ಮೈಸೂರು: ನೈಸರ್ಗಿಕ ಪದ್ಧತಿಯಲ್ಲಿ ಕೃಷಿ ಮಾಡಿ ಹೆಚ್ಚು ಲಾಭಗಳಿಸುವಂತೆ ಗಾವಡಗೆರೆ ಕೃಷಿ ಅಧಿಕಾರಿ ಶ್ರೀಕಾಂತ್ ರೈತರಿಗೆ ಸಲಹೆ ನೀಡಿದರು.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರು ಗ್ರಾಮದಲ್ಲಿ ಐಟಿಸಿ ಮತ್ತು ಔಟ್ ರಿಚ್ ಸಂಸ್ಥೆ ಸಹಯೋಗದಲ್ಲಿ ಭತ್ತದ ಬೆಳೆ ಕ್ಷೆತ್ರೋತ್ಸವ ಹಾಗೂ ಕಟಾವು ಪದ್ಧತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸಂಸ್ಥೆಗಳು ನೀಡುವ ಸಲಹೆಗಳನ್ನು ಪಡೆದು ಕಡಿಮೆ ವೆಚ್ಚದಲ್ಲಿ ಬೆಳೆಗಳನ್ನು ಹೆಚ್ಚು ಬೆಳೆಯುವುದರ ಜೊತೆಗೆ ಅವರು ನೀಡುವ ಸಲಹೆ ಸೂಚನೆಗಳನ್ನು ಅನುಸರಿಸಿ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಾಗುತ್ತದೆ ಜೊತೆಗೆ ರೈತರು ಕೃಷಿ ಇಲಾಖೆಯಲ್ಲಿ ಸಿರಿಧಾನ್ಯ ಬೆಳೆದರೆ ಒಂದು ಎಕರೆಗೆ 4ಸಾವಿರ ಪ್ರೋತ್ಸಾಹ ಉತ್ಸಾಹಧನ ನೀಡಲಾಗುತ್ತದೆ.
ಬೆಳೆ ಸ್ಪರ್ಧೆಗಳಲ್ಲಿ ರೈತರು ಭಾಗವಹಿಸಿ ನಗದು ಬಹುಮಾನವನ್ನು ಪಡೆದುಕೊಳ್ಳಬಹುದು ಇಂತಹ ಮಾಹಿತಿಗಳನ್ನು ಕೃಷಿ ಕೇಂದ್ರಗಳಲ್ಲಿ ಪಡೆಯಬೇಕು ಇಲಾಖೆಯಿಂದ ದೊರೆಯುವ ಸವಲತ್ತುಗಳಿಗೆ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆಯಬೇಕು. ಸದ್ಯಕ್ಕೆ ಬಿತ್ತನೆ ಬೀಜ ಟಾರ್ಪಲ್ ಹಾಗೂ ಹನಿ ನೀರಾವರಿ ಸಲಕರಣೆಗೆ ಅರ್ಜಿ ಸ್ವೀಕರಿಸುತ್ತಿದ್ದು ರೈತರು ತಮ್ಮ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ ತಾವು ತಮ್ಮ ಭೂಮಿಯಲ್ಲಿ ಬೆಳೆದ ಹಿಂಗಾರು ಮತ್ತು ಮುಂಗಾರು ಬೆಳೆ ಸಮೀಕ್ಷೆಯನ್ನು ತಾವೇ ಮೊಬೈಲ್ ನಲ್ಲಿ ಬೆಳೆ ದಾಖಲಿಸಿಕೊಳ್ಳಬಹುದು ಜೊತೆಗೆ ತಾವು ಎಫ್ ಐ ಡಿ ಸಂಖ್ಯೆಯನ್ನು ಕಡ್ಡಾಯವಾಗಿ ಎಲ್ಲಾ ರೈತರು ನಮೂದಿಸಿಕೊಳ್ಳುವುದು ಇದರಿಂದ ಸರ್ಕಾರಿ ಸೌವಲತ್ತು ಪಡೆಯಲು ಮತ್ತು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ.
ವ್ಯವಸಾಯದ ಬದಲಾವಣೆಯಲಿ ತಾಂತ್ರಿಕತೆ ಅಗತ್ಯ ಮುಂದಿನ ಹಂತದಲ್ಲಿ ಸಾವಯುವ ಪದ್ಧತಿಯನ್ನು ಹೆಚ್ಚು ಅಳವಡಿಸಿಕೊಳ್ಳ ದಿನ ಬರುತ್ತದೆ ತಾವು ಬೆಳೆದ ಬೆಳೆಯಲ್ಲಿ ಬನಿ ಅಂಶ ಹೆಚ್ಚು ಕಾಣಲು ಸಾಧ್ಯ ಆದ್ದರಿಂದ ರೈತರು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.
ಔಟ್ ರಿಚ್ ಸಂಸ್ಥೆಯ ಕೃಷಿ ಅಧಿಕಾರಿ ಸಹನಾ ಮಾತನಾಡಿ ರೈತರು ಹಳೆಯ ಪದ್ಧತಿಯನ್ನು ಕೈ ಬಿಟ್ಟು ಹೊಸ ಹೊಸ ವಿಧಾನದ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಇಂದಿನ ದಿನಗಳಲ್ಲಿ ಒಂದು ಎಕರೆ ಭತ್ತ ಬೆಳೆಯಲು ಸುಮಾರು 25 ಸಾವಿರ ಖರ್ಚು ಮಾಡುತ್ತಿದ್ದೀರಾ ನಮ್ಮ ಸಂಸ್ಥೆ ನೀಡುವ ಸಲಹೆ ಸೂಚನೆಗಳನ್ನು ಪಡೆದು ಡ್ರಂ ಸೀಡ್ ಪದ್ಧತಿಯಲ್ಲಿ ಭತ್ತ ಬೆಳೆದರೆ ಕೇವಲ 10 ಸಾವಿರ ಖರ್ಚಿನಲ್ಲಿ ಒಂದು ಎಕರೆ ಭತ್ತ ಬೆಳೆಯಬಹುದು ಹಿಂದೆ ಒಂದು ಎಕರೆ ಭತ್ತದ ನಾಟಿ ಮಾಡಲು 40 ಕೆ. ಜಿ. ಭತ್ತದ ಪೈರುಗಳನ್ನು ನಾಟಿ ಮಾಡುತ್ತಿದ್ದೀರಿ ಆದರೆ ಈ ಹೊಸ ಪದ್ದತಿಯಲ್ಲಿ ಕೇವಲ ಒಂದು ಎಕರೆಗೆ 8 ಕೆಜಿ ಬಿತ್ತನೆ ಭತ್ತ ಸಾಕಾಗುತ್ತದೆ ಜೊತೆಗೆ ಈ ಪದ್ಧತಿ ನಾಟಿಗೆ ಕಡಿಮೆ ಪ್ರಮಾಣದ ನೀರು ಸಾಕು ಕೇವಲ ತೇವಾಂಶವಿದ್ದರೆ ಭತ್ತ ಬೆಳೆಯಬಹುದು ನಾವು ನೀಡುವ ಆರ್.ಎನ್.ಎನ್. ತಳಿಯ ಭತ್ತದ ಅಕ್ಕಿ ಸಕ್ಕರೆ ಕಾಯಿಲೆಯುಳ್ಳ ಜನರು ಊಟಕ್ಕೆ ಉಪಯೋಗಿಸಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರೇಗೌಡ ಪ್ರಗತಿಪರ ರೈತರಾದ ಚಂದ್ರಣ್ಣ,ಶಿವಪ್ಪ, ಸಂಸ್ಥೆಯ ಯೋಜನಾ ಸಮನ್ವಯ ಅಧಿಕಾರಿ ಮಹಾದೇವ್, ಸಮುದಾಯ ಸಂಘಟಕರಾದ ರಂಗಸ್ವಾಮಿ, ಸಿಬ್ಬಂದಿಗಳಾದ ಪ್ರಕಾಶ್, ಸಾಗರ್, ಜವರನಾಯಕ, ಪ್ರಮೋದ್, ಹಾಗೂ ನೂರಾರು ರೈತರು ಭಾಗವಹಿಸಿದ್ದರು.