News Kannada
Saturday, April 01 2023

ಮೈಸೂರು

ʻಇ-ಸಮುದಾಯದ ಜೊತೆ `ಡಿಬಿಎಸ್ಬ್ಯಾಂಕ್ ಇಂಡಿಯಾ’ ಪಾಲುದಾರಿಕೆ

DBS Bank India partners with eSamudaay to propel local commerce in small towns through ONDC
Photo Credit : Facebook

ಮೈಸೂರು: ಭಾರತದ ಸೂಕ್ಷ್ಮ, ಸಣ್ಣಮತ್ತುಸ್ಥಳೀಯ ಉದ್ಯಮಗಳನ್ನು (ಎಂಎಸ್‌ಎಂಇ) ಬೆಂಬಲಿಸುವ ಆಶಯಕ್ಕೆ ಅನುಗುಣವಾಗಿ, ʻಡಿಬಿಎಸ್ಬ್ಯಾಂಕ್ ಇಂಡಿಯಾʼ ಇಂದು ʻಇ-ಸಮುದಾಯʼದ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ʻಇ-ಸಮುದಾಯʼವು, ಮೆಟ್ರೋಯೇತರ ಪಟ್ಟಣಗಳು ಮತ್ತು ನಗರಗಳ ಮೇಲೆ ಕೇಂದ್ರೀಕರಿಸುತ್ತದೆ.

ಎಲ್ಲಾ ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ನೇರವಾದ ವಹಿವಾಟು ನಡೆಸಲು ಅಗತ್ಯವಿರುವ ಸಂಪರ್ಕವನ್ನು, ಡಿಜಿಟಲ್  ವೇದಿಕೆಯನ್ನು ಹಾಗೂ ಸರಕು-ಸಾಗಣೆಯ ಬೆಂಬಲವನ್ನು ಒದಗಿಸುತ್ತದೆ. ಆ ಮೂಲಕ ಸಣ್ಣ ಮಾರುಕಟ್ಟೆ ಹೊಂದಿರುವ ಸಂಸ್ಥೆಗಳಿಗೆ ʻಓಪನ್ ನೆಟ್ವರ್ಕ್ ಡಿಜಿಟಲ್ ಕಾಮರ್ಸ್ʼನಲ್ಲಿ (ಒಎನ್‌ಡಿಸಿ) ವ್ಯವಹಾರ ನಡೆಸಲು ಅನುವು ಮಾಡಿಕೊಡುತ್ತದೆ. ʻಒಎನ್‌ಡಿಸಿʼ ಮೂಲಕ ವ್ಯವಹಾರದ ವೇಳೆ ʻಎಸ್ಎಂಇʼಗಳು ಮತ್ತು ʻಎಂಎಸ್ಎಂಇʼಗಳ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಈ ಪಾಲುದಾರಿಕೆಯೊಂದಿಗೆ ʻಡಿಬಿಎಸ್ಬ್ಯಾಂಕ್ ಇಂಡಿಯಾʼಹೊಂದಿದೆ.

ಆಮೂಲಕ ಸಾಂಪ್ರದಾಯಿಕ ಬ್ಯಾಂಕಿಂಗ್ ಸೇವೆಗಳು ಮಾತ್ರವಲ್ಲದೆ ಇನ್ನಿತರ ಡಿಜಿಟಲ್ ಸೇವೆ -ಪರಿಹಾರಗಳನ್ನು ಕೂಡ ಒದಗಿಸುತ್ತದೆ. ಗಣರಾಜ್ಯೋತ್ಸವದಂದು (ಜನವರಿ 26,2023)ಅಂತಿಮಗೊಳಿಸಲಾದ ಈ ಮೈತ್ರಿಯ ಅಡಿಯಲ್ಲಿ, ʻಡಿಬಿಎಸ್ಬ್ಯಾಂಕ್ ಇಂಡಿಯಾʼ ಕಟ್ಟಕಡೆಯ ಬಳಕೆದಾರರ ಅವಶ್ಯಕತೆಗಳ ಬಗ್ಗೆ ಆಳವಾದ ಒಳನೋಟಗಳನ್ನು ಪಡೆಯಲಿದೆ ಮತ್ತು ಅವರಿಗೆ ವೈಯಕ್ತೀಕರಿಸಿದ ಪರಿಹಾರಗಳನ್ನು ನೀಡಲಿದೆ. ಸರ್ವಾಂಗೀಣ ಸೇವೆಗಳ ಮೇಲೆ ಹೆಚ್ಚು ಮೇಲೆ ಕೇಂದ್ರೀಕರಿಸಿ, ʻಎಸ್ಎಂಇಗಳುʼ ಮತ್ತು ʻಎಂಎಸ್ಎಂಇʼಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಸಮಗ್ರ ಹಾಗೂ ವೈಯಕ್ತೀಕರಿಸಿದ ನಗದು ನಿರ್ವಹಣೆ ಪರಿಹಾರಗಳನ್ನು ಸಂಸ್ಥೆಯು ಒದಗಿಸಲಿದೆ.

ಇದಕ್ಕಾಗಿ ಸಾಂಪ್ರದಾಯಿಕ ಬ್ಯಾಂಕಿಂಗ್ ಅನ್ನು ಮೀರಿ ತನ್ನ ದೃಢವಾದ, ಜಾಗತಿಕವಾಗಿ ಪ್ರಸಿದ್ಧ ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಳ್ಳಲಿದೆ. ಉದಾಹರಣೆಗೆ ನಗದು ಸಂಗ್ರಹ, ಪಾವತಿಗಳು, ವೇತನಪಟ್ಟಿ, ದ್ರವ್ಯತೆ ಮತ್ತು ಹಣಕಾಸು ಉತ್ಪನ್ನಗಳು ಮುಂತಾದವುಗಳ ಸಮರ್ಥ ನಿರ್ವಹಣೆ. ʻಇ-ಸಮುದಾಯ್ʼನಹಣಕಾಸುಪಾಲುದಾರರಾಗಿ, ʻಡಿಬಿಎಸ್ಬ್ಯಾಂಕ್ ಇಂಡಿಯಾʼ ದಕ್ಷಿಣ ಭಾರತದ ಕೆಲವು ನಗರಗಳಾದ ಉಡುಪಿ, ತಂಜಾವೂರು, ಮಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಡಿಜಿಟಲ್ ಸೇವೆ-ಪರಿಹಾರಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಿದೆ. ಭಾರತದಾದ್ಯಂತ 24 ನಗರಗಳನ್ನು ಒಳಗೊಳ್ಳುವ ದೀರ್ಘಕಾಲೀನ ಯೋಜನೆಯನ್ನು ಸಂಸ್ಥೆಯು ಹೊಂದಿದ್ದು, ಆ ನಗರಗಳಲ್ಲಿ ಆದಿಯಿಂದ ಅಂತ್ಯದವರೆಗೆ ಸಂಪೂರ್ಣ ಪೂರೈಕೆಯ ಸರಪಳಿಯ ಹರಿವನ್ನು ನಿರ್ವಹಿಸಲಿದೆ.

ʻಡಿಬಿಎಸ್ಬ್ಯಾಂಕ್ ಇಂಡಿಯಾʼದ ಜಾಗತಿಕ ವಹಿವಾಟು ಸೇವೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಸ್ಥ ದಿವ್ಯೇಶ್ ದಲಾಲ್ ಅವರು ಮಾತನಾಡಿ, ಗ್ರಾಹಕ ಕೇಂದ್ರಿತ ಡಿಜಿಟಲ್ ಪರಿಹಾರಗಳ ಮೂಲಕ ನಮ್ಮ ಗ್ರಾಹಕರ ದಕ್ಷತೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವುದು ನಮ್ಮ ಪ್ರಯತ್ನವಾಗಿದೆ. ಈ ಪಾಲುದಾರಿಕೆಯು ʻಎಂಎಸ್ಎಂಇʼಗಳನ್ನು, ವಿಶೇಷವಾಗಿ ಮೆಟ್ರೋ ಮತ್ತು ಶ್ರೇಣಿ -1 ಮಾರುಕಟ್ಟೆಗಳಿಂದ ಆಚೆ ಇರುವವರನ್ನು ಸಬಲೀಕರಣಗೊಳಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನವೀನತೆಯ ಮೂಲಕ ವ್ಯವಹಾರಗಳು ಬೆಳೆಯಲು ಅನುವು ಮಾಡಿಕೊಡುವುದು ನಮ್ಮ ನೀತಿಯಾಗಿದ್ದು, ಅದನ್ನು ಹಂಚಿಕೊಳ್ಳುವ ʻಇ- ಸಮುದಾಯ್‌ʼ ಜೊತೆ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ. ಸ್ಥಳೀಯ ವ್ಯವಹಾರಗಳಿಗೆ ನಮ್ಮ ವೈಯಕ್ತೀಕರಿಸಿದ ಹಣಕಾಸು ಪರಿಹಾರಗಳನ್ನು ಒದಗಿಸಲು ಮತ್ತು ಭಾರತದ ಬೆಳೆಯುತ್ತಿರುವ ಇ- ವಾಣಿಜ್ಯ ಮಾರುಕಟ್ಟೆಯ ಬೆಳವಣಿಗೆಗೆ ಕೊಡುಗೆ ನೀಡಲು ನಾವು ಎದುರು ನೋಡುತ್ತಿದ್ದೇವೆ,ʼʼ ಎಂದುಹೇಳಿದರು.

See also  ಮಹಿಳಾ ಸುರಕ್ಷತೆಗೆ ಮೈಸೂರು ಎಎಪಿಯಿಂದ ಯೋಜನೆ

ಈ ಪಾಲುದಾರಿಕೆಯು ಭಾರತ ಮತ್ತು ಇತರ ದೇಶಗಳಿಗೆ ವಿಶಿಷ್ಟ ಬೆಳವಣಿಗೆಯ ಮಾದರಿಯಾಗ ಬಹುದು ಎಂಬ ವಿಶ್ವಾಸವನ್ನು ʻಇ- ಸಮುದಾಯ್‌ʼ ಸಹ-ಸಂಸ್ಥಾಪಕ ಮತ್ತು ಸಿಇಒ ಅನೂಪ್ ಪೈ ವ್ಯಕ್ತಪಡಿಸಿದರು.  ನನ್ನ ಹುಟ್ಟೂರು ಉಡುಪಿಯಲ್ಲಿಇ- ಸಮುದಾಯವು ಜನವರಿ 26,2021ರಿಂದ ಭಾರತದಾದ್ಯಂತ ಸಂಪೂರ್ಣವಾಗಿ ಲೋಕಲ್ ಫ್ಲಾಟ್ಫಾರ್ಮ್ ನಡೆಯುತ್ತಿದೆ. ಒಎನ್ ಡಿಸಿ ಬಂದ ಮೇಲೆ, ಪ್ರತಿ ಒಂದು ಜಿಲ್ಲೆಯಲ್ಲು ಲೋಕಲ್‌ ಕಾಮರ್ಸ್ ಕಂಪನಿ ಸ್ಥಾಪಿಸುವ ಸಲುವಾಗಿ ನಾವು ಡಿಬಿಎಸ್ಬ್ಯಾಂಕ್‌ ನೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇವೆ.” ಎಂದು ಹೇಳಿದರು.

ಸುರಕ್ಷಿತ, ಪಾರದರ್ಶಕ ಮತ್ತು ಅಡಚಣೆ ರಹಿತ ಬ್ಯಾಂಕಿಂಗ್ ಅನುಭವವನ್ನು ನೀಡುವಲ್ಲಿ ʻಡಿಬಿಎಸ್ʼವಿಶ್ವಾಸ ಹೊಂದಿದೆ. ಇತ್ತೀಚೆಗೆ ʻಡಿಬಿಎಸ್ಬ್ಯಾಂಕ್ಇಂಡಿಯಾʼವು ʻಗೋಫ್ರುಗಲ್ ಟೆಕ್ನಾಲಜೀಸ್ʼ  ಜೊತೆಪಾಲುದಾರಿಕೆ ಹೊಂದಿದ್ದು, ʻಎಸ್‌ಎಂಇʼಗಳು ತಮ್ಮ ಉತ್ಪನ್ನಗಳನ್ನು ತ್ವರಿತವಾಗಿ ಪಟ್ಟಿ ಮಾಡಲು ಹಾಗೂ ʻಒಎನ್‌ಡಿಸಿʼಮೂಲಕ ತಮ್ಮ ಮಾರಾಟ ಮಾರ್ಗಗಳನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದಕ್ಕೂ ಮೊದಲು, ʻಡಿಬಿಎಸ್ಬ್ಯಾಂಕ್ಇಂಡಿಯಾʼವು ಸರಕು ಸಾಗಣೆದಾರರಿಗಾಗಿ ಚೊಚ್ಚಲ ಡಿಜಿಟಲ್ ಮತ್ತು ಕಾಗದ ರಹಿತ ವ್ಯಾಪಾರ ಹಣಕಾಸು ಪರಿಹಾರವನ್ನು ಆರಂಭಿಸಿತು.

ವ್ಯಾಪಾರ ವಹಿವಾಟುಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಸರಳೀಕರಿಸಲು ʻಎಲೆಕ್ಟ್ರಾನಿಕ್ವೇʼ (ಇವೇ) ಬಿಲ್ ಪರಿಶೀಲನೆಯನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಸೃಷ್ಟಿಸಲಾಯಿತು. ಸ್ಥಳೀಯ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಲು ಸ್ಥಳೀಯ ಸಂಘಗಳು, ʻಚೇಂಬರ್ ಆಫ್ ಕಾಮರ್ಸ್ʼ ಮತ್ತು ಹಣಕಾಸು ಸಂಸ್ಥೆಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರೊಂದಿಗೆ ʻಇ-ಸಮುದಾಯ್‌ʼ ಕೆಲಸ ಮಾಡುತ್ತದೆ. ಇದು ಹೊಸ ಯುಗದ ತಂತ್ರಜ್ಞಾನ ಕಂಪನಿಯಾಗಿದ್ದು, ವ್ಯವಹಾರಗಳು ಸ್ವಾವಲಂಬಿಗಳಾಗಲು ಮತ್ತು ದೊಡ್ಡ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಸಹಾಯ ಮಾಡುತ್ತದೆ.

ಪ್ರತಿಯೊಬ್ಬ ಮಾರಾಟಗಾರನಿಗೆ ಹೆಚ್ಚಿನ ಗ್ರಾಹಕ ಅನ್ವೇಷಣಾ ಅವಕಾಶಗಳನ್ನು ʻಓಪನ್ ನೆಟ್ವರ್ಕ್ʼಖಾತರಿಪಡಿಸುತ್ತದೆ. ಈ ವ್ಯವಹಾರ ಮಾದರಿ ಅಭಿವೃದ್ಧಿ ಹೊಂದುತ್ತಾ ಹೋದಂತೆ ವಿದೇಶದಲ್ಲಿ ವ್ಯಾಪಾರ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ʻಡಿಬಿಎಸ್ಬ್ಯಾಂಕ್ಇಂಡಿಯಾʼ ಮೌಲ್ಯ ಸರಪಳಿಯುದ್ದಕ್ಕೂ ಸಂಪರ್ಕ ಸಾಧಿಸಲು ತನ್ನ ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಪರಿಸರ ವ್ಯವಸ್ಥೆ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ಜೊತೆಗೆ ದಕ್ಷತೆ ಮತ್ತು ಸಂಯೋಜನೆಗಳನ್ನು ಹೆಚ್ಚಿಸುವಂತಹ ಪರಿಹಾರಗಳ ಮೂಲಕ ಬೆಳವಣಿಗೆಗೆ ನೆರವಾಗುತ್ತದೆ. ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆ ಮತ್ತು ಡಿಜಿಟಲ್ ವ್ಯಾಪ್ತಿ ಹೆಚ್ಚಳದ ಗುರಿಯನ್ನು ಮುಂದುವರಿಸಲು, ಡಿಬಿಎಸ್ ಡಿಜಿಟಲ್ ಬಿಸಿನೆಸ್ ಲೋನ್ ಎಂಬ ಆನ್‌ಲೈನ್‌ ಸಾಲ ಪರಿಹಾರ ವೇದಿಕೆಯನ್ನು ʻಡಿಬಿಎಸ್ಬ್ಯಾಂಕ್ಇಂಡಿಯಾʼಒದಗಿಸುತ್ತದೆ. ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಂಪೂರ್ಣ ಕ್ಷೇತ್ರಕ್ಕೆ ವ್ಯವಹಾರ ಸಾಲದ ಸುಲಭ ಲಭ್ಯತೆಯನ್ನು ಖಚಿತ ಪಡಿಸುತ್ತದೆ. ಸೂಕ್ಷ್ಮ, ಸಣ್ಣ ಮತ್ತು ಸ್ಥಳೀಯ ಉದ್ಯಮಗಳ ಸಚಿವಾಲಯದ ಮಾಹಿತಿಯ ಪ್ರಕಾರ, 25 ನವೆಂಬರ್ 2022ರ ಹೊತ್ತಿಗೆ, ʻಉದ್ಯಮ್‌ ನೋಂದಣಿʼ ಪೋರ್ಟಲ್ ನಲ್ಲಿ ರೂ. 12,201,448/- ʻಎಂಎಸ್ಎಂಇʼಗಳು ನೋಂದಾಯಿಸಲ್ಪಟ್ಟಿವೆ 1. ಭಾರತೀಯ ʻಎಂಎಸ್ಎಂಇʼಗಳು ನಗದಿನ ಬದಲಿಗೆ ಡಿಜಿಟಲ್ ಪಾವತಿಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿವೆ.

ಒಟ್ಟು ವಹಿವಾಟಿನಲ್ಲಿ ಶೇ 72  ಪಾವತಿಗಳನ್ನು ಡಿಜಿಟಲ್ ಮಾದರಿ ಮೂಲಕ ಮಾಡಲಾಗುತ್ತಿದ್ದು, ನಗದು ವಹಿವಾಟಿನ ಪ್ರಮಾಣ ಶೇ 28 ರಷ್ಟಿದೆ. ಡಿಜಿಟಲ್ ಅಳವಡಿಕೆಯ ಹೆಚ್ಚಳವು ಈ ವಲಯದಲ್ಲಿ ಮತ್ತಷ್ಟು ಬೆಳವಣಿಗೆಯ ನಿರೀಕ್ಷೆಗಳನ್ನು ಮೂಡಿಸಿದೆ.

See also  ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳಿಗೆ ಶಿಕ್ಷಕರು ಹೇಗೆ ಸಹಾಯ ಮಾಡಬಹುದು

DBS ಬಗ್ಗೆ:
DBS ಏಷ್ಯಾದಲ್ಲಿ 19 ಮಾರುಕಟ್ಟೆಗಳಲ್ಲಿ ಪ್ರಮುಖ ಹಣಕಾಸು ಸೇವೆಗಳ ಸಮೂಹವಾಗಿದೆ. DBS ತನ್ನ ಜಾಗತಿಕ ನಾಯಕತ್ವಕ್ಕೆ ಹೆಸರುವಾಸಿಯಾಗಿದೆ, 2018 ರಿಂದ ಗ್ಲೋಬಲ್ ಫೈನಾನ್ಸ್‌ನಿಂದ ಮೂರು ಬಾರಿ “ವಿಶ್ವದ ಅತ್ಯುತ್ತಮ ಬ್ಯಾಂಕ್” ಎಂದು ಗುರುತಿಸಲ್ಪಟ್ಟಿದೆ. DBS ಯುರೋಮನಿಯಿಂದ 2021 ರಲ್ಲಿ “ವಿಶ್ವದ ಅತ್ಯುತ್ತಮ ಬ್ಯಾಂಕ್” ಎಂದು ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಮತ್ತು “ಗ್ಲೋಬಲ್ ಬ್ಯಾಂಕ್” ಎಂದು ಗುರುತಿಸಲ್ಪಟ್ಟಿದೆ. 2021 ರಲ್ಲಿ ದಿ ಬ್ಯಾಂಕರ್‌ನಿಂದ ವರ್ಷದ”. ಬ್ಯಾಂಕ್ 2021 ರಲ್ಲಿ ಯುರೋಮನಿಯಿಂದ “ವಿಶ್ವದ ಅತ್ಯುತ್ತಮ ಡಿಜಿಟಲ್ ಬ್ಯಾಂಕ್” ಮತ್ತು ವಿಶ್ವದ “ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ಅತ್ಯಂತ ನವೀನ” ಎಂದು ಗುರುತಿಸುವುದರೊಂದಿಗೆ ಬ್ಯಾಂಕಿಂಗ್‌ನ ಭವಿಷ್ಯವನ್ನು ರೂಪಿಸಲು ಡಿಜಿಟಲ್ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ.

eSamudaay ಕುರಿತು
eSamudaay ಒಂದು ಸಾಫ್ಟ್‌ವೇರ್ ಕಂಪನಿಯಾಗಿದ್ದು, ದೇಶಾದ್ಯಂತ ಸಮುದಾಯಗಳಿಗೆ ಎಂಡ್-ಟು-ಎಂಡ್ ಡಿಜಿಟಲೈಸೇಶನ್ ಪರಿಹಾರಗಳನ್ನು ಒದಗಿಸುವ ಮೂಲಕ ಸಾಧ್ಯವಾದಷ್ಟು ತ್ವರಿತ ರೀತಿಯಲ್ಲಿ ONDC-ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಕಂಪನಿಯು ಹೈಪರ್‌ಲೋಕಲ್ ಆರ್ಥಿಕ ಬೆಳವಣಿಗೆಯ ಸಾಧನವಾಗಿ ಸ್ಥಳೀಯ ವಾಣಿಜ್ಯವನ್ನು (LCcommerce) ಸಕ್ರಿಯಗೊಳಿಸಲು ಭಾರತದ 748 ಜಿಲ್ಲೆಗಳಾದ್ಯಂತ ಸ್ಥಳೀಯ ಡಿಜಿಟಲ್ ನೆಟ್‌ವರ್ಕ್‌ಗಳನ್ನು ರಚಿಸುವ ಗುರಿ ಹೊಂದಿದೆ. ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಂಪನಿಯು ಡಿಜಿಟಲ್ ಉದ್ಯಮಿಗಳಿಗೆ ವ್ಯವಹಾರದಲ್ಲಿ-ಪೆಟ್ಟಿಗೆಯ ಪರಿಹಾರಗಳನ್ನು ನೀಡುತ್ತದೆ, . ಕಂಪನಿಯು ಸ್ಥಳೀಯ ವ್ಯಾಪಾರಿಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಅವರ ಸಾಫ್ಟ್‌ವೇರ್ ಉತ್ಪನ್ನಗಳ ಬಳಕೆಯ ಮೂಲಕ ಹೈಪರ್‌ಲೋಕಲ್ ವಿತರಣೆಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುವ ಹೈಪರ್‌ಲೋಕಲ್ ಡಿಜಿಟಲ್ ಎಂಟರ್‌ಪ್ರೈಸ್‌ಗಳ ನೆಟ್‌ವರ್ಕ್ ರಚನೆಗೆ ಸಹಾಯ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು