News Karnataka Kannada
Saturday, April 27 2024
ಮೈಸೂರು

ಮೈಸೂರು: ಮಾಜಿ ಎಂಎಲ್ಸಿ ಡಿ ಮಾದೇಗೌಡರಿಗೆ ಸನ್ಮಾನ

Mysuru: Former MLC D. Madegowda felicitated
Photo Credit : By Author

ಮೈಸೂರು: ಆಶಾ ಮಂದಿರ ರೂವಾರಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಮಾದೇಗೌಡರನ್ನು ಕುಂಬಾರ ಕೊಪ್ಪಲ್ಲಿನ ಅವರ ನಿವಾಸದಲ್ಲಿ ಯುವ ಗ್ರಾಮ ಅಭ್ಯುದಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಿತಿಯ ಪಟೇಲ್ ನಾಗರಾಜ್ ಡಿ ಅವರು ಮಾತನಾಡಿ ಧೀಮಂತ ನಾಯಕರಾದ ಮಾಜಿ ಶಾಸಕರು, ಮಾಜಿ ಮುಡಾ ಅಧ್ಯಕ್ಷರಾದ ಡಿ. ಮಾದೇಗೌಡರದು ಕೇವಲ 18 ತಿಂಗಳಲ್ಲಿ 9 ಪ್ರತಿಷ್ಠಿತ ಬಡಾವಣೆಗಳ ನಿರ್ಮಾಣ, 30 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಬೃಹತ್ ಸಾಧನೆಯಾಗಿದೆ.

ಇತ್ತೀಚೆಗೆ 2022 ರಲ್ಲಿ ಜೀವಮಾನ ಸಮಾಜ ಸೇವೆಗಾಗಿ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ್ದು ಅವರ ಸೇವೆಗೆ ಅರ್ಹವಾಗಿದೆ. ನಿರ್ಮಲ ನಗರ ಯೋಜನೆಯ ಪ್ರಾಮಾಣಿಕ ಅನುಷ್ಠಾನಕ್ಕಾಗಿ, ಇವರಿಗೆ ರಾಷ್ಟ್ರಪ್ರಶಸ್ತಿ ಅರಸಿ ಬಂದಿದ್ದು, ನಾಡಿನ ಹೆಮ್ಮೆ ಎನಿಸಿಕೊಂಡರು. ಯಾವುದೇ ಅಧಿಕಾರವನ್ನು ಹುಡುಕಿಕೊಂಡು ಹೋಗದಿದ್ದರೂ, ದೈವಸಂಕಲ್ಪದಿಂದ ಮುಡಾ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಭಾರತೀಯ ಸೇವಾದಳದ ಅಧ್ಯಕ್ಷರಾಗಿ, ಯಾವುದೇ ಸ್ವಜನ ಪಕ್ಷಪಾತ ಭ್ರಷ್ಟಾಚಾರದ ಸೋಂಕಿಲ್ಲದೆ, ಜನಸೇವೆ ಮಾಡಿದ ಇವರು, ಇಂದಿನ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿ ಎಂದರು.

2012-13 ರಲ್ಲಿ ಅಗಾಧವಾದ ಸಂಘಟನೆ ಹಾಗೂ ಹೋರಾಟದ ಮೂಲಕ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ರಚನೆ ಮಾಡಲು ಟೊಂಕ ಕಟ್ಟಿ ಯಶಸ್ವಿಯಾದ ಫಲವಾಗಿ, ಇಂದು ಮಹದೇಶ್ವರ ಬೆಟ್ಟ ಅಭೂತಪೂರ್ವ ಅಭಿವೃದ್ಧಿ ಕಂಡು ಲಕ್ಷಾಂತರ ಭಕ್ತರು ನೆಮ್ಮದಿಯಿಂದ ಮಾದಪ್ಪನ ದರ್ಶನ ಮಾಡುತ್ತಾರೆ, ಇದರ ಜೊತೆಗೆ ಅಲ್ಲಿ ಕೋಟ್ಯಂತರ ರೂಪಾಯಿ ಆದಾಯ ಹರಿದು ಬಂದು ಇನ್ನಷ್ಟು ಮೂಲಸೌಕರ್ಯ ಹಾಗು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.

ಅಂತೆಯೇ ಮಲೆ ಮಹದೇಶ್ವರ ಬೆಟ್ಟದ ಮಾದರಿ ಕುಂಬಾರಕೊಪ್ಪಲಿನ ಮಹದೇಶ್ವರ ದೇವಾಲಯವನ್ನು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಅವಿರತ ಶ್ರಮಿಸುತ್ತಿರುವ ಇವರು ಅದರ ಸಂಕಲ್ಪ ಸಿದ್ಧಿಗಾಗಿ ಊರಿನ ಸಮಾನ ಮನಸ್ಕರು ಹಾಗೂ ಮುಖಂಡರಿಗೆ ಪ್ರೇರಣೆ ಕೊಟ್ಟು ಊರಿನ ಸಹಕಾರದಿಂದ ಎರಡು ಪ್ರಮುಖ ಆದಾಯ ಮೂಲಗಳಾದ ಮಹದೇಶ್ವರ ಸಮುದಾಯ ಭವನ ಹಾಗು ಬಸವ ಸಮುದಾಯ ಭವನ ನಿರ್ಮಿಸಿ ಊರಿಗೆ ಹತ್ತಾರು ಲಕ್ಷ ಆದಾಯ ಬರಲು ಕಾರಣಕರ್ತರಾಗಿದ್ದಾರೆ. ಹಾಗಿದ್ದರೂ, ಹುಟ್ಟು ಹೋರಾಟಗಾರರಾದ ಇವರು ನಿರಂತರವಾಗಿ ಸಮಾಜದ ಹಾಗೂ ಊರಿನ ಸೇವಾಕಾರ್ಯಗಳಲ್ಲಿ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರ ಭಾರತೀಯ ಜನತಾ ಪಕ್ಷ ಉಪಾಧ್ಯಕ್ಷ ಕುಮಾರ್ ಗೌಡ. ಪಟೇಲ್ ನಾಗರಾಜು, ರಾಜು. ನವೀನ್, ಚೆಲುವೇಗೌಡರು, ಮಂಜುಗೌಡ, ಗಾವನಳ್ಳಿ ದಿನೇಶ್, ಆದರ್ಶ್, ಗಣೇಶ್, ಪಟ್ಟಾಭಿ, ಸಿದ್ದೇಗೌಡ, ಭರತ್, ಪ್ರವೀಣ್ ಎಲ್ಲರೂ ಅಭಿನಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು