ನಂಜನಗೂಡು: ಜ.29ರಂದು ಭಾನುವಾರ ನಂಜನಗೂಡಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾಳು ಬಿದ್ದಿರುವ ಪ್ರವಾಸಿ ಮಂದಿರಕ್ಕೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ.
ಎರಡನೇ ಬಾರಿಗೆ ನಂಜನಗೂಡಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ, ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಆಗಮಿಸುವ ವೇಳೆ ಚಾಮರಾಜನಗರ ರಸ್ತೆ, ಹಾಗೂ ನಂಜನಗೂಡಿನ ಇನ್ನುಳಿದ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ಮುಚ್ಚಿದ ಅಧಿಕಾರಿಗಳು, ಈ ಬಾರಿ ನಗರದ ಪ್ರವಾಸಿ ಮಂದಿರ ಹಾಗೂ ರಸ್ತೆಗಳನ್ನು ಸ್ವಚ್ಛ ಮಾಡಲಾಗುತ್ತಿದೆ.
2004ರಲ್ಲಿ ಧರಮಸಿಂಗ್ ಲೋಕೋಪಯೋಗಿ ಸಚಿವರು ಹಾಗೂ ಮಾಜಿ.ಸಚಿವ ಡಾ.ಎಚ್ ಸಿ ಮಹದೇವಪ್ಪ ಕೇಂದ್ರ ಸಚಿವರಾಗಿದ್ದ ಹಾಲಿ ಸಂಸದ ಶ್ರೀನಿವಾಸ್ ಪ್ರಸಾದ್ ರವರು ಅನುದಾನ ನೀಡಿ ಪ್ರವಾಸಿ ಮಂದಿರವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅಂದಿನಿಂದ ಇಂದಿನ ತನಕ ಬಾಳು ಬಿದ್ದಬಂಗಲೆಯಯಂತಾಗಿತ್ತು. ಆದರೆ ಇದನ್ನು ಸಾರ್ವಜನಿಕರ ಬಳಕೆಗೆ ನೀಡಿರಲಿಲ್ಲ.
ಶಾಸಕ ಬಿ.ಹರ್ಷವರ್ಧನ್ ಗಮನಹರಿಸಿ, ಬಾಳು ಬಿದ್ದ ಪ್ರವಾಸಿ ಮಂದಿರವನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಆಗಮಿಸುತ್ತಾರೆ ಎಂದರೆ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಯಾಕೆ ಮಾಡುವುದಿಲ್ಲ ಎನ್ನುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಮನುಷ್ಯರಾ..? ಇಲ್ಲಿ ಇರುವವರು ಮನುಷ್ಯರಲ್ಲವೇ..? ಹಾಗಾದರೆ ಪ್ರತಿ ತಿಂಗಳು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ತಾಲೂಕುಗಳಿಗೆ ಮುಖ್ಯಮಂತ್ರಿಗಳು ಆಗಮಿಸಿದರೆ ಇನ್ನು ಅಭಿವೃದ್ಧಿ ಆಗುತ್ತದೆ. ಎಂದು ನಂಜನಗೂಡಿನಲ್ಲಿ ಯುವ ಮುಖಂಡ ಬಾಲರಾಜ್ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.