ನಂಜನಗೂಡು: ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಹನುಮನಪುರ ಗ್ರಾಮದ ಜಯಮ್ಮವಿಶೇಷ ಚೇತನ ಮಹಿಳೆಯ ಮನೆಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಆಕೆಯನ್ನು ಮೈಸೂರಿನ ಜೆಎಸ್ಎಸ್ ವೃದ್ಧಾ ಶ್ರಮಕ್ಕೆ ಸ್ಥಳಾಂತರ ಮಾಡಿದ್ದಾರೆ.
ಹನುಮನಪುರ ಗ್ರಾಮದ ಲೇಟ್ ಮಣಿಯಯ್ಯ ಎಂಬುವವರ ಪುತ್ರಿ ಜಯಮ್ಮ ಎಂಬ ವಿಶೇಷ ಚೇತನ ಮಹಿಳೆ ಬಂಧುಬಳಗವಿಲ್ಲದೆ ಅನಾಥರಾಗಿದ್ದರು. ಮೂಲಸೌಕರ್ಯವಿಲ್ಲದ ಪುಟ್ಟ ಗುಡಿಸಲಿನಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದರು. ಅಂಗವಿಕಲರಿಗಾಗಿ ದೊರೆಯುವ ಪಿಂಚಣಿ ಹಣವೂ ಸಮರ್ಪಕವಾಗಿ ದೊರೆಯದೇ ಜೀವನ ನಡೆಸುವುದೇ ದುಸ್ತರವಾಗಿತ್ತು. ಅಕ್ಕಪಕ್ಕದವರು ನೀಡುವ ಆಹಾರವನ್ನು ಆಶ್ರಯಿಸುವ ಸ್ಥಿತಿಯಿತ್ತು. ಮಹಿಳೆಯ ಸಂಕಷ್ಟದ ಬಗ್ಗೆ ನ್ಯೂಸ್ ಕರ್ನಾಟಕ ಮಾಧ್ಯಮದ ಅಂಗಸಂಸ್ಥೆ ನ್ಯೂಸ್ ಕನ್ನಡ ವೆಬ್‌ಸೈಟ್ ಮೊತ್ತಮೊದಲ ಬಾರಿಗೆ ಸಮಗ್ರ ವರದಿ ಪ್ರಕಟಿಸಿ, ಆಡಳಿತ, ಜನಪ್ರತಿನಿಧಿಗಳು, ಸಮಾಜದ ಕಣ್ತೆರೆಸುವ ಪ್ರಯತ್ನ ಮಾಡಿತ್ತು. ಮಂಗಳವಾರ ವರದಿ ಬಿತ್ತರಗೊಂಡ ಬಳಿಕ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುಳಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಶೇಷ ಚೇತನ ಮಹಿಳೆಯ ನೋವಿಗೆ ಸ್ಪಂದಿಸಿದ್ದಾರೆ. ಪಿಂಚಣಿ ಹಣದಲ್ಲಿ ಬದುಕುತ್ತಿದ್ದ ವಿಶೇಷ ಚೇತನ ಮಹಿಳೆಗೆ ಅಧಿಕಾರಿಗಳು ಇಂದು ಶಾಶ್ವತ ನೆಲೆ ನೀಡಿ, ಮೈಸೂರಿನ ಜೆಎಸ್ಎಸ್ ವೃದ್ಧಾಶ್ರಮಕ್ಕೆ ಸ್ಥಳಾಂತರ ಮಾಡಿದ್ದಾರೆ. ಅಂಗವಿಕಲ ಮಹಿಳೆಗೆ ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಹೇಳಿದ್ದಾರೆ.
ನ್ಯೂಸ್ ಕನ್ನಡ ಮಾಧ್ಯಮದಲ್ಲಿ ಪ್ರಕಟಗೊಂಡ ವರದಿಗೆ ಇಲ್ಲಿ ಕ್ಲಿಕ್ ಮಾಡಿ: