ಮೈಸೂರು: ನಮ್ಮನ್ನು ಸಮರ್ಥ ನಾಯಕರು ಆಳುವಂತಾಗಲು ರಾಜಕೀಯದಲ್ಲಿ ಹೆಚ್ಚಿನ ಮಹಿಳೆಯರನ್ನು ಆಯ್ಕೆ ಮಾಡಬೇಕು, ಎಂದು ಎಚ್ಸಿಜಿ-ಬಿಎಚ್ಐಒ ಕಾರ್ಯಾಧ್ಯಕ್ಷ ಮತ್ತು ಸಂಸ್ಥಾಪಕ ಡಾ.ಬಿ.ಎಸ್.ಅಜಯಕುಮಾರ್ ಬುಧವಾರ ಆಗ್ರಹಿಸಿದರು.
ಭಾರತ್ ಹಾಸ್ಪಿಟಲ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಡಾ.ಅಜಯಕುಮಾರ್, ಮಹಿಳೆಯರು ರಾಜಕೀಯ ಮತ್ತು ಆಡಳಿತದಲ್ಲಿ ಮುಂಚೂಣಿಯಲ್ಲಿರುವ ಸಮಯ ಬಂದಿದೆ. “ಮಹಿಳೆಯರು ಹುಟ್ಟು ನಾಯಕರು. ಅವರು ಪ್ರತಿದಿನ ಕುಟುಂಬ ಮತ್ತು ಮನೆಯನ್ನು ನಡೆಸುವ ವಿಧಾನ ಅವರ ನಾಯಕತ್ವದ ಕೌಶಲ್ಯವನ್ನು ಸಾಬೀತುಪಡಿಸುತ್ತದೆ. ಈಗ ಅವರು ಪಂಚಾಯತ್, ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕುಳಿತು ಜನರನ್ನು ಆಳಬೇಕಾಗಿದೆ. ನಾವು ಶೀಘ್ರದಲ್ಲೇ ಬೇಗೂರು ಮತ್ತು ಗುಂಡ್ಲುಪೇಟೆಯಲ್ಲಿ ನಮ್ಮ 5,000 ಮಹಿಳೆಯರಿಗೆ ಕಠಿಣ ರಾಜಕೀಯ ನಾಯಕತ್ವ ತರಬೇತಿಯನ್ನು ಪ್ರಾರಂಭಿಸಲಿದ್ದೇವೆ. ಈ ಮಹಿಳೆಯರು ಅಂತಿಮವಾಗಿ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ,” ಎಂದರು.
ಬಿಎಚ್ಐಒ ಮತ್ತು ಎಲ್ಲಾ ಎಚ್ಸಿಜಿ ಆಸ್ಪತ್ರೆಗಳಲ್ಲಿ ನೂರಾರು ಮಹಿಳೆಯರು ವೈದ್ಯರು, ದಾದಿಯರು ಮತ್ತು ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ, ಎಂದು ಡಾ.ಅಜಯ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು. “ನನ್ನ ಆಸ್ಪತ್ರೆಯಲ್ಲಿ ನಾನು ಮಹಿಳೆಯನ್ನು ನೇಮಿಸಿಕೊಳ್ಳುವಾಗ ನನಗೆ ಆಕೆ ಬದ್ಧತೆ ಮತ್ತು ಪ್ರಾಮಾಣಿಕ ಕೆಲಸಗಾರ್ತಿ ಎಂದು ಖಚಿತವಾಗಿ ತಿಳಿದಿರುತ್ತೇನೆ. ಮಹಿಳೆ ಹೆಚ್ಚು ಸಮರ್ಪಣಾ ಮನೋಭಾವವನ್ನು ಹೊಂದಿದ್ದಾಳೆ ಮತ್ತು ಆಕೆ ಪ್ರತಿದಿನ ಪ್ರತಿಶತ ನೂರರಷ್ಟು ಪ್ರಯತ್ನಪಡುತ್ತಾಳೆ ಎಂಬುದನ್ನು ನಾನು ನೋಡಿದ್ದೇನೆ. ಸಶಕ್ತ ಮಹಿಳೆ ಯಾವುದೇ ಸಮಾಜಕ್ಕೆ ಆಸ್ತಿ. ಇಂದು ಮಹಿಳೆಯರು ತಂತ್ರಜ್ಞಾನ, ವಿಜ್ಞಾನ, ಕಲೆ, ರಕ್ಷಣೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಅವರು ನಮ್ಮ ಸಶಸ್ತ್ರ ಪಡೆಗಳನ್ನು ಸೇರುತ್ತಾರೆ ಮತ್ತು ಫೈಟರ್ ಜೆಟ್ಗಳನ್ನು ಸಹ ಹಾರಿಸುತ್ತಾರೆ. ಅವರದೇ ಆದ ಕ್ರಿಕೆಟ್ ತಂಡವೂ ಇದೆ. ನಾನು ಯಾವಾಗಲೂ ಭಾವಿಸುತ್ತೇನೆ, ಮಹಿಳೆಯರಿಗೆ ಅವಕಾಶವನ್ನು ನೀಡಿ ಮತ್ತು ಯಶಸ್ಸನ್ನು ಪಡೆಯಲು ಅವಳು ತನ್ನ ಹೃದಯ ಮತ್ತು ಆತ್ಮವನ್ನು ಅದರಲ್ಲಿ ತೊಡಗಿಸುತ್ತಾಳೆ. ಮಹಿಳಾ ದಿನಾಚರಣೆ ಪ್ರತಿದಿನವೂ ಆಗಬೇಕು. ವರ್ಷದಲ್ಲಿ ಒಂದು ದಿನ ಆಚರಿಸುವ ಬದಲು ಪ್ರತಿದಿನವೂ ಮಹಿಳೆಯರ ದಿನವಾಗಲಿ ”.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಸಮಾಜಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥೆ ಆರ್.ಇಂದಿರಾ, ಮಹಿಳೆಯರು ಎದುರಿಸುತ್ತಿರುವ ಕೆಲವು ಸಮಸ್ಯೆಗಳು ಪರಿಹಾರವಾಗಿದ್ದರೂ, ಮಹಿಳೆಯರು ಎದುರಿಸುತ್ತಿರುವ ಹೊಸ ಸಮಸ್ಯೆಗಳಲ್ಲಿ ಆನ್ಲೈನ್ ಅಪರಾಧಗಳಂತಹವೂ ಒಳಗೊಂಡಿವೆ. ಜಾಗತಿಕವಾಗಿ ಮಹಿಳೆಯರಿಗೆ ಇಂಟರ್ನೆಟ್ ಬಳಕೆ ಅವಕಾಶ ಕಡಿಮೆ. ಕೋವಿಡ್ ಸಮಯದಲ್ಲಿ, ಅಧ್ಯಯನಗಳ ಪ್ರಕಾರ 40 ಪ್ರತಿಶತ ಮಹಿಳೆಯರು ಆನ್ಲೈನ್ ಅವಕಾಶವನ್ನು ಹೊಂದಿರಲಿಲ್ಲ. ಇಂದಿಗೂ ಅನೇಕ ಸಾಂಪ್ರದಾಯಿಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ಗಳನ್ನು ಕೊಡುವುದಿಲ್ಲ. ಇವೆಲ್ಲವನ್ನು ಗಮನಿಸಿದಾಗ ಮಹಿಳಾ ಸಬಲೀಕರಣವು ಈ ಸಮಯದ ಅಗತ್ಯವಾಗಿದೆ, ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಎಚ್ಐಒ ನಿರ್ದೇಶಕಿ ಭಾಗ್ಯ ಅಜಯ್ಕುಮಾರ್, “ಕಲೆ, ವಿಜ್ಞಾನ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಈ ದಿನವನ್ನು ಗೊತ್ತುಮಾಡಲಾಗಿದೆ. ಲಿಂಗ ಸಮಾನತೆ ತರಲು ನಾವು ಗಮನಹರಿಸಬೇಕು. ಪ್ರತಿ ದಿನವನ್ನು ಮಹಿಳಾ ದಿನವನ್ನಾಗಿ ಮಾಡಿ, ಏಕೆಂದರೆ ಲಿಂಗ ಸಮಾನತೆಯನ್ನು ಸಾಧಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ದಿನವನ್ನು ಕೇವಲ ಮಹಿಳೆಯರಿಗೆ ಮೀಸಲಿಟ್ಟ ದಿನವೆಂದು ನಾವು ಭಾವಿಸಬೇಕಿಲ್ಲ, ಬದಲಿಗೆ ಪ್ರತಿದಿನ ಮತ್ತು ಪ್ರತಿಯೊಂದು ದಿನವೂ ಮಹಿಳೆಯರನ್ನು ಅವರ ವೃತ್ತಿಪರ ಪಾತ್ರಗಳಲ್ಲಿ ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆ ಒಬ್ಬ ಕಲಾವಿದೆ, ಅವಳು ಕೆಲಸ ಮತ್ತು ಮನೆ ಇವುಗಳ ಮಧ್ಯೆ ಉತ್ತಮ ಸಮತೋಲನ ಸಾಧಿಸುತ್ತಾಳೆ. ಅವಳು ವಹಿಸುವ ಪ್ರತಿಯೊಂದು ಪಾತ್ರ ಮತ್ತು ಅವಳು ಮಾಡುವ ಪ್ರತಿಯೊಂದು ಸಣ್ಣ ವಿಷಯವೂ ಮುಖ್ಯವಾಗಿದೆ ಎಂದು ನಂಬುತ್ತಾಳೆ. ನಮ್ಮಲ್ಲಿ ಅನೇಕರು ಆಕೆಯನ್ನು ಭೂಮಿತಾಯಿ, ಶಕ್ತಿ, ಅರ್ಧನಾರೀಶ್ವರಿ ಎಂದು ಪೂಜಿಸುತ್ತಾರೆ. ಆದರೆ ಪ್ರಾಯೋಗಿಕವಾಗಿ ಮಹಿಳೆಯನ್ನು, ಆಕೆಯ ಶಕ್ತಿಯನ್ನು ಇನ್ನೂ ಗುರುತಿಸಿಲ್ಲ. ಸಂಸತ್ತು ಮತ್ತು ವಿಧಾನಸಭೆಯಲ್ಲಿಯೂ ಅವರನ್ನು ಸಮಾನವಾಗಿ ಪರಿಗಣಿಸುವುದಿಲ್ಲ, ಸಮಾನ ವೇತನವನ್ನು ನೀಡಲಾಗಿಲ್ಲ ಮತ್ತು ಕಾರ್ಯಪಡೆಗಳಲ್ಲಿ ಸಮಾನ ಭಾಗವಹಿಸುವಿಕೆಗೆ ಅವಕಾಶಗಳನ್ನು ನೀಡಲಾಗಿಲ್ಲ,” ಎಂದರು.
ವೈದ್ಯರ ಪ್ರಭುತ್ವ: ಸಾಮಾನ್ಯವಾಗಿ ಬಿಎಚ್ಐಒನ ಬಹುತೇಕ ಕಾರ್ಯಕ್ರಮಗಳಿಗೆ ನಿರೂಪಣೆ ಸೇರಿದಂತೆ ಕಾರ್ಯಕ್ರಮವನ್ನು ಮಹಿಳೆಯರೇ ಮಾಡುತ್ತಿದ್ದರು ಆದರೆ ಬುಧವಾರ ಬಿಎಚ್ಐಒನ ಸಜ್ಜನ ವೈದ್ಯರಾದ ಡಾ.ವಿನಯಕುಮಾರ್ ಮುತ್ತಗಿ, ಡಾ.ಕೆ.ಜಿ.ಶ್ರೀನಿವಾಸ್, ಡಾ.ಎಂ.ವಿಜಯಕುಮಾರ್, ಡಾ.ಜಿ.ಎಚ್.ಅಭಿಲಾಷ್, ಡಾ. ಆರ್ ರಕ್ಷಿತ್ ಶೃಂಗೇರಿ ಅವರು ಎಲ್ಲಾ ಮಹಿಳೆಯರಿಗೆ ಗೌರವ ಸಲ್ಲಿಸಲು ಇಡೀ ಕಾರ್ಯಕ್ರಮವನ್ನು ಆಯೋಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ವೈದ್ಯರ ಈ ನಡೆ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಯಿತು. ಸಾಮಾನ್ಯವಾಗಿ ಪುರುಷರು ಪ್ರದರ್ಶಿಸುವ ಡೊಳ್ಳು ಕುಣಿತವನ್ನು ಬಿಎಚ್ಐಒ ಮಹಿಳಾ ಸಿಬ್ಬಂದಿಗಳು ಪ್ರದರ್ಶಿಸಿದರು. ಕುಮಾರ್ ಅವರ ಕಣ್ಗಾವಲಿನಲ್ಲಿ ಕೆಲವು ದಿನಗಳ ತರಬೇತಿಯ ನಂತರ, ಬಿಎಚ್ಐಒನ ಹುಡುಗಿಯರು ಅತ್ಯುತ್ತಮ ಡೊಳ್ಳು ಕುಣಿತ ಪ್ರದರ್ಶನದೊಂದಿಗೆ ಉತ್ತಮ ಸಂಖ್ಯೆಯಲ್ಲಿ ಬಂದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ನರ್ಸಿಂಗ್ ಸೂಪರಿಂಟೆಂಡೆಂಟ್ ಗಳು ಸೇರಿದಂತೆ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಬೈಕ್ ಮತ್ತು ಬೈಸಿಕಲ್ ರ‍್ಯಾಲಿ: ‘ರೈಡಿಂಗ್ ಯುವರ್ ವೇ ಟು ಗುಡ್ ಹೆಲ್ತ್’ ಎಂಬ ಘೋಷವಾಕ್ಯದೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳ ಮಹಿಳೆಯರು ಕಲಾಮಂದಿರದಿಂದ ಬೈಕ್ ಹಾಗೂ ಸೈಕಲ್ ರ‍್ಯಾಲಿ ನಡೆಸಿದರು. ಕಲಾಮಂದಿರದಲ್ಲಿ ರ‍್ಯಾಲಿಗೆ ಚಾಲನೆ ನೀಡಿ ಹುಣಸೂರು ರಸ್ತೆ, ಬಯಲು ರಂಗಮಂದಿರ ರಸ್ತೆ ಹಾಗೂ ಕುಕ್ಕರಹಳ್ಳಿ ಕೆರೆ ರಸ್ತೆ ಮೂಲಕ ಕಲಾಮಂದಿರದಲ್ಲಿ ಸಮಾಪನಗೊಂಡಿತು.
ಡಿಜಿಟ್ ಆಲ್ ಎಂಬ ಥೀಮ್– ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಥೀಮ್‌ನೊಂದಿಗೆ, ಬಿಎಚ್ಐಒ ಶಿಕ್ಷಕರಿಗೆ ಉಚಿತ ಸಮಾಲೋಚನೆ ಮತ್ತು ಮ್ಯಾಮೊಗ್ರಫಿ, ಅಲ್ಟ್ರಾಸೌಂಡ್, ಪ್ಯಾಪ್ ಸ್ಮೀಯರ್ ಮತ್ತು ರಕ್ತದ ಪರೀಕ್ಷೆ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ಸೇರಿದಂತೆ ಆರೋಗ್ಯ ಪ್ಯಾಕೇಜ್‌ಗಳನ್ನು ಈ ತಿಂಗಳ ಪೂರ್ತಿ ಹೊಂದಿದೆ. ಬಿಎಚ್ಐಒ ನ ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ ಮತ್ತು ಬಿಎಚ್ಐಒ ನ ಸಿಒಒ ನಿರ್ಮಲಾ ಕೆ.ಮೂರ್ತಿ ಉಪಸ್ಥಿತರಿದ್ದರು.