News Kannada
Wednesday, November 30 2022

ಮೈಸೂರು

ಮೈಸೂರು: ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು - 1 min read

Photo Credit : By Author

ಮೈಸೂರು: ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನಷ್ಟೇ ಓದುವ ಹಾಗೂ ಅಧಿಕ ಅಂಕಗಳನ್ನು ಗಳಿಸಿ ಪದವಿ ಪಡೆಯುವುದಕಷ್ಟೇ ಸೀಮಿತವಾಗದೆ ಕನ್ನಡ ಸಾಹಿತ್ಯದ ಪುಸ್ತಕಗಳನ್ನೂ ದಿನಪತ್ರಿಕೆಗಳನ್ನೂ ಓದುವ ಅಭಿರುಚಿ, ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಸಂಘಟಕ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.

ನಗರದ ಬನ್ನೂರು ರಸ್ತೆಯಲ್ಲಿರುವ ಕ್ರೆಸ್ಟ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಅಂಡ್ ಆರ್ಟ್ಸ್ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಠ್ಯ ಪುಸ್ತಕಗಳಿಂದ ಬರೀ ಜ್ಞಾನ ದೊರೆತರೆ, ಸಾಹಿತ್ಯಾತ್ಮಕ ಪುಸ್ತಕಗಳಿಂದ ಆ ಜ್ಞಾನದ ಜೊತೆಗೆ ವೈಚಾರಿಕತೆ ಬೆಳೆದು ಬುದ್ಧಿ ಮತ್ತು ಭಾವದ ವಿಕಾಸವಾಗುತ್ತದೆ ಎಂದರು.

ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ. ಇದು ಶಿಕ್ಷಣ ಮತ್ತು ಆಡಳಿದ ಭಾಷೆ ಕೂಡ ಆಗಿದೆ. ಕನ್ನಡ ಭಾಷೆಯ ಮೂಲಕ ನಮ್ಮ ಭಾವನೆಗಳನ್ನು, ವಿಚಾರಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದು. ಆದ್ದರಿಂದ, ವಿದ್ಯಾರ್ಥಿಗಳು ತಮ್ಮ ದಿನನಿತ್ಯದ ಎಲ್ಲ ವ್ಯವಹಾರಗಳನ್ನು ಕನ ಭಾಷೆಯ ಮೂಲಕವೇ ಮಾಡುವ ಪ್ರೀತಿ ಮತ್ತು ಅಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.

ಕನ್ನಡದ ದನಿ ಮತ್ತು ಬನಿಯ ವಿಸ್ತರಿಸಲು ನಾಡಿನ ಹಲವು ಕವಿಗಳು ಶ್ರಮಿಸಿದ್ದಾರೆ. ಆಲೂರು ವೆಂಕಟರಾಯ, ಕುವೆಂಪು, ಅನಕೃ, ಡಿ.ಎಸ್. ಕರ್ಕಿ, ದೇಜಗೌ ಮೊದಲಾದ ಕವಿಗಳು ಕನ್ನಡ ನಾಡು ನುಡಿಯ ವೈಭವವನ್ನು ಕುರಿತು ತಮ್ಮ ಸಾಹಿತ್ಯ ಕೃತಿಗಳಲ್ಲಿ ವರ್ಣಿಸಿದ್ದಾರೆ. ಇಂತಹ ಕೃತಿಗಳನ್ನು ಓದುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆ ತಿಳಿದು ಅಭಿಮಾನ ಒಡಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕ್ರೆಸ್ಟ್ ಕಾಲೇಜಿನ ಅಧ್ಯಕ್ಷ ಹಿತೇಶ್ ಶಾ ಅವರು ನಾಡಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಭವ್ ಶಾ, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ. ರಾಕೇಶ್, ಕನ್ನಡ ಪ್ರಾಧ್ಯಾಪಕರಾದ ಎಸ್. ಚಿರಂಜೀವಿ, ಪುಷ್ಪ ಮತ್ತಿತರರು ಉಪಸ್ಥಿತರಿದ್ದರು.

‘ಕನ್ನಡ ಕಲೆಯ ವೈಭವ’ದ ವಸ್ತು ಪ್ರದರ್ಶನ, ಕನ್ನಡ ಭಾಷಾ ಚಟುವಟಿಕೆಯ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ, ಭರತನಾಟ್ಯ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಿರುನಾಟಕ, ಗುರುಶಿಷ್ಯರು ಹಾಸ್ಯ ನಾಟಕ ಮತ್ತು ನೃತ್ಯ, ಜಾನಪದ ಹಾಡುಗಳ ನೃತ್ಯ, ಕನ್ನಡ ಭಾಷಾಭಿಮಾನದ ಹಾಡುಗಳ ನೃತ್ಯ ಸೇರಿದಂತೆ ನಾಡುನುಡಿ ಬಿಂಬಿದುವ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.

See also  ಹುಚ್ಚು ನಾಯಿಗಳ ದಾಳಿ: 50ಕ್ಕೂ ಹೆಚ್ಚು ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು