ನಂಜನಗೂಡು: ಮಾಜಿ ಮುಖ್ಯ ಮಂತ್ರಿ, ಸಿದ್ದರಾಮಯ್ಯ ನವರ ಕುರಿತಂತೆ ಸಚಿವ ಅಶ್ವಥ್ ನಾರಾಯಣ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಪ್ರಜಾಪ್ರಭುತ್ವ ಸಂರಕ್ಷಣಾ ವೇದಿಕೆ ವತಿಯಿಂದ ನಂಜನಗೂಡಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ, ಕಾಂಗ್ರೆಸ್ ಕಾರ್ಯಕರ್ತ ರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಸರ್ಕಾರದ ಉನ್ನತ ಶಿಕ್ಷಣ ಸಚಿವ ಆರ್.ಅಶ್ವಥ್ ನಾರಾಯಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಒಬ್ಬ ಸಚಿವನಾಗಿ ಇಂತಹ ಹೇಳಿಕೆ ನೀಡುವುದು ಪ್ರಜಾಪ್ರಭುತ್ವ ದ ಆಶಯ ಕ್ಕೆ ಧಕ್ಕೆ ತರುವಂತಹದ್ದಾಗಿದೆ. ಇಂತಹವರು ಸಚಿವರಾಗಲು ನಾಲಾಯಕ್ , ಮುಖ್ಯ ಮಂತ್ರಿ ಬೊಮ್ಮಾಯಿ ಯವರು ಈ ಕೂಡಲೆ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ಸಚಿವರ ವಿರುದ್ದ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕಳೆಲೆ ಕೇಶವಮೂರ್ತಿ , ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಮಾಜಿ ಪುರಸಭೆ ಅಧ್ಯಕ್ಷ ಪಿ ಶ್ರೀನಿವಾಸ್, ಬುಲೆಟ್ ಮಹಾದೇವಪ್ಪ, ಇಂಧನ ಬಾಬು, ಜಿ.ಪಂ ಮಾಜಿ ಅದ್ಯಕ್ಷ ಬಿ.ಎಂ.ರಾಮು, ವಿದ್ಯಾಸಾಗರ್ ಇಮ್ಮಾವು ರಘು, ಹುಂಡಿ ನಾಗರಾಜ್, ಕೆ ಮಾರುತಿ, ಕಾನೂನು ಘಟಕದ ಅಧ್ಯಕ್ಷ ಎಸ್ ನಾಗರಾಜಯ್ಯ, ಕುಳ್ಳಯ್ಯ, ಎಚ್ಎಸ್ ಕರಳಪುರ ನಾಗರಾಜ, ಮೂಗ ಶೆಟ್ಟಿ ಅಬ್ದುಲ್ ಖಾದರ್, ನಾಶೀರ್ ಖಾನ್, ಕೆಬಿ ಸ್ವಾಮಿ, ಕಾವ್ಯ ಸೌಭಾಗ್ಯ ಹಳ್ಳದಕೇರಿ, ಗೋವಿಂದ್ ರಾಜ್ ಶ್ರೀನಿವಾಸ್, ದೇಬೂರ ಸಿದ್ದಲಿಂಗಪ್ಪ, ನಗರಸಭಾ ಸದಸ್ಯರಾದ ಗಾಯತ್ರಿ ಮೋಹನ್, ಪ್ರದೀಪ್, ಗಂಗಾಧರ್ ಭಾಗವಹಿಸಿದ್ದರು.