News Kannada
Tuesday, December 06 2022

ಮೈಸೂರು

ಕೆ.ಆರ್.ನಗರ: ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೆ ಸಹಕರಿಸಿ – ಸಾ.ರಾ.ಮಹೇಶ್

Cooperate in construction of four-lane highway - Sa Ra Mahesh
Photo Credit : By Author

ಕೆ.ಆರ್.ನಗರ: ಬಿಳಿಕೆರೆಯಿಂದ ಹೊಳೆನರಸೀಪುರ ತಾಲೂಕು ದೊಡ್ಡಹಳ್ಳಿ ಗ್ರಾಮದವರೆಗೆ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದ್ದು ಪಟ್ಟಣದ ತೋಪಮ್ಮನವರ ದೇವಾಲಯದ ಬಳಿಯಿಂದ ತಾಲೂಕು ಪಂಚಾಯಿತಿಯವರೆಗೆ ಎರಡು ಬದಿಯಲ್ಲಿರುವ ಕಟ್ಟಡಗಳು ಕೆಡವಲಾಗುತ್ತದೆ ಇದಕ್ಕೆ ವರ್ತಕರು ಸಹಕಾರ ನೀಡಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ವಾಸವಿ ಮಂದಿರದಲ್ಲಿ ನಡೆದ ವರ್ತಕರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಟ್ಟು 100 ಅಡಿಗಳಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣವಾಗುತ್ತಿದ್ದು, ವಿವಿ ರಸ್ತೆಯಲ್ಲಿರುವ ಕೆಲವು ಅಂಗಡಿಗಳು ಹಾಗೂ ಮನೆಗಳನ್ನು ಕೆಡವುವ ಸಂದರ್ಭದಲ್ಲಿ ಯಾರು ಅಪಸ್ವರ ಎತ್ತದೆ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಕೋರಿದರು.

ಕಟ್ಟಡ ಸೇರಿದಂತೆ ನಿವೇಶನಗಳು ರಸ್ತೆಗೆ ಹೋದ ಸಂದರ್ಭದಲ್ಲಿ 1ಕ್ಕೆ 5ರಷ್ಟು ಪರಿಹಾರ ನೀಡಲಾಗುತ್ತದೆ ಆದ್ದರಿಂದ ಯಾರು ಆತಂಕಕ್ಕೆ ಒಳಗಾಗದೆ ರಸ್ತೆ ನಿರ್ಮಾಣ ಮಾಡಲು ಸಹಕಾರ ನೀಡಬೇಕು ಎಂದು ಕೋರಿದಲ್ಲದೆ ಈಗಾಗಲೇ ಕೇಂದ್ರ ಸರ್ಕಾರದಿಂದ 800 ಕೋಟಿ ರೂಗಳನ್ನು ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಸಹಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ನಿಯಮದಂತೆ ಈ ರಸ್ತೆಯನ್ನು ಪಟ್ಟಣದಿಂದ ಹೊರಗೆ (ಬೈಪಾಸ್) ರಸ್ತೆ ಮಾಡಿದಾಗ ವ್ಯಾಪಾರ ವಹಿವಾಟುಗಳು ಕಡಿಮೆಯಾಗಲಿದ್ದು ಇದರಿಂದ ವರ್ತಕರಿಗೆ ನಷ್ಟವಾಗಲಿದೆ ಆದ್ದರಿಂದ ವಿವಿ ರಸ್ತೆಯಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಬೇಕು ಎಂದು ವರ್ತಕರನ್ನು ಕೋರಿದ ಶಾಸಕರು ಗುಂಗ್ರಾಲ್‌ಛತ್ರದ ಮೂಲಕ ಮಡಿಕೇರಿಗೆ ಹೋಗುವ ರಾಜ್ಯ ಹೆದ್ದಾರಿ ನಿರ್ಮಾಣಕ್ಕೂ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು ಪುರಸಭೆಯವರು ಬೀದಿಬದಿ ವ್ಯಾಪಾರಸ್ಥರು ವಾಣಿಜ್ಯ ಮಳಿಗೆಗಳ ಮುಂದೆ ವ್ಯಾಪಾರ ಮಾಡದಂತೆ ಕ್ರಮವಹಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚಿಸಿದ ಶಾಸಕ ಸಾ.ರಾ.ಮಹೇಶ್ ಹಳೇ ಎಡತೊರೆ ದೇವಾಲಯವನ್ನು 12 ಕೋಟಿ ರೂಗಳಲ್ಲಿ ಜೀರ್ಣೋದ್ದಾರ ಮಾಡಿ ಪ್ರವಾಸಿ ಕ್ಷೇತ್ರವನ್ನಾಗಿ ಮಾಡುತ್ತಿದ್ದು ಇದರಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಇಇಗಳಾದ ಸುರೇಶ್,ಪ್ರೇಮಕುಮಾರ್,ತಹಶೀಲ್ದಾರ್ ಎಂ.ಎಸ್.ಯದುಗಿರೀಶ್,ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್,ಬಿ.ಎಸ್.ತೋಂಟದಾರ್ಯ, ಸಂತೋಷ್‌ಗೌಡ,ಮುಖ್ಯಾಧಿಕಾರಿ ಡಾ.ಜಯಣ್ಣ,ಇಒ ಸತೀಶ್, ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್,ವರ್ತಕರಾದ ವೈ.ಎಸ್.ಕುಮಾರ್, ಕೆ.ಟಿ.ರಮೇಶ್, ಡೈರಿಪ್ರಕಾಶ್,ಪರಶುರಾಮಾಚಾರ್,ಮಹದೇವ್, ಕೆ.ನಾಗೇಶ್, ಶ್ರೀಧರ್, ಪಂಚಾಕ್ಷರಿ, ಎನ್.ಶಿವಕುಮಾರ್,ಪ್ರಕಾಶ್‌ಗನ್ನ,ದೇವಿಲಾಲ್‌ಜೈನ್,ಡಾ.ದೇವ್‌ಪಾಲ್ ಇದ್ದರು.

See also  ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ: ನಗರ ಪೊಲೀಸರಿಂದ ಪರೇಡ್ ತಾಲೀಮು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು