News Kannada
Thursday, December 08 2022

ಮೈಸೂರು

ಸರಗೂರು: ಬ್ಯೂಟಿ ಪಾರ್ಲರ್ ಗೆ ಹೋದ ಯುವತಿ ನಾಪತ್ತೆ

Girl goes missing after going to beauty parlour
Photo Credit : By Author

ಸರಗೂರು: ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇಲ್ಲಿಗೆ ಸಮೀಪದ ಬಿ ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ ಮಟಕೆರೆ ಕಾಲೋನಿಯಲ್ಲಿ ನಡೆದಿದೆ.

ಬಿ ಮಟಕೆರೆ ಕಾಲೋನಿಯ ನಿವಾಸಿ ಕಿರುಮಾರ ಎಂಬುವರ ಪುತ್ರಿ ಕವಿತಾ(26) ನಾಪತ್ತೆಯಾದ ಯುವತಿ. ಈಕೆ ನವೆಂಬರ್ 7ರಂದು ಬೆಳಿಗ್ಗೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆಗೂ ವಾಪಸ್ ಬಂದಿರುವುದಿಲ್ಲ ಎಂದು ತಂದೆ ಕಿರುಮಾರ ಸರಗೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ನಾಪತ್ತೆಯಾದ ಯುವತಿ ಕವಿತಾ ದುಂಡು ಮುಖ ಹೊಂದಿದ್ದು, ಕೆಂಪು ಬಣ್ಣ, ಸಾಧಾರಣ ಮೈಕಟ್ಟು, ಎತ್ತರ 4.5 ಅಡಿ, ಮನೆಯಿಂದ ಹೊರ ಹೋದಾಗ ನೇರಳೆ ಬಣ್ಣದ ಚೂಡಿದಾರ್ ಧರಿಸಿದ್ದು, ಈ ಕನ್ನಡ ಭಾಷೆ ಹಾಗೂ ಬೆಟ್ಟಕುರುಬರ ಭಾಷೆ ಮಾತನಾಡುತ್ತಾಳೆ.

ಈಕೆಯ ಬಗ್ಗೆ ಮಾಹಿತಿ ತಿಳಿದಲ್ಲಿ ಸರಗೂರು ಪೊಲೀಸ್ ಠಾಣೆ 08228-265542, ಉಪನಿರೀಕ್ಷಕರು ಸರಗೂರು ಮೊ:9480805064. ವೃತ್ತ ನಿರೀಕ್ಷಕರು ಸರಗೂರು ಮೊ :9480805037ನ್ನು ಸಂಪರ್ಕಿಸುವಂತೆ ಸರಗೂರು ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.

See also  ಮುಂದಿನ ವಾರದಲ್ಲಿ ಮೈಸೂರು ದಸರಾ ಉನ್ನತ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು