರ್ಷಗಳ ಹಾಗೂ 4 ವರ್ಷಗಳ ಕಾಲ ಕಂತು ವಾವತಿ ಮಾಡಲ್ಪಟ್ಟ ಪಾಲಿಸಿಗಳ ಮೇಲೆ ಸಾಲವನ್ನು ಸಹ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ದೂ.ಸಂ: 08212417307, 08212417308, 08212417300 ಅನ್ನು ಸಂಪರ್ಕಿಸಬಹುದಾಗಿದೆ.

See also  ಜಾಮ್ ನಗರ್: ಹೋಟೆಲ್ ನಲ್ಲಿ ಬೆಂಕಿ ಅವಘಡ, 27 ಜನರ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು