ನಂಜನಗೂಡು: ವಸತಿ ಸಚಿವರಾಗಿದ್ದ ಸೋಮಣ್ಣ ಒಂದು ಮನೆಯನ್ನು ಕಟ್ಟಿ ಕೊಟ್ಟಿಲ್ಲ ಕ್ಷೇತ್ರಕ್ಕೆ ಅವರು ಏನು ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಯಾರು ಎಷ್ಟು ದ್ವೇಷ ರಾಜಕಾರಣ ಮಾಡಿದರು ನಡೆಯುವುದಿಲ್ಲ. ಬಿಜೆಪಿ ಅಭ್ಯರ್ಥಿ ವಸತಿ ಸಚಿವ ಸೋಮಣ್ಣನವರು ಒಂದು ಮನೆ ಕೊಟ್ಟಿಲ್ಲ. ಇಡೀ ರಾಜ್ಯಕ್ಕೂ ಒಂದು ಮನೆ ಕೊಟ್ಟಿಲ್ಲ. ಒಂದು ಮನೆಯನ್ನು ಕೊಡದೆ ಇರುವವರು ಬಡವರ ಪರ ಇರಲು ಹೇಗೆ ಸಾಧ್ಯ. ನಾನು ಮುಖ್ಯಮಂತ್ರಿ ಆಗಿದ್ದಾಗ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ.
ಬಿಜೆಪಿಯವರು ಒಂದು ಮನೆಯನ್ನು ಮಂಜೂರು ಮಾಡಿಕೊಟ್ಟಿಲ್ಲ. ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳು ನಮ್ಮ ಕ್ಷೇತ್ರಕ್ಕೆ ಏನು ಮಾಡಿಲ್ಲ. ದಲಿತರು ಮತ್ತು ರೈತರು ಹಿಂದುಳಿದರ ಪರವಾಗಿ ಇವರು ಇಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ತಹಸಿಲ್ದಾರ್ ಕಚೇರಿಗೆ ಹೋಗಲಿ 40 ಪರ್ಸೆಂಟ್. ಡಿಸಿ ಕಚೇರಿಗೆ ಹೋಗಲಿ 40 ಪರ್ಸೆಂಟ್. ಇ ಒ ಕಚೇರಿಗೆ ಹೋಗಲಿ, ಪೊಲೀಸ್ ಕಚೇರಿಗೆ ಹೋದರು 40% ನಡೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಸರ್ಕಾರ. ಈ ಸರ್ಕಾರ ಇದ್ದರೆ ರಾಜ್ಯ ಉದ್ದಾರ ಆಗುವುದಿಲ್ಲ ಇದನ್ನು ಕಿತ್ತೊಗೆಯಬೇಕು ಎಂದು ಹೇಳಿದರು.