News Kannada
Wednesday, October 04 2023
ಮೈಸೂರು

ಏ.22ರಿಂದ ಹೊರನಾಡಿನಲ್ಲಿ ಸ್ವರ್ಣಮಹೋತ್ಸವ -ಬ್ರಹ್ಮಕುಂಭಾಭಿಷೇಕ

Swarna Mahotsava - Brahmakumbhabhisheka from April 22
Photo Credit : By Author

ಮೈಸೂರು: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ ಹಾಗೂ ಬ್ರಹ್ಮಕುಂಭಾಭಿಷೇಕ ಏಪ್ರಿಲ್ 22ರಿಂದ 29ರವರೆಗೆ ಹೊರನಾಡಿನಲ್ಲಿ ನಡೆಯಲಿದ್ದು ಅದರ ಮಾಹಿತಿ‌ ಆಹ್ವಾನದ ಪ್ರಚಾರ ಸಾಮಗ್ರಿಗಳನ್ನ ಮೈಸೂರಿನ‌ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ರವರು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಆದಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ತಾಯಿ ನೆಲೆಸಿರುವ ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಏಪ್ರಿಲ್ 22ರಿಂದ 29ರವರಗೆ ಒಂದು ವಾರ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ ಹಾಗೂ ಬ್ರಹ್ಮಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ, ಬಹುಮುಖ್ಯವಾಗಿ ದೇವರ ರಥೋಥ್ಸವ, ರಜತ ತಾಮ್ರ ಕಲಶ ಸೇವೆ, ಶ್ರೀ ಮಹಾಗಣಪತಿ ನವಗ್ರಹ ರುದ್ರ ಹೋಮ, ಲಲಿತಾ ಮೂಲ ಮಂತ್ರದ ಹೋಮ, ಶ್ರೀ ಅನ್ನಪೂರ್ಣ ಮೂಲಮಂತ್ರದ ಹೋಮ ಸಹಸ್ರ ಚಂಡಿಕಾ ಯಾಗ, ನಿತ್ಯ ಅನ್ನದಾನ ಸೇವೆ, ಕೋಟಿ ಕುಂಕುಮಾರ್ಚನೆ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ನಡೆಯಲಿವೆ ಹೆಚ್ಚಿನ ಮಾಹಿತಿಗಾಗಿ 9945266832 ಆಸಕ್ತ ಭಕ್ತರು ಸಂಪರ್ಕಿಸಬಹುದಾಗಿದೆ ಎಂದರು.

ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಶ್ರೀರಂಗಪಟ್ಟಣದ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮ‌ ರವರು ಮಾತನಾಡಿ 50ವರ್ಷಗಳ ಬಳಿಕ ಪುಣ್ಯಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಲಾಯದಲ್ಲಿ ನಡೆಯುತ್ತಿರುವ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ತಮ್ಮ ಹರಕೆ ಸೇವೆ ಸಲ್ಲಿಸಲು ಒಂದು ಒಳ್ಳೆಯ ಸಮಯವಾಗಿದೆ. ಅನ್ನದಾನಕ್ಕೆ ಬೇಕಾಗುವ ಅಡುಗೆ ಸಾಮಾಗ್ರಿಗಳನ್ನ ನಿಮ್ಮ ಊರಿನಿಂದಲೇ ತಾವು ಇಚ್ಚೆ ಪಟ್ಟಿದಲ್ಲಿ ತಂದು ಸಲ್ಲಿಸಬಹುದಾಗಿದೆ ಹೊರನಾಡು ಅನ್ನಪೂರ್ಣೇಶ್ವರಿಗೆ ಪ್ರಪಂಚಾದ್ಯಂತ ಭಕ್ತರಿದ್ದು, ಭಕ್ತರು ಸಲ್ಲಿಸುವ ಹರಕೆ ಸಮಾಗ್ರಿಗಳ ಮೂಲಕ ನೈವೇದ್ಯ ಮಾಡುವುದು ವಿಶೇಷವಾಗಿದೆ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ರವರು ಮಾತನಾಡಿ ಹೊರನಾಡಿನಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ತಮ್ಮ ಸೇವೆಯನ್ನ ವಿವಿಧ ಹಂತದಲ್ಲಿ ಸೇವೆ ಸಲ್ಲಿಸಬಹುದು, ಮತ್ತು ಈಭಾರಿ ಮೈಸೂರಿನಿಂದ ಹೊರೆಸೇವೆ ಸಲ್ಲಿಸುವ ಭಕ್ತಾಧಿಗಳು ನೀಡುವ ಸಾಮಾಗ್ರಿಗಳನ್ನ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರಕ್ಕೆ ತಂದುಕೊಡಬಹುದಾಗಿದೆ ಎಂದರು.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಜಿ. ಭೀಮೇಶ್ವರ, ಇಳೈ ಆಳ್ವಾರ್ ಸ್ವಾಮೀಜಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ. ಭಾನುಪ್ರಕಾಶ್, ಶರ್ಮ, ರಾಘವೇಂದ್ರ ಭಟ್, ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿಜಯ್ ಕುಮಾರ್, ವಿದ್ಯಾಶಂಕರ್, ಕಡಕೊಳ ಜಗದೀಶ್, ವಿಶ್ವನಾಥ್, ರಂಗನಾಥ್, ಸುಚೀಂದ್ರ, ಪ್ರಶಾಂತ್, ಲಕ್ಷ್ಮಿದೇವಿ, ಸೌಭಾಗ್ಯ ಮೂರ್ತಿ, ಹರೀಶ್, ನಾಗಶ್ರೀ, ಸುಮ, ಇನ್ನಿತರರು ಇದ್ದರು.

See also  ಮೈಸೂರು: ಯುವ ಮನಸ್ಸುಗಳೊಂದಿಗೆ ಸ್ವಾತಂತ್ರ್ಯ ಧ್ವಜದ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು