ಮೈಸೂರು: ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗವು ಅಂತರಾಷ್ಟ್ರೀಯ ಹಿಂದಿ ದಿವಸ್ ನಿಮಿತ್ತ ಮೈಸೂರು ಬುಕ್ ಕ್ಲಬ್ನ ಸಹಯೋಗದೊಂದಿಗೆ ಆಯೋಜಿಸಿದ್ದ ಹಿಂದಿ ಚಲನಚಿತ್ರ ವಿಮರ್ಶೆ ಸ್ಪರ್ಧೆಯಲ್ಲಿ ಯುಸ್ರಾ ಹನೀನ್ – ಪ್ರಥಮ, ಬತುಲ್- ದ್ವಿತೀಯ, ಅನ್ಸೆಲ್ ಹರಿ- ತೃತೀಯ ಸ್ಥಾನ, ಮತ್ತು ಅಫ್ತಾಬ್ ಆಲಂ, ಸಾಯಿ ದರ್ಶನ್ ಕೆ, ನರೇಶ್ ಎಂ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಕಾಲೇಜು ಸಭಾಂಗಣದಲ್ಲಿ ನಡೆದ ಹಿಂದಿ ಚಲನಚಿತ್ರ ವಿಮರ್ಶೆ ಸ್ಪರ್ಧೆಯಲ್ಲಿ ರೆ.ಫಾ. ಮರಿಯಾ ಜೇವಿಯರ್ , ವೈಸ್ ರೆಕ್ಟರ್, ಪ್ರಾಂಶುಪಾಲ ಡಾ. ರವಿ ಜೆ ಡಿ ಸಲ್ದಾನ, ಮೈಸೂರು ಸಾಹಿತ್ಯೋತ್ಸವದ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ಶ್ರೀಮತಿ ಶುಭಾ ಸಂಜಯ್ ಅರಸ್ ಆಗಮಿಸಿದ್ದರು.
ಸ್ಪರ್ಧಾ ಕಾರ್ಯಕ್ರಮವು “ಸೋಚ್” ಸಾಕ್ಷ್ಯಚಿತ್ರ ಪ್ರದರ್ಶಿಸುವ ಮೂಲಕ ಆರಂಭವಾಯಿತು, ಇದನ್ನು ವಿದ್ಯಾರ್ಥಿಗಳು ತಮ್ಮ ಮೌಖಿಕ ಪ್ರಸ್ತುತಿ ಮೂಲಕ ಪರಿಶೀಲಿಸಿದರು. ಡಾ. ಚೈತ್ರಾ ಎಸ್, ಶ್ರೀ ಪ್ರವೀಣ್ ಹೂಗಾರ್, ನಂದಿತಾ ರಾವ್, ಹರ್ಷಿಯಾ, ನಿಕೋಲಾಸ್ ತೀರ್ಪುಗಾರರಾಗಿದ್ದರು. ಸ್ಪರ್ಧೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು (ಹಾಸನ), ವಿದ್ಯಾ ವರ್ಧಕ, ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜು ಮತ್ತು ಶೇಷಾದ್ರಿಪಂ ಕಾಲೇಜಿನ ಒಟ್ಟು 168 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಒಟ್ಟು 6 ಮಂದಿ ವಿಜೇತರಿಗೆ ನಗದು ಬಹುಮಾನ, ಚಿನ್ನದ ಪದಕ ಹಾಗೂ ಮತ್ತು ಪ್ರಮಾಣ ಪತ್ರಗಳನ್ನು ಬಹುಮಾನವಾಗಿ ವಿತರಿಸಲಾಯಿತು ಒಟ್ಟು 168 ವಿದ್ಯಾರ್ಥಿಗಳು ಭಾಗವಹಿಸಿದ್ದು, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ಣಿಮಾ ಉಮೇಶ್ ಸ್ವಾಗತಿಸಿದರೆ, ಸಹಾಯಕ ಪ್ರಾಧ್ಯಾಪಕ ಡಾ.ದಿವಾಕರ್ ವಂದಿಸಿದರು. ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಅಫ್ನಾನ್ ಪಾಷಾ, ಎರುಂ.ಆರ್, ಸಮ್ರೀನ್ ತಾಜ್, ರೀನಾ ಮಹಮ್ಮದಿ ಉಪಸ್ಥಿತರಿದ್ದರು.