ಮೈಸೂರು: ಪ್ರಜ್ಞಾವಂತ ನಾಗರಿಕ ವೇದಿಕೆ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಶ್ರೀ ಶಾರದಾ ದೇವಿಯ 170 ಜಯಂತಿ ಪ್ರಯುಕ್ತ ಆಧ್ಯಾತ್ಮಿಕ ಜಗತ್ತು ಎಂಬ ಕಾರ್ಯಕ್ರಮವನ್ನು ರಾಮಕೃಷ್ಣ ನಗರ ವೃತ್ತದಲ್ಲಿ ಶ್ರೀ ಶಾರದಾಮಾತೆಯ ಭಾವಚಿತ್ರಕ್ಕೆ ಮಹಾಪೌರರಾದ ಶಿವಕುಮಾರ್ ರವರು ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಮಹಾಪೌರರಾದ ಶಿವಕುಮಾರ್ ಮಾತನಾಡಿ ರಾಮಕೃಷ್ಣಪರಮಹಂಸರು ಮತ್ತು ಅವರ ಧರ್ಮಪತ್ನಿ ಶಾರದಾಮಾತೆ ದೇಶದಲ್ಲಿ ಸದೃಢ ಶಕ್ತಿಯುಳ್ಳ ಯುವಕರ ಪಡೆಯನ್ನ ನಿರ್ಮಿಸಬೇಕು ಎಂದು ಚಿಂತಿಸುತ್ತಾರೆ ಅಂದಿನ ಅವರ ಮಾನಸಪುತ್ರ ಸ್ವಾಮಿ ವಿವೇಕಾನಂದರು ಎಲ್ಲವನ್ನು ಸಾಧಿಸಿ ಭಾರತವನ್ನ ವಿಶ್ವಗುರು ಮಾಡಲು ಶ್ರಮಿಸಿದರು ರಾಮಕೃಷ್ಣ ಆಶ್ರಮವನ್ನ ಎಲ್ಲೆಡೆ ಸ್ಥಾಪಿಸಿ ಅದರಿಂದ ಕೋಟ್ಯಾಂತರ ತರುಣರು ಪ್ರೇರೆಪಿತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದರು
ಸಮಾಜಸೇವಕ ಕೆ. ರಘುರಾಂವಾಜಪೇಯಿ ಮಾತನಾಡಿ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳಿಗೆ ಶಾರದಾ ಮಾತೆ ಅವರು ಪ್ರೇರಣೆ. ಆದರೆ ಹಲವರಿಗೆ ಶಾರದಾ ಮಾತೆಯ ಪರಿಚಯವಿಲ್ಲ. ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿನ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣ ಭಾರತದ ಚಿತ್ರಣ ಬದಲಿಸಿತ್ತು. ಸ್ವಾಮಿ ವಿವೇಕಾನಂದರ ಹಲವು ವೈಚಾರಿಕೆ ಚಿಂತನೆಗಳಿಗೆ ಶಾರದ ಮಾತೆ ಸ್ಪೂರ್ತಿಯಾಗಿದ್ದರು. ವಿವೇಕಾನಂದರು ಇಂದಿಗೂ ಪ್ರಸ್ತುತ. ಯುವಕರು ಅವರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಿದೆ. ವಿವೇಕಾನಂದರ ವಿಚಾರಗಳನ್ನು ಜನರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ದೇಶಾದ್ಯಂತ ರಾಮಕೃಷ್ಣ ಆಶ್ರಮ ಸ್ಥಾಪಿಸಲಾಗಿದೆ. ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ “ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು, ತನ್ಮೂಲಕ ಮೂವರು ಮಹನೀಯರನ್ನು ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದರು.
ವೈದ್ಯ ಸಾಹಿತಿ ಎಸ್. ಪಿ ಯೋಗಣ್ಣ ರವರು ಮಾತನಾಡಿ ಇಂದಿನ ಸಮಾಜದಲ್ಲಿ ಯುವಕ ಯುವತಿಯರು ಸಾಧನೆ ಹಾದಿಯನ್ನ ಬಿಟ್ಟು ಅನಾವಶ್ಯಕ ಸಮಯ ವ್ಯರ್ಥದ ಕಡೆ ಮುಂದುಗುತ್ತಿರುವುದು ಅಪಾಯಕರ, ನಮ್ಮಲ್ಲಿರುವ ಗುಣಾತ್ಮಕ ಅಂಶಗಳು ಆಂತರಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರಾಚೀನ ಮತ್ತು ಆಧುನಿಕ ಇವೆರಡಕ್ಕೂ ಆದರ್ಶದಂತಿರುವ ಮಾತೆ ಶಾರದಾದೇವಿಯವರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ತಮ್ಮ ವೈಯಕ್ತಿಕ, ಕೌಟುಂಬಿಕ, ಸಮಾಜಿಕ ಜೀವನದಲ್ಲಿ ಶಾಂತಿ–ಆನಂದ ಪಡೆಯಲು ಸಾಧ್ಯ ಎಂದರು.
ಪರಮಪೂಜ್ಯಇಳೈಆಳ್ವಾರ್ ಸ್ವಾಮೀಜಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಎನ್ಎಂ ನವೀನ್ ಕುಮಾರ್, ನಗರ ಪಾಲಿಕೆ ಲಕ್ಷ್ಮಿ ಕಿರಣ್ ಗೌಡ, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಮಿರ್ಲೆ ಪನೀಶ್, ಜಿ ರಾಘವೇಂದ್ರ, ಸಿದ್ದೇಶ್, ಎಸ್ ಎನ್ ರಾಜೇಶ್, ಚಾಮುಂಡೇಶ್ವರಿ ಯುವ ಬಳಗ ಅಧ್ಯಕ್ಷ ರಾಕೇಶ್, ಎಸ್ ಬಿ ವಾಸುದೇವಮೂರ್ತಿ, ಮಂಜುನಾಥ್, ಮಹೇಶ್ ಕುಮಾರ್, ರಂಗನಾಥ್, ಸುಚಿಂದ್ರ, ಚಕ್ರಪಾಣಿ ಇನ್ನಿತರರು ಇದ್ದರು.