ಮೈಸೂರು: ಒಂದು ಮಗು ಬುದ್ದಿ ಮಾಂದ್ಯವಾಗದಿದ್ದಲ್ಲಿ, ಪ್ರತಿಯೊಂದು ಮಗುವೂ ಜೀನಿಯಸ್ ಆಗಿರುತ್ತದೆ ಎಂದು ಮನಶಾಸ್ತ್ರಜ್ಞ ರಾದ ಪ್ರೊ.ಎಂ.ಶ್ರೀಧರ ಮೂರ್ತಿ ಅವರು ತಿಳಿಸಿದರು.
ನಗರದ ಜೆಎಲ್‌ಬಿ ರಸ್ತೆಯ ರೋಟರಿ ಭವನದಲ್ಲಿ ‘ಇಕೋಸಿ’ಸೈಮ್’ ವರ್ಷದ ಶಿಕ್ಷಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಇಂದು ಮಕ್ಕಳಿಗೆ ಮಕ್ಕಳಾಗಿ ಬದುಕಲು ಸಾಧ್ಯವಿಲ್ಲದಂತಾಗಿದೆ. ಮಕ್ಕಳನ್ನು ಕೇವಲ ಸಿಲಬಸ್ ಒಳಗೆ ಮುಳುಗಿಸಿ, ಇತರ ಚಟುವಟಿಕೆಗಳಿಂದ ದೂರಯಿಡಲಾಗುತ್ತಿದೆ. ಮಕ್ಕಳ ಸಂತೋಷವನ್ನು ಕಸಿದುಕೊಳ್ಳಲಾಗಿದೆ. ಅವರಿಗೆ ಪ್ರಶ್ನೆಗಳನ್ನು ಕೇಳುವಂತೆ ನಾವು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
‘ಬೋಧನೆಯಲ್ಲಿ ನೂತನ ವಿಧಾನ, ಅಳವಡಿಸಿಕೊಂಡು ವಿದ್ಯಾರ್ಥಿಗಳ ಕಲಿಕೆಯಲ್ಲಿ ಬದಲಾವಣೆ ತಂದಿರುವ ಯುವ ಚಿಂತನ ಫೌಂಡೇಶನ್ ಸಂಸ್ಥೆ ಹಾಗೂ ಸ್ವಗ್ರ ಅಲೈಯನ್ಸ್ ಜೊತೆಗೂಡಿ ಮೈಸೂರು ಜಿಲ್ಲೆಯಲ್ಲಿ STEM(Science Technology Engineering and Mathematics) ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ 10 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ನಂಜನಗೂಡು ತಾಲ್ಲೂಕು-ತಗಡೂರಿನ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಡಿ.ಬಿ.ಗುರುಸ್ವಾಮಿ, ಹೊಸಕೋಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಶನ್ ಅರಾ ಬೇಗಮ್, ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಾಹಿರ ಬಾನು, ತಿ.ನರಸೀಪುರ-ಕೊಣ್ಣೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಿರಾಜ್ ‘ಉರ್ ರಹಮಾನ್, ಪಿರಿಯಾಪಟ್ಟಣ-ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ಸಿ.ಎಚ್.ಸ್ವಾಮಿ, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಬಿ.ವಿ.ಕಿರಣ್ ಕೆ.ಆರ್.ನಗರ ತಾಲ್ಲೂಕು-ಹೆಬ್ಬಸೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ವರ್ಣವತಿ, ಮಿರ್ಲೆಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕೆ.ಬಿ.ಕಾವ್ಯ, ಹುಣಸೂರು ತಾಲ್ಲೂಕು-ಧರ್ಮಪುರದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನಂಜೇಗೌಡ, ಬಿಳಿಕೆರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆರ್.ಬಿಂದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೇಮಂತ್ ಕುಮಾರ್, ಜಿಲ್ಲಾ ಸಮನ್ವಯಾಧಿಕಾರಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ನಾಗಶೆಟ್ಟಿ, ಉಪ ಪ್ರಾಂಶುಪಾಲ, ಅತ್ತಿಗೊಡು ಸರ್ಕಾರಿ ಶಾಲೆ, ಪ್ರೊ.ಎಂ.ಶ್ರೀಧರ ಮೂರ್ತಿ, ಮನಶಾಸ್ತ್ರಜ್ಞ ಹಾಗೂ ಸಿ.ಎ.ಗೌಡ, ಅದ್ಯಕ್ಷರು, ಯುವ ಚಿಂತನ ಪ್ರತಿಷ್ಠಾನ ಇವರು ಸಮಾರಂಭದಲ್ಲಿ ಭಾಗವಹಿಸಿ ಶಿಕ್ಷಕರಿಗೆ ಪ್ರಶಸ್ತಿ ನೀಡಿದರು.
ಪ್ರತಿಷ್ಠಾನದ ಸುಷ್ಮಾ, ಮದನ್ ಮೋಹನ್ ಈಶ್ವರ್ ಹಾಗೂ ರಂಜಿತಾ ಹಾಜರಿದ್ದರು.