ನಂಜನಗೂಡು: ಸುಮಾರು ನಾಲ್ಕುವರೆ ವರ್ಷಗಳಿಂದ ನಾನು ಈ ಕ್ಷೇತ್ರದಲ್ಲಿ ಒಂಟಿ ಸಲಗದಂತೆ ಹೋರಾಟ ಮಾಡುತ್ತಿದ್ದೇನೆ ಎಂದು ಶಾಸಕ ಬಿ. ಹರ್ಷವರ್ಧನ್ ಹೇಳಿದರು.
ನಂಜನಗೂಡು ತಾಲ್ಲೂಕಿನ ನೆಲ್ಲಿ ತಾಳಪುರ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತೆ ಯೋಜನೆಯಡಿ ನಿರ್ಮಾಣಗೊಂಡ ರಾಜೀವ್ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಗೊಳಿಸಿದ್ದೇನೆ ಎನ್ನುವ ತೃಪ್ತಿ ಇದೆ ಕ್ಷೇತ್ರಕ್ಕೆ ನನ್ನ ಶ್ರಮದ ಫಲವಾಗಿ 600 ನಿಂದ 700 ಕೋಟಿ ಅನುದಾನ ತಂದು ಅಭಿವೃದ್ಧಿಗೊಳಿಸಿದ್ದೇನೆ. ಮುಂದೆ ಈ ಕ್ಷೇತ್ರಕ್ಕೆ ಇನ್ನೂ ಏನೇನು ಅಭಿವೃದ್ಧಿಗೊಳಿಸಬೇಕೆಂದು ಕನಸು ಕಟ್ಟಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ಭಾಗದಲ್ಲಿ ಆಸ್ಪತ್ರೆ ಶಾಲ ಕೊಠಡಿ ಸಮುದಾಯ ಭವನ ಇನ್ನು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ. ಹಿಂದೆ ಯಾರೂ ಮಾಡದ ನನ್ನ ಕನಸಿನ ಯೋಜನೆ ನುಗ್ಗು ಏತ ನೀರಾವರಿ ಯೋಜನೆಗೆ ಮೊದಲ ಆದ್ಯತೆ ನೀಡಿದ್ದು ಇದರಿಂದಾಗಿ ಸರಿಸುಮಾರು 15 ರಿಂದ 20 ಸಾವಿರ ರೈತರಿಗೆ ಅನುಕೂಲವಾಗಲಿದೆ ಎಂದರು. ಪ್ರತಿ ಗ್ರಾಮಗಳಲ್ಲೂ ಕಾಂಕ್ರೀಟ್ ರಸ್ತೆಗಳನ್ನು ಮಾಡಿಸಿದ್ದೇವೆ ಎಂದರು ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೊಳಿಸಬೇಕಾದರೆ ಮುಂಬರುವ ಚುನಾವಣೆಯಲ್ಲಿ ನಾನು ಮಾಡಿರುವ ಕೆಲಸಗಳನ್ನು ಮನಗಂಡು ಮುಂದೆಯೂ ನನಗೆ ಆಶೀರ್ವದಿಸಬೇಕೆಂದು ಕರೆ ನೀಡಿದರು.
ಇದೆ ಸಂದರ್ಭದಲ್ಲಿ ಗ್ರಾಂಪಂ ಅಧ್ಯಕ್ಷ ಚಂದ್ರುವಾಡಿ ಮಹದೇವಸ್ವಾಮಿ,ಕಾರ್ಯಕ್ರಮದಲ್ಲಿ ಗ್ರಾಂಪಂ ಉಪಾಧ್ಯಕ್ಷೆ ದೇವಮ್ಮ. ಸದಸ್ಯರಾದ ಕೆ. ಟಿ.ಮಲ್ಲೇಶ್ ಮಾದನಹಳ್ಳಿ ನಂಜುಂಡಸ್ವಾಮಿ. ರಾಜೇಂದ್ರ ಕೆಂಪಮ್ಮ ಶಶಿಕಲಾ ರಾಮಲಿಂಗ ಸ್ವಾಮಿ ಶಿವಮಲ್ಲು ರಾಜಣ್ಣ ಪ್ರೇಮ ನಾಗೇಗೌಡ ರವಿ ಮಂಗಳಮ್ಮ ವಿಜಯಲಕ್ಷ್ಮಿ ನಾಗೇಂದ್ರ ನಂದಿನಿ ಮಣಿ ಜಯಲಕ್ಷ್ಮಿ ಹುಲ್ಲಹಳ್ಳಿ ಗ್ರಾಮ ಅಧ್ಯಕ್ಷ ಮಹೇಶ್ ಹರದನಹಳ್ಳಿ ಗ್ರಾಂಪಂ ಅಧ್ಯಕ್ಷ ಮಹೇಶ ಸದಸ್ಯ ಹರದನಹಳ್ಳಿ ಬಸಪ್ಪ ಮುಖಂಡರಾದ ಕಪ್ಸೋಕೆ ರವೀಂದ್ರ ತರಗನಹಳ್ಳಿ ಬಸುರಾಜು, ಪರಮೇಶಿ ಸಿದ್ದನಾಯ್ಕ ತೋಪ ನಾಯ್ಕ ಧರ್ಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ವೇತ, ಲೆಕ್ಕ ಪರಿಶೋಧಕ ಬಸವಣ್ಣ, ಇನ್ನು ಮುಂತಾದವರು ಹಾಜರಿದ್ದರು.