News Kannada
Monday, December 05 2022

ಮೈಸೂರು

ಮೈಸೂರು: ಕ್ರೀಡೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ- ಅಥ್ಲೀಟ್‌ ಸೋಮಶೇಖರ್‌

Photo Credit : By Author

ಮೈಸೂರು: ಕ್ರೀಡೆ ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಅಂಶ. ನಾನು ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡಿದ್ದೇನೆ. ಮಕ್ಕಳು ಓದಿನ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಂಡರೆ ಆರೋಗ್ಯ, ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ಅಂತಾರಾಷ್ಟ್ರೀಯ ಅಥ್ಲೀಟ್‌ ಹಾಗೂ ಎಂ ಡಿಎಎ ನ ಅಧ್ಯಕ್ಷರಾದ ಎಸ್.ಸೋಮಶೇಖರ್‌ ಅಭಿಪ್ರಾಯಪಟ್ಟರು.

ನಗರದ ಹರಿ ವಿದ್ಯಾಲಯದ ವತಿಯಿಂದ ಅಲಯನ್ಸ್‌ ಸ್ಕ್ವೇರ್‌, ಎಂ ಡಿಎಎ, ಡಿಕ್ಯಾತಲಾನ್‌, ಕಾಮಾಕ್ಷಿ ಆಸ್ಪತ್ರೆ, ಟಾರ್‌ಕ್ಯೂ, ಶಿವ ಕೇಟರರ್ಸ್‌ ಸಹಯೋಗದಲ್ಲಿ 15ನೇ ವರ್ಷದ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ʻವಿದ್ಯಾರ್ಥಿ ರನ್‌ʼ ಮ್ಯಾರಥಾನ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಲ್ಲಿ ಓದಿನ ಜೊತೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಸಹ ಬಹಳ ಮುಖ್ಯ. ಈ ದಿನದ ಕಾರ್ಯಕ್ರಮದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಸೇರಿರುವುದನ್ನು ನೋಡಿದರೆ ಸಂತಸವಾಗುತ್ತದೆ. ಪೋಷಕರು ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವಂತೆ ಉತ್ತೇಜಿಸಬೇಕು. ಕೆಲವರು ಅದರಿಂದಲೇ ಬದುಕು ರೂಪಿಸಿಕೊಳ್ಳುತ್ತಾರೆ, ಸಾಧನೆ ಮಾಡುತ್ತಾರೆ. ಅದರಲ್ಲಿ ದೈಹಿಕ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಸೇಫ್‌ ವ್ಹೀಲ್ಸ್‌ ಗ್ರೂಪ್‌ ಆಫ್‌ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್‌ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಮಾತ್ರವಲ್ಲದೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಮೈಸೂರಿನಲ್ಲಿ ಶಾಲೆಯೊಂದರ ವತಿಯಿಂದ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ವಿಚಾರ. ಈಗಿನ ಮಕ್ಕಳು ಬಹುಪಾಲು ಆನ್‌ಲೈನ್‌ ಗೇಮ್‌ಗಳಲ್ಲಿ ಸಮಯ ಕಳೆಯುತ್ತಾರೆ. ಅವರಿಗೆ ದೈಹಿಕ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದು ಅಭಿಪ್ರಾಯಪಟ್ಟರು.

ಹರಿ ವಿದ್ಯಾಲಯದ ಅಧ್ಯಕ್ಷ ಶ್ರೀನಿವಾಸ ಹೊಸಮನೆ ಮಾತನಾಡಿ, ವಿದ್ಯಾರ್ಥಿ ರನ್‌ ಅನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಈ ಬಾರಿ ಬಂದಿರುವ ಪ್ರತಿಕ್ರಿಯೆ ನೋಡಿ ನಮಗೆ ಬಹಳ ಸಂತಸವಾಗಿದೆ. ಸುಮಾರು 350 ಮಂದಿ ಮ್ಯಾರಥಾನ್‌ನಲ್ಲಿ ಭಾಗಿಯಾಗಿರುವುದನ್ನು ನೋಡಿ ಖುಷಿಯಾಗಿದೆ. ಇನ್ನು ಮುಂದೆ ಪ್ರತಿವರ್ಷ ಈ ಕಾರ್ಯಕ್ರಮ ಮಾಡುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.

350 ಜನರು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದರು. ಹರಿ ವಿದ್ಯಾಲಯದಿಂದ ಆರಂಭವಾದ ಮ್ಯಾರಥಾನ್‌ ನಾಲ್ಕು ವಸತಿ ಬಡಾವಣೆಗಳನ್ನು ದಾಟಿ ಮತ್ತೆ ಹರಿ ವಿದ್ಯಾಲಯಕ್ಕೆ ಬಂದು ತಲುಪಿತು.

ಸದಸ್ಯರಾದ ಎಚ್.ಆರ್.ಭಗವಾನ್‌, ನಿರ್ದೇಶಕರಾದ ಕೆ.ವಿ.ಸತ್ಯನ್‌, ಪ್ರಾಂಶುಪಾಲರಾದ ಡಾ.ಎಸ್.ಭಾರತಿ ಶಂಕರ್, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸುಮಾರು 20 ಶಾಲೆಗಳ ವಿದ್ಯಾರ್ಥಿಗಳು, ಅವರ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

See also  ಬಹ್ರೇನ್: ಟ್ರಾಕ್ಸ್ ಪ್ರೊಡಕ್ಷನ್ ಅವರ ಪಯಣ ಆಲ್ಬಂ ಸಾಂಗ್ ಆಗಸ್ಟ್ 7 ರಂದು ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು