News Kannada
Monday, February 26 2024
ಮೈಸೂರು

ಆಂಧ್ರಪ್ರದೇಶದ ಐಷಾರಾಮಿ ಕಾರು ಕಳ್ಳನ ಬಂಧನ

Andhra Pradesh luxury car thief arrested
Photo Credit : By Author

ಮೈಸೂರು: ಮನೆಗಳ್ಳತನ ಮತ್ತು ಕಾರುಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ವೃತ್ತಿ ನಿರತ ಕಳ್ಳನನ್ನು ಮೈಸೂರಿನ ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ 1.19 ಕೋಟಿ ರೂ. ಮೌಲ್ಯದ 3 ಕಾರುಗಳು, 3 ವಾಚ್‌ಗಳು ಮತ್ತು 750 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆಂಧ್ರಪ್ರದೇಶ ಮೂಲದ ಸತ್ತಿ ರೆಡ್ಡಿ ಅಲಿಯಾಸ್ ಸತ್ತಿ ಬಾಬು (35) ಬಂಧಿತ ಐಷಾರಾಮಿ ಕಳ್ಳನಾಗಿದ್ದಾನೆ. ಈತ ಯಾದವಗಿರಿಯ 5ನೇ ಮುಖ್ಯರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಜು.25ರಂದು ಕಳ್ಳತನ ಮಾಡಿಕೊಂಡು ಹೋಗಿದ್ದನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಸತ್ತಿ ರೆಡ್ಡಿಯನ್ನು ಬಂಧಿಸಿದ್ದಾರೆ.

ಈತ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದಲ್ಲದೇ ಶ್ರೀಮಂತರು ಇರುವ ಬಡಾವಣೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಾರು ಕಳವು ಮಾಡುತ್ತಿದ್ದನು. ಸದ್ಯ ಆರೋಪಿಯಿಂದ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01 ಕಾರು, 2 ಮನೆಗಳವು ಹಾಗೂ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಕಾರು ಕಳವು ಪ್ರಕರಣ ಪತ್ತೆಯಾಗಿದೆ. ಈ ಆರೋಪಿಯಿಂದ ಒಟ್ಟು 1.19 ಕೋಟಿ ಮೌಲ್ಯದ 3 ಕಾರು, ಬ್ರೀಗ್ವಿಟ್, ಓಮೇಗಾ, ಪನೇರಾಯ್ ಕಂಪನಿಯ 3 ವಾಚ್, 1 ಹೆಡ್ ಫೋನ್ ಮತ್ತು ಬಿ ಮತ್ತು ಒ ಫೋನ್ ಸ್ವೀಕರ್ ಹಾಗೂ 750 ಗ್ರಾಂ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕಳ್ಳ ಸತ್ತಿ ರೆಡ್ಡಿ ಗೂಗಲ್ ಮೂಲಕ ಶ್ರೀಮಂತರು ವಾಸವಿರುವ ಬಡಾವಣೆಗಳನ್ನು ಪತ್ತೆ ಹಚ್ಚುತ್ತಿದ್ದ. ಅಲ್ಲಿಗೆ ಬಂದು ಮನೆ ಮತ್ತು ಕಾರು ಕಳ್ಳತನ ನಡೆಸುತ್ತಿದ್ದ. 35 ವರ್ಷದ ಖದೀಮ ಎಸ್ ಎಸ್ ಎಲ್ ಸಿ ವರೆಗೆ ವ್ಯಾಸಂಗ ಮಾಡಿದ್ದು, ಆತನ ವಿರುದ್ಧ 59 ಪ್ರಕರಣಗಳು ದಾಖಲಾಗಿದೆ. ಆಂಧ್ರದಲ್ಲಿ 36, ತೆಲಂಗಾಣದಲ್ಲಿ 20 ಮತ್ತು ತಮಿಳುನಾಡಿನಲ್ಲಿ 3 ಪ್ರಕರಣ ದಾಖಲಾಗಿದ್ದು, ಚಿತ್ತೂರಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮೈಸೂರಿನಲ್ಲಿ ಕಳ್ಳತನ ನಡೆಸುವಾಗ ಮತ್ತೆ ಸಿಕ್ಕಿ ಬಿದ್ದಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ನಗರ ಕೇಂದ್ರ ಸ್ಥಾನದ ಅಪರಾಧ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಎನ್.ಆರ್.ಉಪ ವಿಭಾಗದ ಎಸಿಪಿ ಸಿ.ಕೆ.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ವಿ.ವಿ ಪುರಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಮೋಹನ್‌ಕುಮಾರ್, ಎಸ್‌ಐ ಕೆ.ಲೇಪಾಕ್ಷ ಕೆ.ಕೆ.ಮೋಹನ್, ಸಿಬ್ಬಂದಿ ಎಸ್. ಪ್ರಸನ್ನ, ಜಿ. ಸುರೇಶ್, ರವಿಗೌಡ, ಎಸ್. ಚೆಲುವರಾಜು, ಸುನಿಲ್ ಕಾಂಬಳೆ, ವೀರಣ್ಣ, ಬಿ. ಉಮೇಶ್, ಹರೀಶ್ ಮತ್ತು ಚಾಮುಂಡಮ್ಮ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು