ಮೈಸೂರು: ಕೆ.ಎನ್.ಪುಟ್ಟಬುದ್ದಿ ಫೌಂಡೇಷನ್, ಆರೋಗ್ಯ ಭಾರತಿ ಮತ್ತು ಸುಯೋಗ್ ಆಸ್ಪತ್ರೆ ವತಿಯಿಂದ ಭಾನುವಾರ ನಂಜನಗೂಡು ತಾಲ್ಲೂಕಿನ ಕೋಣನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೃಹತ್ ಉಚಿತಾ ಆರೋಗ್ಯ ತಪಾಸಣ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದ ಉದ್ಘಾಟನೆ ನಂತರ ಮಾತನಾಡಿದ ವರುಣಾ ವಿಧಾನಸಭಾ ಕ್ಷೇತ್ರದ ಮುಖಂಡರಾದ ಶರತ್ ಪುಟ್ಟಬುದ್ಧಿ ಗ್ರಾಮೀಣ ಪ್ರದೇಶದ ಜನರು ಸ್ವಸ್ಥ ಜೀವನ ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆ.ಎನ್.ಪುಟ್ಟಬುದ್ದಿ ಫೌಂಡೇಷನ್ ವತಿಯಿಂದ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವರುಣಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗುವುದು. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಪ್ರಥಮ ಜಿಲ್ಲಾ ಪರಿಷತ್ ಅಧ್ಯಕ್ಷರಾದ ಕೆ. ಎನ್. ಪುಟ್ಟಬುದ್ಧಿ, ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶರತ್ ಪುಟ್ಟಬುದ್ಧಿ, ಕೋಣನೂರು ಗ್ರಾಮ ಪಂಚಾಯಿತಿ ಸದಸ್ಯಸರುಗಳಾದ ಮಹದೇವಸ್ವಾಮಿ, ರವಿಕುಮಾರ್, ಮಹೇಶ, ಮಹದೇವಸ್ವಾಮಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವಣ್ಣ, ಮಾದಪ್ಪ, ಜೈಶಂಕರ್, ಶಿವಕುಮಾರ್, ಗುರುಮಲ್ಲಮ್ಮ ಹದಿನಾರು ಮತ್ತು ಕೋಣನೂರು ಗ್ರಾಮಸ್ಥರು ಭಾಗವಹಿಸಿದ್ದರು.
ಶಿಬಿರದ ಉಪಯೋಗ ಪಡೆದ ಜನರು:
ಬೆಳೆಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಆರೋಗ್ಯ ಶಿಬಿರದಲ್ಲಿ ೪೦೦ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಸುಯೋಗ್ ಆಸ್ಪತ್ರೆ ಮತ್ತು ಡಾ. ಹೇಮಂತ್ ಕುಮಾರ್ ತಂಡದ ವತಿಯಿಂದ ೩೫೦ ಕ್ಕೂ ಹೆಚ್ಚು ಜನರಿಗೆ ರಕ್ತದ ಒತ್ತಡ ಮತ್ತು ಸಕ್ಕರೆ (BP ಮತ್ತು ಶುಗರ್) ಅಂಶ ಪರೀಕ್ಷೆ ಮಾಡಲಾಯಿತು. ಬಾಲಾಜಿ ಐ ಕೇರ್ ಮತ್ತು ಓಪ್ಟಿಕಲ್ಸ್ ವತಿಯಿಂದ ೧೮೦ ಕ್ಕೂ ಹೆಚ್ಚು ಜನರು ಕಣ್ಣಿತ ತಪಾಸಣೆಗೆ ಒಳಪಟ್ಟರು. ೩೦ ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು. ೧೫ ಜನಕ್ಕೆ ಈಸಿಜಿ ಪರೀಕ್ಷೆ ಮಾಡಲಾಯಿತು. ಗ್ರಾಮ ಒನ್ ವರುಣಾ ಚನ್ನಬಸಪ್ಪ ಮತ್ತು ತಂಡದವರಿಂದ ೮೫ ಜನರಿಗೆ ಸ್ಥಳದಲ್ಲೇ ಆಯುಷ್ಮಾನ್ ಭಾರತ್ ಕಾರ್ಡ್ ನೊಂದಣಿ ಮಾಡಿಕೊಡಲಾಯಿತು.