News Karnataka Kannada
Saturday, April 20 2024
Cricket
ಮೈಸೂರು

ಮೈಸೂರು: ಭೂತಾಪಮಾನ ಏರಿಕೆ ಜೀವಸಂಕುಲಕ್ಕೆ ಮಾರಕ

Mysore/ Mysuru: The rise in ghosts is dangerous for the life of the species.
Photo Credit : News Kannada

ಮೈಸೂರು : ಮನುಷ್ಯನಲ್ಲಿ ದುರಾಸೆಗಳು ಹೆಚ್ಚಿದಂತೆ, ಪರಿಸರದ ಮೇಲೆ ದೌರ್ಜನ್ಯವೂ ಹೆಚ್ಚಿದೆ. ಕಟ್ಟಡಗಳ ಮೋಹದಿಂದಾಗಿ ಗಿಡಮರಗಳು ನಾಶವಾಗಿವೆ. ಪ್ರಕೃತಿಯ ಸಹಜ ವಾತಾವರಣ ಕಲುಷಿತವಾಗಿ, ಭೂತಾಪಮಾನ ಏರುತ್ತಿರುವುದರಿಂದ ಜೀವಕುಲಕ್ಕೆ ಮಾರಕವಾಗುತ್ತಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಷನ್ ವತಿಯಿಂದ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅತಿಯಾದ ಕಾರಣ ಹವಾಮಾನ ಮತ್ತು ವಾಯುಗುಣ ವೈಪರೀತ್ಯಗಳು ಪ್ರತಿದಿನ ನಮ್ಮನ್ನು ಕಾಡುತ್ತಿವೆ ಎಂದರು.

ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರವನ್ನು ಪ್ರೀತಿಸಬೇಕು. ಎಲ್ಲೆಡೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಆ ಮೂಲಕ ಯಾವುದೇ ರೀತಿಯ ಮಾಲಿನ್ಯ ಮಾಡದೆ ಪರಿಸರವನ್ನು ಸ್ವಚ್ಚತವಾಗಿಟ್ಟುಕೊಂಡು ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಮ್ಯಾಜಿಕ್ ಬಸ್ ಇಂಡಿಯಾ ಫಂಡೇಷನ್ನಿನ ತರಬೇತಿ ಮೇಲ್ವಿಚಾರಣಾಧಿಕಾರಿ ಸಂಗೀತಾ ಮಾತನಾಡಿ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಮತ್ತು ಅದನ್ನು ಎಲ್ಲೆಂದರಲ್ಲಿ ಸುಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಜೊತೆಗೆ ಮಾರಣಾಂತಿಕ ರೋಗಗಳು ಹೆಚ್ಚಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ಕೈಬಿಟ್ಟು, ಬಟ್ಟೆಯ ಬ್ಯಾಗುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಮನೆ ಮತ್ತು ಶಾಲೆಯಲ್ಲಿನ ತ್ಯಾಜ್ಯ ವಸ್ತುಗಳ ನಿರ್ವಹಣೆಯ ಬಗ್ಗೆ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ಮೇಲ್ವಿಚಾರಕಿ ಶಿವಮ್ಮ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಗ್ರಾಮ ಪಂಚಾಯತಿಯ ಕಸ ಸಾಗಣೆ ವಾಹನ ಚಾಲಕರಾದ ವಾಣಿ ಮತ್ತು ಹರ್ಷಿತಾ ಅವರಿಗೆ ಮಕ್ಕಳು ಶುಭಾಶಯ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ಶಾಲಾವರಣದಲ್ಲಿ ಪಪ್ಪಾಯಿ ಮತ್ತು ನುಗ್ಗೆ ಗಿಡಗಳನ್ನು ವಿದ್ಯಾರ್ಥಿಗಳಿಂದ ನೆಡಿಸಿ ದತ್ತು ನೀಡಲಾಯಿತು.

ಇದೇ ಸಂದರ್ಭದಲ್ಲಿ ತ್ಯಾಜ್ಯ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಮರು ಬಳಸಿ ಉಪಯುಕ್ತ ವಸ್ತುಗಳ ತಯಾರಿಸುವ ‘ಕಸದಿಂದ ರಸ’ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಎಸ್. ವಿಸ್ಮಯ (ಪ್ರಥಮ), ಹೆಚ್.ಜೆ. ನಮ್ರತ್ ಗೌಡ (ದ್ವಿತೀಯ), ಭೈರವ ನಾಯಕ (ತೃತೀಯ), ದೀಕ್ಷಿತಾ ಮತ್ತು ಫೌಜಿಯಾ (ಸಮಾಧಾನಕರ) ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಚಪ್ಪ, ಪ್ರಭಾರ ಮುಖ್ಯ ಶಿಕ್ಷಕಿ ಕೆ.ವಿ. ಪುಷ್ಪಲತಾ, ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಯೂತ್ ಮೆಂಟರ್ ಡಿ.ಕೆ. ವಿಜೇತ ಮತ್ತು ಎಸ್. ರಂಗರಾಜು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು