News Kannada
Saturday, June 03 2023
ಮೈಸೂರು

ಮೈಸೂರು: ಬದಲಾವಣೆ ಬಯಸಿದ ರಾಜ್ಯದ ಜನತೆ- ಎಂ.ಜೆ.ಶ್ರೀಕಾಂತ್

Mysore/Mysuru: The people of the State wanted a change: M.J. Srikanth
Photo Credit : News Kannada

ಮೈಸೂರು: ಡಬಲ್ ಇಂಜಿನ್ ಸರ್ಕಾರ ಡಬಲ್ ಇಂಜಿನ್ ಇದ್ದರೆ ಮಾತ್ರ. ಆದರೆ, ಕರ್ನಾಟಕದ ಅಭಿವೃದ್ಧಿಯಲ್ಲಿ ರಾಜ್ಯದ ಇಂಜಿನ್ ಕೆಲಸ ಮಾಡಿಲ್ಲ. ಅದನ್ನು ರಾಜ್ಯದ ಜನತೆ ತಿರಸ್ಕರಿಸಿ ಸೂಕ್ತ ಉತ್ತರ ನೀಡಿದ್ದಾರೆ ಎಂದು ಪೊಲಿಟಿಕಲ್ ಸ್ಟ್ರ್ಯಾಟಜಿಸ್ಟ್ ಎಂ.ಜೆ.ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಎಷ್ಟು ಬಾರಿ ಬಂದು ಅಬ್ಬರದ ಪ್ರಚಾರ ಮಾಡಿದರು ಸಹ ಕರ್ನಾಟಕ ಜನತೆ ಡಬಲ್ ಇಂಜಿನ್ ಸರ್ಕಾರ ಒಪ್ಪಿಕೊಂಡಿಲ್ಲ. ಈ ಬಾರಿಯ ಚುನಾವಣಾ ಫಲಿತಾಂಶ ಬಿಜೆಪಿಗೆ ದಕ್ಷಿಣ ಭಾರತದ 2024ರ ಸಂಸತ್ ಚುನಾವಣೆಗೆ ಎಚ್ಚರಿಕೆಯ ಗಂಟೆಯಾಗಿದೆ. ಕೇಂದ್ರ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಒಗ್ಗಟ್ಟಿನಲ್ಲಿ ನಡೆದ ಭಾರತ್ ಜೋಡೋ, ಕರ್ನಾಟಕ್ ಜೋಡೋ ಯಾತ್ರೆಯ ಪರಿಣಾಮದ ಫಲಶ್ರುತಿಯನ್ನು ಇಂದು ರಾಜ್ಯದ ಜನತೆ ನೀಡಿದ್ದಾರೆ.

ಈ ಬಾರಿ ನಾನು ಒಬ್ಬ ರಾಜಕೀಯ ತಂತ್ರಗಾರನಾಗಿ ಬೆಂಗಳೂರಿನ ಮಹದೇವಪುರ, ತಿಪಟೂರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಿದ್ದ ವರುಣ ವಿಧಾನಸಭಾ ಕ್ಷೇತ್ರ ಸೇರಿದಂತೆ 3ವಾರ್ ರೂಮ್‌ಗಳ ಕೆಲಸಗಳನ್ನು ನಿರ್ವಹಿಸಿದ್ದೇನೆ. ಆ ಭಾಗದಲ್ಲಿ ಕಂಡುಬಂದ ವಿಷಯಗಳು ಬಡಜನತೆಯ ಸಮಗ್ರ ಜೀವನಕ್ಕೆ ಜನಪರ ಸ್ನೇಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುಬೇಕು ಎಂಬ ಆಶಯಗಳೇ ಕೇಳಿ ಬಂದಿತ್ತು.

ಬೆಲೆ ಏರಿಕೆಯಿಂದ ತತ್ತರಿಸಿರುವ ಬಡಜನತೆ ಸಮರ್ಥ ಜೀವನಕ್ಕಾಗಿ ಮಹಿಳಾ ಮತದಾರರು ಬಹು ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ನೂತನ ಸರ್ಕಾರ ರಚನೆಯಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ವಿಚಾರ ಅಥವಾ ದಿ ಕೇರಳ ಸ್ಟೋರಿ, ಭಜರಂಗದಳ ಈ ಯಾವ ವಿಚಾರಗಳು ಕೂಡ ವೋಟ್ ಬ್ಯಾಂಕ್ ಆಗೋದಿಲ್ಲ ಎಂಬುದು ಗಮನಾರ್ಹ ಅಂಶ. ಇದು ಬಿಜೆಪಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ಈ ಬಾರಿ ಕರ್ನಾಟಕ ಜನತೆ ಈ ವಿಚಾರಗಳನ್ನು ಮುಖ್ಯವಾಗಿರಿಸಿಕೊಂಡು ಮತ ಚಲಾವಣೆ ಮಾಡಿಲ್ಲ. ಬಹಳ ಮುಖ್ಯವಾಗಿ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷದತ್ತ ಹೆಚ್ಚು ಮುಖ ಮಾಡಿದ್ದು, ಬಿಜೆಪಿಯತ್ತ ಕಡಿಮೆ ವಾಲುತ್ತಿವೆ. ಹಿಮಾಚಲ ಪ್ರದೇಶದಲ್ಲಿ ಪ್ರಿಯಾಂಕ ಗಾಂಧಿಯವರು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು. ಪಿಂಚಣಿದಾರರ ವಿಚಾರಗಳನ್ನು ಒಳಗೊಂಡಂತೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು, ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಘೋಷಣೆ ಮಾಡಿದ್ದು. ಕರ್ನಾಟಕ ಜನತೆ ಗ್ಯಾರಂಟಿ ಯೋಜನೆಗಳನ್ನು ಪರಿಗಣಿಸಿ ನಂಬಿಕೆಯಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳೆಲ್ಲವೂ ಕಾಂಗ್ರೆಸ್‌ನತ್ತ ಮುಖ ಮಾಡಿವೆ.

ನನ್ನ ಗಮನಕ್ಕೆ ಬಹುವಾಗಿ ಕಾಣಿಸಿದ್ದು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಚುನಾವಣಾ ಪ್ರಚಾರದ ರೀತಿ ನೀತಿ. ಗ್ಯಾರಂಟಿ ಕಾರ್ಡ್‌ಗಳ ಮಾಹಿತಿ ಇಲ್ಲದಿರುದುವು ಜತೆಗೆ ಹೊಂದಾಣಿಕೆಯ ಪ್ರಚಾರ ಈ ವಿಚಾರಗಳ ಮೇಲೆ ನಾನು ಕೆಲಸ ಮಾಡಿದ್ದು ಸಾಧ್ಯವಾದಷ್ಟು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ.

See also  ಗ್ಯಾಸ್‌ ಸಿಲಿಂಡರ್‌ಗೆ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್‌

ಬಿಜೆಪಿ ಆಪರೇಷನ್ ಕಮಲದ ರೀತಿಯ ಯಾವ ಯೋಜನೆಗಳಿಗೆ ಮಣೆ ಹಾಕದೆ ಕರ್ನಾಟಕ ಜನತೆಯ ತೀರ್ಪನ್ನು ಗೌರವಿಸಿ ಬಿಜೆಪಿ ವಿರೋಧ ಪಕ್ಷವನ್ನು ಅಲಂಕರಿಸುವುದು ಸೂಕ್ತ. ಕರ್ನಾಟಕ ರಾಜ್ಯದ ರಾಜಕೀಯ ಚಿತ್ರಣ ಬಹಳ ಹಿಂದಿನಿಂದಲೂ ಕೇಂದ್ರದಲ್ಲಿ ಅಧಿಕಾರವಿರುವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದಿಲ್ಲ ಎಂಬ ಮಾತಿನಂತೆ ರಾಜ್ಯದಲ್ಲಿ ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು