ನಂಜನಗೂಡು: ಕಿಡಿಗೇಡಿಗಳು ಇಟ್ಟ ಬೆಂಕಿಗೆ ಎಲೆ ತೋಟ ಮತ್ತು ಬಾಳೆ ಬೆಳೆ ಸುಟ್ಟು ಕರಕಲಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದಲ್ಲಿ ನಡೆದಿದೆ.
ಹೆಡತಲೆ ಗ್ರಾಮದ ರೈತ ಮಹದೇವನಾಯಕ ಎಂಬುವವರು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ವೀಳ್ಯದೆಲೆ, ಮಾವು ಬೆಳೆಗಳು ಬೆಂಕಿಗೆ ಸಿಲುಕಿ ನಾಶವಾಗಿದೆ. ಮಧ್ಯಾಹ್ನದ ಸಮಯದಲ್ಲಿ ಯಾರೋ ಕಿಡಿಗೇಡಿಗಳು ರಸ್ತೆಯ ಪಕ್ಕದಲ್ಲಿ ಬೆಂಕಿ ಇಟ್ಟಿದ್ದಾರೆ. ಗಾಳಿಗೆ ನಮ್ಮ ಜಮೀನಿನ ವರೆಗೂ ವ್ಯಾಪ್ತಿಸಿ ಬೆಳೆಗಳಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ.
ಈ ಬೆಳೆಯನ್ನೇ ನಂಬಿಕೊಂಡು ನಾವು ಜೀವನ ಸಾಗಿಸುತ್ತಿದ್ದೇವು ಸಾವಿರಾರು ರೂ. ನಷ್ಟವಾಗಿದೆ ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಹಾದೇವನಾಯಕ ಒತ್ತಾಯ ಮಾಡಿದರು.