ಮೈಸೂರು: ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ರವರ ಜನ್ಮ ದಿನಾಚರಣೆ ಅಂಗವಾಗಿ ಬಿ ಎಸ್ ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ಬಸವೇಶ್ವರ ರಸ್ತೆಯಲ್ಲಿ ಗೋಗ್ರಾಸ ಗೋಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಅವರು “ಯಡಿಯೂರಪ್ಪನವರು ಗೋ ಪ್ರೇಮಿಯಾಗಿದ್ದು, ತಮ್ಮ ಹುಟ್ಟುಹಬ್ಬದಂದು ಹಾರ-ತುರಾಯಿ ಹಾಕುವ ಬದಲು ಗೋವುಗಳಿಗೆ ಮೇವು ನೀಡಿ ಎಂದು ಕರೆ ನೀಡಿದ್ದರು. ಅಂದಿನಿಂದ ನಮಗೂ ಸಹ ಅವರ ಹುಟ್ಟು ಹಬ್ಬದಂದು ಪ್ರತಿ ವರ್ಷ ಗೋ ಪೂಜೆ ನಡೆಸಿ ಅವರ ಆರೋಗ್ಯ-ಆಯಸ್ಸಿಗಾಗಿ ಪ್ರಾರ್ಥಿಸುವುದು ವಾಡಿಕೆ ಆಗಿ ಹೋಗಿದೆ. ಇದರಿಂದಾಗಿಯೇ ಬರಗಾಲದಂತ ಸಂದರ್ಭದಲ್ಲಿ ಸಾವಿರಾರು ಜನ ಗೋಸೇವೆ ಮಾಡಲು ಪ್ರೇರಣೆ ಪಡೆದಿದ್ದರು. ಯಡಿಯೂರಪ್ಪನವರು ಸಹ ಕಾಮಧೇನುವಿನಂತೆ ಎಂದು ವಿಪಕ್ಷದವರು ಸಹ ಬಣ್ಣಿಸುತ್ತಿದ್ದುದನ್ನು ನಾವು ಕೇಳಿದ್ದೇವೆ” ಎಂದು ನುಡಿದರು.
ರಾಕೇಶ್ ಭಟ್ ಮಾತನಾಡಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗಲೂ ಸಹ ಅವರ ನಿವಾಸದಲ್ಲಿ ಕೊಟ್ಟಿಗೆಯೊಂದನ್ನು ಕಟ್ಟಿ ಗೋವನ್ನು ಸಾಕಿ, ಗೋಪ್ರೇಮ ಮೆರೆದಿದ್ದರು. ಅದರ ಪ್ರೇರಣೆಯಿಂದ ಇಂದು ರಾಜ್ಯ ಸರ್ಕಾರ ಪುಣ್ಯಕೋಟಿ ದತ್ತು ಯೋಜನೆಯನ್ನು ಸಹ ತಂದಿದೆ. ಈ ಯೋಜನೆ ಸಾವಿರಾರು ಗೋವುಗಳಿಗೆ ನೆಲೆಯಾಗುತ್ತದೆ” ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರೇಚಣ್ಣ, ಜೀವದಾರ ರಕ್ಕನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಬಿಜೆಪಿ ಮುಖಂಡರಾದ ರಾಕೇಶ್ ಭಟ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಸುಚೇಂದ್ರ, ಚಕ್ರಪಾಣಿ, ಮಹೇಶ್, ನಾಗಶ್ರೀ, ಗೋಪಾಲಕರಾದ ರಂಗಸ್ವಾಮಿ, ಚಂದನ್, ಪವನ್, ಹಾಗೂ ಇನ್ನಿತರರು ಭಾಗಿಯಾಗಿದ್ದರು.