News Kannada
Sunday, January 29 2023

ಮೈಸೂರು

ಮೈಸೂರು: ದಡದಕಲ್ಲಹಳ್ಳಿಯಲ್ಲಿ ಮುಸ್ಸಂಜೆ ಮಕ್ಕಳ ರಂಗೋತ್ಸವ

Mysuru: Dusk Children's Theatre Festival at Dadadakallahalli
Photo Credit : By Author

ಮೈಸೂರು: ಮೈಸೂರಿನ ಹೆಸರಾಂತ ರಂಗತಂಡಗಳಲ್ಲೊಂದಾದ ರಂಗಯಾನ ಟ್ರಸ್ಟ್ ಮೈಸೂರು (ರಿ.) ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ ದೇಶದಾದ್ಯಂತ ರಂಗಸಂಚಾರ ಮಾಡಿ ಪ್ರೇಕ್ಷಕರನ್ನು ಸೆಳೆದಿದೆ. ಮುಂದು ವರೆದು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುಸ್ಸಂಜೆ ಮಕ್ಕಳ ರಂಗೋತ್ಸವ ಎಂಬ ಹೆಸರಿನಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಮೈಸೂರು ತಾಲ್ಲೂಕು, ಇಲವಾಲ ಹೋಬಳಿಯ ದಡದಕಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದೆ.

ಜ.11 ಮತ್ತು 12ರಂದು ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ, ವಿಶೇಷವಾಗಿ ಈ ಬಾರಿ ಮೂರು ಶಾಲೆಗಳನ್ನು ಆಯ್ಕೆಮಾಡಿಕೊಂಡು ಏಕಕಾಲದಲ್ಲಿ ರಂಗಶಿಬಿರ ಆಯೋಜಿಸಿ ಅಲ್ಲಿನ ಮಕ್ಕಳಿಗೆ ನಮ್ಮ ಸಂಸ್ಥೆಯ ಕಲಾವಿದರು ರಂಗಪ್ರಯೋಗ ಸಿದ್ದಪಡಿಸಿದ್ದಾರೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ತ್ಯಾಗರಾಜು ದೇವರಹಳ್ಳಿ ನಿರ್ದೇಶನದಲ್ಲಿ ಬಿ.ವಿ.ಕಾರಂತರ ‘ಪಂಜರ ಶಾಲೆ’, ಮೈಸೂರು ತಾಲ್ಲೂಕು ಮೊಗರಳ್ಳಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಶಾಲೆಯ ಮಕ್ಕಳಿಗೆ ಮಂಜು ಎಲ್ ಎಸ್ ರವರ ನಿರ್ದೇಶನದಲ್ಲಿ ‘ಚಂದ್ರಶೇಖರ ಆಜಾದ್ ಜೀವನಾದಾರಿತ ನಮ್ಮ ನಡಿಗೆ ಸ್ವಾತಂತ್ರ್ಯದ ಕಡೆಗೆ’, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಶ್ರೀ ದಯಾಶಂಕರ ಗುರುಕುಲದ ಆಶ್ರಮ ಮಕ್ಕಳಿಗೆ “ಆಲೀಬಾಬ ಮತ್ತು ನಲವತ್ತು ಕಳ್ಳರು” ನಾಟಕಗಳನ್ನು ಸಿದ್ದಪಡಿಸಿ ಈ ಎಲ್ಲಾ ಮಕ್ಕಳ ನಾಟಕಗಳನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವನ್ನು ರಂಗಯಾನ ಟ್ರಸ್ಟ್ ಮಾಡಿರುವುದು ವಿಶೇಷವಾಗಿದೆ.

ಅಭಿನಯಿಸುವ ಮಕ್ಕಳು ಒಂದೆಡೆಯಾದರೆ ಮಾಡಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು ಸೂಕ್ತವೆಂಬ ಮಾತಿನಂತೆ ದಡದಕಲ್ಲಹಳ್ಳಿಯ ಮಕ್ಕಳನ್ನೆಲ್ಲಾ ಒಂದುಗೂಡಿಸಿ ಎರಡು ದಿನಗಳ ಕಾಲ ಮೂರು ನಾಟಕಗಳನ್ನು ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ. ರಂಗಯಾನ ತಂಡದ ಈ ಕಾರ್ಯಕ್ಕೆ ಪ್ರೇಕ್ಷಕರು ಶುಭಹಾರೈಸಿದ್ದಾರೆ.

See also  ಮೈಸೂರು: ನಗರದಲ್ಲಿ ಅ.12ರವರೆಗೆ ವಿದ್ಯುತ್ ದೀಪಾಲಂಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು