News Kannada
Friday, March 31 2023

ಮೈಸೂರು

ಕೃಷ್ಣರಾಜಪೇಟೆ: ಸಚಿವ ನಾರಾಯಣಗೌಡರಿಂದ ಅಭಿಮಾನಿಗಳಿಗೆ ಔತಣಕೂಟ

Krishnarajpet: Minister Narayana Gowda hosts dinner for fans
Photo Credit : By Author

ಕೃಷ್ಣರಾಜಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಲಕ್ಷ್ಮೀವೆಂಕಟೇಶ್ವರ ಸಮುದಾಯ ಭವನದಲ್ಲಿ ಸಚಿವ ನಾರಾಯಣಗೌಡ ಅಭಿಮಾನಿಗಳು ಹಾಗೂ ಬೆಂಬಲಿಗರು ಔತಣ ಕೂಟವನ್ನು ಏರ್ಪಡಿಸಿದ್ದರು.

ಈ ವೇಳೆ ಮಾತನಾಡಿದ ಸಚಿವ ನಾರಾಯಣಗೌಡ ಅವರು, ನಾನು ತಂದೆ ತಾಯಿಯನ್ನು ಕಳೆದುಕೊಂಡು ಇಪ್ಪತ್ತು ವರ್ಷಗಳಾಯಿತು. ತಬ್ಬಲಿಯಾದ ನನಗೆ ತಾಲ್ಲೂಕಿನ ಜನತೆಯೇ ತಂದೆತಾಯಿಗಳು ಎಂದು ಭಾವುಕರಾಗಿ ನುಡಿದರು

ನನ್ನ ತಂದೆ-ತಾಯಿಯರನ್ನು ದೂರದ ಮುಂಬಯಿ ನಗರಕ್ಕೆ ಕರೆದುಕೊಂಡು ಹೋಗಿ ಉದ್ಯಮಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆ. ನನ್ನ ತಾಯಿ ಜೀವ ಬಿಡುವ ಸಂದರ್ಭದಲ್ಲಿ ಹುಟ್ಟಿದ ಊರನ್ನು ಮರೆಯಬೇಡ ಎಂದು ಭಾಷೆ ತೆಗೆದುಕೊಂಡರು. ನಂತರ ಕೃಷ್ಣರಾಜಪೇಟೆ ತಾಲ್ಲೂಕಿಗೆ ಸಮಾಜ ಸೇವಕನಾಗಿ ತೊಡಗಿದ್ದೆ. ಆಗಲೇ ರಾಜಕಾರಣಿಗಳ ಕಣ್ಣು ಕೆಂಪಾಯಿತು.

ಹೋಟೆಲ್‌ನಲ್ಲಿ ಲೋಟ ತೊಳೆಯುವ ಹೈದ ರಾಜಕಾರಣ ಮಾಡಲು ಸಾಧ್ಯವೇ? ಎಂಬ ಕಠೋರ ವರ್ತನೆಯ ಮಾತುಗಳಿಂದ ಪ್ರಭಾವಿತನಾಗಿ ರಾಜಕೀಯದಲ್ಲಿ ಆಸಕ್ತಿಯಿಲ್ಲದಿದ್ದರೂ ರಾಜಕಾರಣಕ್ಕೆ ಬರಲೇಬೇಕಾಯಿತು. ಮತದಾರ ಪ್ರಭುಗಳಾದ ನೀವು ನಿಮ್ಮ ಆಶೀರ್ವಾದದಿಂದ ನನ್ನನ್ನು ಸತತವಾಗಿ ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿ ಸಚಿವನಾಗಲು ಸಹಕರಿಸಿದ್ದೀರಿ. ಇದನ್ನು ಈ ಜನ್ಮದಲ್ಲಿ ಮರೆಯಲು ಸಾಧ್ಯವಿಲ್ಲ.

ಈ ನಿಮ್ಮ ಋಣವನ್ನು ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಜೆಡಿಎಸ್ ನಿಂದ ಶಾಸಕನಾಗಿದ್ದಾಗ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಬಿಜೆಪಿ ಪಕ್ಷಕ್ಕೆ ಬಂದು ನಾನು ಸಚಿವನಾದ ನಂತರ 2000 ಕೋಟಿಗಳಿಗಿಂತ ಹೆಚ್ಚಿನ ಅನುದಾನವನ್ನು ತಂದು ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಪಣ ತೊಟ್ಟಿದ್ದೇನೆ. ಅಭಿವೃದ್ಧಿ ಕೆಲಸಗಳು ಪ್ರಗತಿ ಹಂತದಲ್ಲಿವೆ. ಇನ್ನಾರು ತಿಂಗಳಲ್ಲಿ ತಾಲ್ಲೂಕು ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿ ತಾಲ್ಲೂಕಾಗಲಿದೆ. ಈಗ ಚುನಾವಣೆ ಬಂದಿದೆ ನಾನು ಚುನಾವಣೆಯಲ್ಲಿ ನಿಲ್ಲಬೇಕಾ, ಬೇಡವಾ, ನನ್ನ ಅವಶ್ಯಕತೆ ತಾಲ್ಲೂಕಿಗೆ ಇದೆಯಾ ಎಂಬುದನ್ನು ನೀವೇ ತೀರ್ಮಾನ ಮಾಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್ಮುಲ್ ಮಾಜಿನಿರ್ದೇಶಕ ಎಸ್ ಅಂಬರೀಶ್, ರಾ?ಪ್ರಶಸ್ತಿ ವಿಜೇತ ಡಾ.ಅಂಚಿ.ಸಣ್ಣಸ್ವಾಮಿಗೌಡ, ಗೂಡೆಹೊಸಹಳ್ಳಿ ಜವರಾಯಿಗೌಡ, ಅಘಲಯ ಮಂಜುನಾಥ್, ಬೂಕನಕೆರೆ ಜವರಾಯಿಗೌಡ, ಅಕ್ಕಿಹೆಬ್ಬಾಳು ಗ್ರಾ.ಪಂ.ಅಧ್ಯಕ್ಷೆ ನಾಗೇಶ್ವರಿ, ಬೀರವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬೀರುವಳ್ಳಿ ಕುಮಾರ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂಜನಿಗೌಡಪಾಪಣ್ಣ, ಜೈನಹಳ್ಳಿ ಗೌಡಪ್ಪ, ಸಚಿವ ನಾರಾಯಣಗೌಡರ ಆಪ್ತಸಹಾಯಕ ದಯಾನಂದ್, ಮಾಕವಳ್ಳಿ ಗ್ರಾ.ಪಂ.ಸದಸ್ಯ ಕರೋಟಿ ಅನಿಲ್, ರಾಮಕೃಷ್ಣಗೌಡ, ಪುರಸಭಾಸದಸ್ಯ ಕೆ ಆರ್ ನೀಲಕಂಠ, ರವಿಶಿವಕುಮಾರ್, ಎಪಿಎಂಸಿ ನಿರ್ದೇಶಕ ನಾಗಣ್ಣ, ಲೋಹಿತ್, ಜಯರಾಮನಾಯಕ, ಚಂದ್ರಮೋಹನ್, ಕರ್ತೇನಹಳ್ಳಿಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

See also  ವಿಜಯನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು